ನಾಟಕಕಾರ ಗಗನ್ ಪ್ರಸಾದ್ ಆಯ್ಕೆ 
ರಾಜ್ಯ

ಇಂಡೋನೇಷ್ಯಾದಲ್ಲಿ ಅಂತಾರಾಷ್ಟ್ರೀಯ ಗೊಂಬೆಯಾಟ ಉತ್ಸವಕ್ಕೆ ಭಾರತದಿಂದ ಗಗನ್ ಪ್ರಸಾದ್ ಆಯ್ಕೆ- Gagan Prasad Selected

ಬೆಂಗಳೂರು: ಇಂಡೋನೇಷ್ಯಾದ ಯೋಗಕರ್ತಾದಲ್ಲಿ ಸೆ.25ರಿಂದ ಅ.11ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಗೊಂಬೆಯಾಟ ಉತ್ಸವಕ್ಕೆ ಭಾರತದಿಂದ ರಂಗಕರ್ಮಿ ಮತ್ತು ನಾಟಕಕಾರ ಗಗನ್ ಪ್ರಸಾದ್ ಪ್ರತಿನಿಧಿಸಲಿದ್ದಾರೆ.
ಅಂತಾರಾಷ್ಟ್ರೀಯ ಮುಕ್ತ ಆಹ್ವಾನದ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಗತ್ತಿನಾದ್ಯಂತ ಆಯ್ಕೆಯಾದ 12 ಕಲಾವಿದರಲ್ಲಿ ಕನ್ನಡಿಗ ಗಗನ್ ಪ್ರಸಾದ್ ಒಬ್ಬರು. 
ಟಾಮ್ ಲೀ ಅವರ ಮಾಸ್ಟರ್‌ಕ್ಲಾಸ್-ಪಪಿಟ್ ಕ್ಯಾಂಪ್ ಶಾಂಕ್ ಮೇರ್’ ಕಾರ್ಯಕ್ರಮದಲ್ಲಿ ಗಗನ್ ಪ್ರಸಾದ್ ಭಾಗವಹಿಸಲಿದ್ದಾರೆ.ಜಪಾನಿನ ಗೊಂಬೆಯಾಟ ತಂತ್ರಗಳ ಕುರಿತು ಸಹಯೋಗಾತ್ಮಕ ತರಬೇತಿ ಪಡೆಯಲಿರುವ ಅವರು, ಪಪಿಟ್ ಕ್ಯಾಂಪ್ ಹಾಗೂ ಅಭ್ಯಾಸ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಅಮೆರಿಕ ಮತ್ತು ಜಪಾನ್‌ನ ಪಪಿಟ್ ಕ್ಯಾಂಪ್ ಸಹಯೋಗದಲ್ಲಿ ‘ಶಾಂಕ್ ಮೇರ್’ ಪ್ರದರ್ಶನ ನೀಡಲಿದ್ದಾರೆ.ವಿವಿಧ ದೇಶಗಳ ಕಲಾವಿದರನ್ನು ಒಂದೇ ವೇದಿಕೆಗೆ ತರುವ ಈ ಕಾರ್ಯಕ್ರಮವು ಸಾಂಸ್ಕೃತಿಕ ಹಾಗೂ ಕಲಾತ್ಮಕ ವಿನಿಮಯಕ್ಕೆ ಅವಕಾಶ ಕಲ್ಪಿಸಲಿದೆ. ಕಲಾವಿದರು ಪರಸ್ಪರ ಜ್ಞಾನ, ಅನುಭವ ಹಂಚಿಕೊಳ್ಳುವ ಮೂಲಕ ತಮ್ಮ ಸಮುದಾಯಗಳಲ್ಲಿ ಗೊಂಬೆಯಾಟದ ಮತ್ತಷ್ಟು ಕಲಾತ್ಮಕ ಬೆಳವಣಿಗೆಗೆ ಕೊಡುಗೆ ನೀಡಲಿದ್ದಾರೆ.