ಗದಗ ಜವಳಗಲ್ಲಿಯ ರಾಜಕಾಲುವೆಯಿಂದ ನೀರಿನ ಪೈಪ್ಲೈನ್ ಸ್ಥಳಾಂತರಿಸುತ್ತಿರವುದು.
ನಗರದ ಹೃದಯಭಾಗದ ಜವಳಗಲ್ಲಿಯಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದ ರಾಜಕಾಲುವೆ ಒಳಗೆ ಅಳವಡಿಸಿದ್ದ ನೀರಿನ ಪೈಪ್ಲೈನ್ ಸ್ಥಳಾಂತರ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದ್ದು , ಇದರಿಂದ ಇಲ್ಲಿನ ಜನರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಜವಳಗಲ್ಲಿಯ ರಾಜಕಾಲುವೆಯಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗಿತ್ತು. ನೀರಿನ ಪೈಪ್ಲೈನ್ ನಲ್ಲಿ ಮಲೀನಗೊಂಡ ಚರಂಡಿ ನೀರು ಜನರಿಗೆ ಪೂರೈಕೆಯಾಗಿ ಇಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಇಲ್ಲಿನ ಜನರು ಹಲವು ಬಾರಿ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ನಗರಸಭೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ$್ಯ ವಹಿಸಿದ್ದವು. ಸಚಿವ ಎಚ್.ಕೆ. ಪಾಟೀಲ ಗನಕ್ಕೆ ಬಂದ ನಂತರ ಪೈಪ್ಲೈನ್ ಸ್ಥಳಾಂತರ ಕೆಲಸಕ್ಕೆ ಚಾಲನೆ ದೊರೆತಿದೆ.
ತ್ಯಾಜ್ಯ ಸ್ಥಳಾಂತರಿಸಲು ಆಗ್ರಹ:
ನೀರಿನ ಪೈಪ್ಲೈನ್ ಸೂಕ್ತ ಜಾಗಕ್ಕೆ ಸ್ಥಳಾಂತರಿಸುತ್ತಿರುವ ನಗರಸಭೆಯು ಇಲ್ಲಿನ ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜಕಾಲುವೆ ಪಕ್ಕದಲ್ಲೇ ಕೋಳಿ ಮಾರುಕಟ್ಟೆ ಇರುವ ಕಾರಣದಿಂದ ರಕ್ತ ಮತ್ತು ಮಾಂಸದ ತ್ಯಾಜ್ಯವನ್ನು ನೇರವಾಗಿ ಕಾಲುವೆಗೆ ಎಸೆಯಲಾಗುತ್ತಿದೆ. ಈ ಪ್ರಕ್ರಿಯೆ ಇಲ್ಲಿನ ಇಡೀ ಪ್ರದೇಶವನ್ನು ರೋಗಗಳ ತಾಣವನ್ನಾಗಿ ಮಾಡುತ್ತಿದೆ. ಕೂಡಲೇ ಈ ತ್ಯಾಜ್ಯವನ್ನು ಜನವಸತಿ ಇಲ್ಲದ ದೂರದ ಜಾಗದಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಆದೇಶಿಸಬೇಕು. ರಾಜಕಾಲುವೆ ಪಕ್ಕದ ರಸ್ತೆಯ ಮಣ್ಣು ಕುಸಿಯುತ್ತಿದ್ದು, ಪ್ರತಿದಿನ ಸಂಚರಿಸುವ ಶಾಲಾ ಮಕ್ಕಳು ಹಾಗೂ ಜನಸಾಮಾನ್ಯರಿಗೆ ಇದು ಮೃತ್ಯುಕೂಪವಾಗಿ ಪರಿಣಮಿಸಿದೆ. ಪೈಪ್ಲೈನ್ ಸ್ಥಳಾಂತರದ ನಂತರ ಈ ರಸ್ತೆಯನ್ನು ವೈಜ್ಞಾನಿಕವಾಗಿ ದುರಸ್ತಿಗೊಳಿಸಿ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜನರು ಆಗ್ರಹಿಸಿದ್ದಾರೆ. ರಾಜಕಾಲುವೆಯಲ್ಲಿ ಕಸ ಎಸೆಯುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ನಗರಸಭೆ ಈ ಭಾಗದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜನರು ಒತ್ತಾಯಿದ್ದಾರೆ.
ಜವಳಿ ಗಲ್ಲಿಯ ರಾಜಕಾಲುವೆ ಅಂತಹ ದುರ್ಗಮ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ನಿಂದ ಗಂಭೀರ ಸಮಸ್ಯೆಯನ್ನು ನಗರಸಭೆ ಗಮನಕ್ಕೆ ತರಲಾಗಿತ್ತು. ಸಾರ್ವಜನಿಕರ ಆರೋಗ್ಯದ ದೃಸ್ಟಿಯಿಂದ ಮನವಿಗೆ ಜಿಲ್ಲಾಡಳಿತ ಸ್ಪಂಧಿಸಿದೆ.
ಕೃಷ್ಣಾ ಹಡಪದ, ಸಾಮಾಜಿಕ ಕಾರ್ಯಕರ್ತ