ಹತ್ತಿರದ ಬಿಂಕದಕಟ್ಟಿ, ಅಸೂಂಡಿ ಗ್ರಾಮದಲ್ಲೂ ಪ್ರಾಣಿಗಳಿಗೆ ವ್ಯಾಕ್ಸಿನ್
ಬೆಳಗಾವಿ ಚೆನ್ನಮ್ಮ ಮೃಗಾಲಯದಲ್ಲಿ ಸೋಂಕಿನಿಂದ ಕೃಷ್ಣ ಮೃಗಗಳ ಸಾವು ಪ್ರಕರಣ ರಾಜ್ಯಾದ್ಯಾಂತ ಚರ್ಚೆಗೆ ಗ್ರಾಸವಾದ ಬೆನ್ನಲ್ಲೆ ನಗರದ ಬಿಂಕದಕಟ್ಟಿಯ ಪ್ರಾಣಿ ಸಂಗ್ರಹಾಲಯದಲ್ಲೂ ಕೂಡ ಇಲ್ಲಿನ ಸರಣ್ಯ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಕೃಷ್ಣ ಮೃಗಗಳು ಮತ್ತು ಅದರ ಪ್ರಜಾತಿಯ ಪ್ರಾಣಿ ರಕ್ಷಣೆಗೆ ಅರಣ್ಯ ಅಧಿಕಾರಿಗಳು ಸೂಕ್ಷ$್ಮತೆ ಹಾಗೂ ತುರ್ತು ಕ್ರಮ ಕೈಗೊಂಡಿದ್ದು, ಪ್ರಾಣಿಗಳು ಸೋಂಕಿಗೆ ತಾಗದ ಹಾಗೆ ಸ್ಯಾನಿಟೈಸ್ ಜತೆಗೆ ವಿಶೇಷ ಕ್ರಮಗಳನ್ನು ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಬೆಳಗಾವಿ ಪ್ರಾಣಿ ಸಂಗ್ರಹಾಲಯದಲ್ಲಿ ಹ್ಯುಮೋರೆಜಿಕ್ ಸೆಪ್ಟಿಸಿಮಿಯಾ ಖಾಯಿಲೆಯಿಂದ 10ಕ್ಕೂ ಅಧಿಕ ಕೃಷ್ಣ ಮೃಗಗಳು ಸಾವನ್ನಪ್ಪಿದ್ದವು. ವಾತಾರಣದಲ್ಲಿ ಬದಲಾವಣೆ, ಪ್ರಾಣಿಗಳ ಸ್ಥಳಾಂತರ ಮತ್ತು ಇತರೆ ದನ ಕರು ಹಸುಗಳಿಂದ ಈ ಖಾಯಿಲೆ ಹರುಡುವುದರಿಂದ ಈ ಮರಗಗಳನ್ನು ಸಾನ್ನಪ್ಪಿರಬಹುದು ಎಂದು ಪ್ರಾಣಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದೇ ಮಾದರಿಯಲ್ಲಿ ಗದಗ ಪ್ರಾಣಿ ಸಂಗ್ರಹಾಲಯದಲ್ಲಿ ಕೃಷ್ಣ ಮತ್ತು ಅದರ ಪ್ರಜಾತಿಯ ಜಿಂಕೆ, ನೀಲಗಾಯಿ ಹಾಗೂ ಸಾಂಬಾರ್ ಪ್ರಾಣಿಗಳನ್ನು ಸೂಕ್ಷ$್ಮತೆಯಿಂದ ಗಮನಿಸಲಾಗುತ್ತಿದೆ. ಜತೆಗೆ ಪ್ರಾಣಿ ಸಂಗ್ರಹಾಲಯದಲ್ಲಿ ಇತರೆ ಸಾಕು ಪ್ರಾಣಿಗಳು ಒಳ ಬರದಂತೆ ಮುತುವಜಿರ್ ವಹಿಸಲಾಗುತ್ತಿದೆ. ಕಳೆದ ನ.13ರಿಂದಲೂ ಪ್ರಾಣಿ ಸಂಗ್ರಹಾಲಯದ ನಿಧಿರ್ಷ್ಠ ಪ್ರದೇಶದಲ್ಲಿ ನಿರಂತರ ಸ್ಯಾನಿಟೈಸ್ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
ಕೃಷ್ಣ ಮೃಗ ಮತ್ತು ಅದ ಪ್ರಜಾತಿಯ ವನ್ಯಜಿವಿಗಳು ಅತೀ ಸೂಕ್ಷ ಜೀವಿಗಳಾಗಿವೆ. ಚುಚ್ಚುಮದ್ದು ಮತ್ತು ವ್ಯಾಕ್ಸಿನ್ಗಳಂತಹ ಬಲವಂತದ ಪ್ರಕ್ರಿಯೆಗಳನ್ನು ಈ ಪ್ರಾಣಿಗಳ ಮೇಲೆ ಕೈಗೊಳ್ಳಲು ಸಾಧ್ಯವಿಲ್ಲ. ಅತೀ ಭಯಬೀಳುವ ಈ ಪ್ರಜಾತಿಗಳಿಗೆ ಮನುಷ್ಯನ ಹತ್ತಿರದಿಂದ ಹೃದಯಾಗಾತ ಆಗುವ ಸಂಭವ ಹೆಚ್ಚಾಗಿದ್ದರಿಂದ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಪರ್ಕ ವಹಿಸದೇ ಸ್ಯಾನಿಟೈಸ್ ಮೂಲಕವೇ ಕೃಷ್ಣ ಮೃಗಗಳ ಕ್ಷಣೆಗೆ ಮುಂದಾಗಿದ್ದಾರೆ.
ಹ್ಯುಮೋರೆಜಿಕ್ ಸೆಪ್ಟಿಸಿಮಿಯಾ ಎಂಬ ಖಾಯಿಲೆ ಅಧಿಕವಾಗಿ ದನ, ಕರು ಮತ್ತು ಹಸುಗಳಲ್ಲಿ ಕಾಣುವ ಕಾಯಿಲೆ ಆಗಿದೆ. ಈ ಖಾಯಿಲೆಯಿಂದ 24 ಗಂಟೆ ಒಳಗಾಗಿ ಪ್ರಾಣಿಗಳು ಸಾವನ್ನಪ್ಪಬಹುದು. ಹಾಗಾಗಿ ಬಿಂಕದಕಟ್ಟಿ ಮೃಗಾಲಯದ ಸಮೀಪ ಇರುವ ಬಿಂಕದಕಟ್ಟಿ ಮತ್ತು ಅಸೂಂಡಿ ಗ್ರಾಮಗಳಲ್ಲಿನ ದನಕರು ಮತ್ತು ಹಸುಗಳಿಗೂ ವ್ಯಾಕ್ಸಿನ್ ನೀಡುವ ಪ್ರಕ್ರಿಯು ಅರಣ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ.
ಕೃಷ್ಣ ಮೃಗ ಮತ್ತು ಇತರೆ ಪ್ರಾಣಿಗಳಲ್ಲಿ ಹ್ಯುಮೋರೆಜಿಕ್ ಸೆಪ್ಟಿಸಿಮಿಯಾ ಎಂಬ ಖಾಯಿಲೆ ಬಂದಿರುವುದು ಬೇಗನೇ ತಿಳಿದುಕೊಳ್ಳುವುದು ಅಸಾಧ್ಯ. ಇದರಿಂದ ಪ್ರಾಣಿಗಳ ಸಾವು ಸಂಭವಿಸಬಹುದು. ಹಾಗಾಗಿ, ಕೃಷ್ಣಮೃಗವೂ ಸೇರಿದಂತೆ ಮೃಗಾಲಯದಲ್ಲಿನ ಪ್ರಾಣಿಗಳ ಮೇಲೆ 24 ಗಂಟೆಗಳ ಕಾಲ ನಿರಂತರ ನಿಗಾ ವಹಿಸಲಾಗುತ್ತಿದೆ. ಪ್ರಾಣಿ ಸಂಗ್ರಹಾಲಯದ ಪಕ್ಕದ ಬಿಂಕದಕಟ್ಟಿ ಮತ್ತು ಅಸೂಂಡಿ ಗ್ರಾಮದಲ್ಲಿನ ದನಕರುಗಳಿಗೂ ವ್ಯಾಕ್ಸಿನ್ ನೀಡಲು ಪಶು ಸಂಗೋಪನೆ ಇಲಾಖೆಗೆ ಸೂಚಿಸಲಾಗಿದೆ.
ಸಂತೋಷ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ
ದನ ಕರುಗಳಿಗೆ ವ್ಯಾಕ್ಸಿನ್ ನೀಡುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಆಗಿದೆ. ಈ ಬಗ್ಗೆ ತುರ್ತು ಕ್ರಮಕೈಗೊಳ್ಳಲಾಗುವುದು.
ಹುಲಗನ್ನವರ, ಸಹಾಯಕ ನಿರ್ದೇಶಕ, ಪಶುಸಂಗೋಪನಾ ಇಲಾಖೆ, ಗದಗ
* ಪ್ರಾಣಿ ಸಂಗ್ರಹಾಲಯದಲ್ಲಿ ನಿರಂತರ ಸ್ಯಾನಿಟೈಸ್
* ಕೃಷ್ಣಮೃಗಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ
* ಇತರೆ ಪ್ರಾಣಿಗಳ ಸಂಪರ್ಕದಿಂದ ದೂರ ಇರಿಸುವುದು.
* ವೈದ್ಯರಿಂದ ನಿರಂತರ ನಿಗಾ ಇರಿಸುವುದು.
* ಸಾಕಷ್ಟು ಪ್ರಮಾಣದಲ್ಲಿ ಔಷಧ ಮತ್ತು ವ್ಯಾಕ್ಸಿನ್ ಸಂಗ್ರಹ