ಗಡಿ ಕನ್ನಡ ಶಿಕ್ಷಕರಿಗೆ ಮರಾಠಿ ಪರೀಕ್ಷೆ ಶಿಕ್ಷೆ 
ರಾಜ್ಯ

ಗಡಿ ಕನ್ನಡ ಶಿಕ್ಷಕರಿಗೆ ಮರಾಠಿ ಪರೀಕ್ಷೆ ಶಿಕ್ಷೆ!

ಪ್ರಮುಖ ಮುಖ್ಯಾಂಶಗಳು

  • ಗಡಿ ಕನ್ನಡ ಶಿಕ್ಷಕರಿಗೆ ಮರಾಠಿ ಪರೀಕ್ಷೆ ಶಿಕ್ಷೆ
  • ಟಿಇಟಿ ಮರಾಠಿ ಭಾಷೆಯಲ್ಲಿ ಬರೆಯಬೇಕೆಂಬ ನಿಯಮದಿಂದ ಆಘಾತ
  • ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗೆ ಒತ್ತಾಯ
  • ಮಹಾರಾಷ್ಟ್ರದ ನಿಯಮದಿಂದ ನೌಕರಿ ಕಳೆದುಕೊಳ್ಳುವ ಭೀತಿ
ಕನ್ನಡ ಶಿಕ್ಷಕರಿಗೆ ಮರಾಠಿ ಶಿಕ್ಷೆ!
| ಗಡಿ ಕನ್ನಡಿಗರಿಗೆ ನೌಕರಿ ಕಳೆದುಕೊಳ್ಳುವ ಭೀತಿ
| ಮಹಾರಾಷ್ಟ್ರ ಸರ್ಕಾರ ನಿಯಮದಿಂದ ಆಘಾತ
ಆನಂದ ಭಮ್ಮನ್ನವರ ಚಿಕ್ಕೋಡಿ:
`ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಆಯಾ ಅಭ್ಯರ್ಥಿಗಳ ಮಾತೃಭಾಷೆಯಲ್ಲಿಯೇ ನಡೆಸಬೇಕು' ಎಂಬ ರಾಷ್ಟ್ರೀಯ
ಶಿಕ್ಷಕರ ಶಿಕ್ಷಣ ಮಂಡಳಿ(ಎನ್‌ಸಿಟಿ) ನಿಯಮ. ಆದರೆ, ಮಹಾರಾಷ್ಟ್ರ ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರಿಗೆ ಮಾತ್ರ ಮರಾಠಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು ಎಂಬ ನಿಯಮ ಸಂಕಷ್ಟ ತಂದೊಡ್ಡಿದ್ದರೆ, ಶಿಕ್ಷಕರಾಗಲು ಬಯಸುವ ಕನ್ನಡ ಭಾಷಿಕರ ಆಸೆಗೆ ತಣ್ಣೀರೆರಚುತ್ತಿದೆ.
ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ ಜಿಲ್ಲೆ ವ್ಯಾಪ್ತಿಯ ಪ್ರದೇಶಗಳಲ್ಲಿ ಶೇ.50 ರಿಂದ ಶೇ.90ರಷ್ಟು ಜನರು ಕನ್ನಡ ಭಾಷೆ ಮಾತನಾಡುವವರಿದ್ದಾರೆ. ಮಹಾರಾಷ್ಟ್ರದ ಗಡಿಭಾಗದಲ್ಲಿ ಒಟ್ಟು 377 ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಮಹಾರಾಷ್ಟ್ರ ಸರ್ಕಾರ ಒತ್ತಾಯಪೂರ್ವಕವಾಗಿ ಮರಾಠಿ ಭಾಷೆ ಹೇರಲು ಮುಂದಾಗಿರುವುದು ಗಡಿಕನ್ನಡಗರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಕಷ್ಟದಲ್ಲಿ ಸಾವಿರ ಶಿಕ್ಷಕರು:
ಮಹಾರಾಷ್ಟçದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಭಾಷಿಕ ಶಿಕ್ಷಕರು ಸುಪ್ರೀಂ ಕೋರ್ಟ್ 2027ರೊಳಗಾಗಿ ಟಿಇಟಿ ಪರೀಕ್ಷೆ ತೇರ್ಗಡೆಯಾಗಬೇಕಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಟಿಇಟಿ ಪರೀಕ್ಷೆಯನ್ನು ಮರಾಠಿ ಭಾಷೆಯಲ್ಲಿ ಬಳಸದೆ ಮರಾಠಿ ಬಾರದ ಕನ್ನಡ ಶಿಕ್ಷಕರ ಪರೀಕ್ಷೆಯನ್ನು ತೆಗೆದುಕೊಳ್ಳಲಾಗಿದೆ ಪಾಸಾಗಲು ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೆ 1 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ 60 ಶಿಕ್ಷಕರು ಮಾತ್ರ ಟಿಇಟಿ ಪಾಸಾಗಿದ್ದಾರೆ. ಇನ್ನುಳಿದವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮಾತೃಭಾಷೆಯಲ್ಲಿ ಅವಕಾಶ ಬೇಕು:
ಗಡಿ ಭಾಗದಲ್ಲಿನ ಕನ್ನಡ ಶಾಲೆಯ ಶಿಕ್ಷಕರಿಗೆ ಸರ್ಕಾರ ಮರಾಠಿ ಭಾಷೆಗೆ ಬದಲಾಗಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಅಲ್ಲಿ ಕನ್ನಡ ಭಾಷಿಕ ಶಿಕ್ಷಕರು ಬಹು ದಿನಗಳ ಒತ್ತಾಯ. ಆಯಾ ಅಭ್ಯರ್ಥಿಗಳ ಮಾತೃಭಾಷೆಯಲ್ಲೇ ಟಿಇಟಿ ಪರೀಕ್ಷೆ ಬರೆಯಬೇಕೆಂಬ ಎನ್‌ಸಿಟಿಇ ನಿಯಮವಿದ್ದರೂ ಮಹಾರಾಷ್ಟ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಗಡಿಕನ್ನಡ ಭಾಷಿಕ ಸಂಘದ ಸದಸ್ಯರು ಪ್ರತಿಭಟನೆ ಆರಂಭಿಸಿದ್ದಾರೆ.
ಶಾಲೆ ಮುಚ್ಚುವ ಭೀತಿ:
ಮಹಾರಾಷ್ಟ್ರ ಸರ್ಕಾರ ಇದೇ ಧೋರಣೆ ಮುಂದುವರಿಸಿದರೆ ಕನ್ನಡ ಶಿಕ್ಷಕರ ಟಿಇಟಿ ಪರೀಕ್ಷೆ ಪಾಸಾಗದ ಕಾರಣಕ್ಕೆ ನೌಕರಿ ಕಳೆದುಕೊಳ್ಳುತ್ತಾರೆ. ಇದನ್ನೇ ನೆಪ ಮಾಡಿಕೊಂಡು ಮಹಾರಾಷ್ಟ್ರ ಸರ್ಕಾರ ಕನ್ನಡ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಗಡಿಕನ್ನಡಿಗರ ಆರೋಪ. ಆದ್ದರಿಂದ, ಕರ್ನಾಟಕ ಸರ್ಕಾರವು ತುರ್ತು ಗಮನ ಹರಿಸುವ ಮೂಲಕ ಅಲ್ಲಿನ ಶಿಕ್ಷಕರು ಮತ್ತು 44,860 ವಿದ್ಯಾರ್ಥಿಗಳ ಹಕ್ಕು ರಕ್ಷಣೆಗೆ ಮುಂದಾಗಬೇಕು ಎಂಬ ಕೂಗು ಕೇಳಿ ಬರುತ್ತಿದೆ.
--------------
ಬಾಕ್ಸ್-೧
ಕರ್ನಾಟಕದ ಪತ್ರಕ್ಕೂ ಸ್ಪಂದನೆ ಇಲ್ಲ:
ಭಾಷಾ ಸಾಮರಸ್ಯ ಮತ್ತು ಶೈಕ್ಷಣಿಕ ಕಲ್ಯಾಣ ಉದ್ದೇಶದಿಂದ ಕರ್ನಾಟಕದಲ್ಲಿ ಮರಾಠಿ ಅಭ್ಯರ್ಥಿಗಳಿಗೆ ಮರಾಠಿ ಮಾಧ್ಯಮದಲ್ಲೇ ಟಿಇಟಿ ಪರೀಕ್ಷೆ ನಡೆಸುತ್ತಿದೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ಶಿಕ್ಷಕರಿಗೂ ಸೌಲಭ್ಯ ವಿಸ್ತರಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ೨೦೨೬ರ ಏಪ್ರಿಲ್‌ನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ.
----------------
ಕೋಟ್-
ಟಿಇಟಿ ಪರೀಕ್ಷೆ ಮರಾಠಿ ಭಾಷೆಯಲ್ಲೇ ಬರೆಯಬೇಕೆಂಬ ಮಹಾರಾಷ್ಟ್ರ ಸರ್ಕಾರದ ಧೋರಣೆ ಖಂಡನೀಯ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ನಿಯಮವಿದ್ದರೂ ಕನ್ನಡ ಭಾಷೆಗೆ ಅವಕಾಶ ನೀಡದೆ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ.
| ಮಲಿಕಜಾನ್ ಶೇಖ್
ಶಿಕ್ಷಕ ಹಾಗೂ ಅಧ್ಯಕ್ಷ, ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ
---------------