ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಉಭಯ ಶ್ರೀಗಳ ಜಾತ್ರಾ ಮಹೋತ್ಸವದಲ್ಲಿ ಧಾರವಾಡ ಮುರುಘಾಮಠದ ಶ್ರೀಗಳು ಮಾತನಾಡಿದರು. ಬಿ. ಆರ್. ಪಾಟೀಲ, ಡಾ. ಆನಂದ ಪಾಡುರಂಗಿ, ಅಭಿನವ ಪಂಚಾರ ಶ್ರೀಗಳು, ಅಭಿವನ ಶಿವಲಿಂಗ ಶ್ರೀಗಳು, ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಎಂ. ಕಲ್ಲಿನಾಥ ಶಾಸ್ತ್ರೀಗಳು ಹಲವರು ಇದ್ದರು.
ಭೂಮಿಯ ಮೇಲೆ ಯಾರಾದರೂ ಅದ್ಬುತ ರತ್ನಗಳು ಇದ್ದರೆ ಅವರು ಲಿಂ. ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳುವರು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪಂಚಾರಿ ಗವಾಯಿಗಳವರ 82ನೇ ಹಾಗೂ ಲಿಂ. ಪಂ.ಡಾ. ಪುಟ್ಟರಾಜ ಕವಿ ಗವಾಯಿಗಳವರ 16ನೇ ಪುಣ್ಯ ಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ ಅಧ್ಯತೆ ವಹಿಸಿ ಮಾತನಾಡಿದ ಅವರು, ಜನರಿಗಾಗಿ ಬದುಕುವವರು ಮತ್ತು ಆತ್ಮ ಸಂತೋಷಕ್ಕಾಗಿ ಬದುಕುವವರು ಇದ್ದಾರೆ. ಆದರೆ ಉಭಯ ಗುರುಗಳು ಜನರಿಗಾಗಿ ಮತ್ತು ಆತ್ಮ ಸಂತೋಷಕ್ಕಾಗಿ ಬದುಕಿ ತೋರಿಸಿದ್ದಾರೆ. ನಾಡಿನಾಧ್ಯಂತ ಜಾತ್ರೆಗಳಲ್ಲಿ ಲಗಟ್ಟಲೆ ಜನರು ಸೇರುತ್ತಾರೆ. ಆದರೆ, ಗದುಗಿನ ಉಭಯ ಗುರುಗಳ ಜಾತ್ರೆಯಲ್ಲಿ ಬರಿ ಜನರಷ್ಟೆ ಅಲ್ಲ ಇಲ್ಲಿ ಸೇರಿದ ಭಕ್ತರಿಗಾಗಿ ಜ್ಞಾನ ದಾಸೋಹ, ಅನ್ನ ದಾಸೋಹ ನಡೆಯುತ್ತಿರುವದು ವಿರಳ ಎಂದು ಹೇಳಿದರು.
ಬಳಗಾನೂರ ಮಠದ ಶಿವಶಾಂತವೀರ ಶರಣರು ಮಾತನಾಡಿ, ಉಭಯ ಗುರುಗಳು ನಾಡಿನಾದ್ಯಂತ ಸಂಗೀತ, ಸಾಹಿತ್ಯ, ಕಲೆಯನ್ನು ಶಿಖರದ ಎತ್ತರಕ್ಕೆ ಬೆಳಸಿದ್ದಾರೆ. ಅಧುನಿಕ ವಚನಕಾರರಲ್ಲಿ ಪುಟ್ಟರಾಜರ ವಚನ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ. ಅವರ ಜೀವನ ಪದ್ಧತಿ ನಮಗೆಲ್ಲ ಆದರ್ಶ ಆಗಬೇಕು ಎಂದು ಹೇಳಿದರು.
ಮಾದನ ಹಿಪ್ಪರಗಿ ವಿರಕ್ತಮಠದ ಅಭಿನವ ಶಿವಲಿಂಗ ಶ್ರೀಗಳು ಮಾತನಾಡಿ, ನಾವೇಲ್ಲರೂ ಶಿವಯೋಗ ಮಂದಿರದ ಹೂವುಗಳು. ನಾಡಿನಾದ್ಯಂತ ಇರುವ ಇರುವ ಶ್ರೀಗಳಿಗೆ ಶಿವಯೋಗ ಮಂದಿರ ಪಾಠಶಾಲೆಯಾದರೆ, ವಿರೇಶ್ವರ ಪುಣ್ಯಾಶ್ರಮ ಸಂಗೀತಗಾರರು, ಕೀರ್ತನಗಾರರು, ಕಲಾವಿದರನ್ನು ತಯಾರಿಸುವ ಟಂಕಸಾಲೆ ಆಗಿದೆ. ಶಿವಯೋಗ ಮಂದಿರ ಬಿಟ್ಟು ಆಶ್ರಮವಿಲ್ಲ, ಆಶ್ರಮ ಬಿಟ್ಟು ಶಿವಯೋಗ ಮಂದಿರವಿಲ್ಲ, 1914 ರಲ್ಲಿ ಪಂಚಾರಿ ಗವಾಯಿಗಳು ಮೊದಲ ಸಂಗೀತ ಪಾಠಶಾಲೆಯನ್ನು ನಿಡಗುಂದಿಕೊಪ್ಪದಲ್ಲಿ ಆರಂಭಿಸಿದರು. ಅದೇ ವರ್ಷ ಮಠದ ಉತ್ತರಾಧಿಕಾರಿ ಪಂ. ಪುಟ್ಟರಾಜ ಗವಾಯಿಗಳು ಜನ್ಮವಿತ್ತಿದ್ದು ಪವಾಡವೇ ಎನ್ನಬಹುದು ಎಂದರು.
ಜಿಲ್ಲಾ ವಾಣಿಜ್ಯೋಧ್ಯಮ ಅಧ್ಯ ರಾಜು ಗುಡಿಮನಿ ಮಾತನಾಡಿ, ಪಂ. ಪುಟ್ಟರಾಜ ಗವಾಯಿಗಳವರನ್ನು ನೋಡಿದ ನಾವೇ ಧನ್ಯರು. ಅವರಿಂದ ನಾವುಗಳು ಸಾಕಷ್ಟು ಕಲಿತ್ತಿದ್ದೇವೆ. ಇರುವ ಜೀವನದಲ್ಲಿ ಎಲ್ಲರೊಂದಿಗೆ ಬೆರೆತುಕೊಂಡು ಹೋಗುವದರಿಂದ ನೆಮ್ಮದಿ ಕಾಣಬಹುದು. ಮಠಕ್ಕೆ ಬಂದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ .ಬಿ. ಆರ್. ಪಾಟೀಲ, ಡಾ. ಆನಂದ ಪಾಡುರಂಗಿ, ಅಡ್ನೂರ ಬ್ರಹನ್ಮಠದ ಅಭಿನವ ಪಂಚಾರ ಶ್ರೀಗಳು ಸಮ್ಮುಖ ವಹಿಸಿದ್ದರು. ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಎಂ. ಕಲ್ಲಿನಾಥ ಶಾಸ್ತ್ರೀಗಳು ಹಲವರು ಇದ್ದರು.