Gadag 
ರಾಜ್ಯ

ಅಂಧರ, ವಿಕಲಚೇತನರ ಬದುಕಿಗೆ ಬೆಳಕಾದ ಪುಟ್ಟರಾಜರು: ಶರಣಬಸಪ್ಪ ಗುಡಿಮನಿ

ವಿಜಯವಾಣಿ ಸುದ್ದಿಜಾಲ ಗದಗ
ಪಂ. ಪುಟ್ಟರಾಜ ಕವಿ ಗವಾಯಿಗಳವರು ಅಂಧ, ಅನಾಥ, ವಿಕಲಚೇತನರ ಬದುಕಿಗೆ ಬೆಳಕಾಗಿ, ಭಕ್ತರ ಹೃದಯ ಮಂದಿರದಲ್ಲಿ ದೇವರಾಗಿ ಪೂಜಿತರಾದ ಪುಣ್ಯಾತ್ಮರಾಗಿದ್ದರು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯ ಶರಣಬಸಪ್ಪ ಗುಡಿಮನಿ ಹೇಳಿದರು.
ಮಂಗಳವಾರ ನಗರದ ವೀರಶೈವ ಮಹಾಸಭಾದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪುಟ್ಟರಾಜ ಗವಾಯಿಗಳವರ ಜಯಂತಿ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದರು.
ಗುರು ಪಂಚಾರ ಗವಾಯಿಗಳವರ ನೆಚ್ಚಿನ ಶಿಷ್ಯರಾಗಿದ್ದ ಪುಟ್ಟರಾಜರು ಗುರುವನ್ನು ಮೀರಿಸಿ ಸಾಧನೆ ಮಾಡಿದವರು. ಸಂಗೀತ ದಿಗ್ಗರಾಗಿದ್ದರು. ಕಣ್ಣಿಲ್ಲದಿದ್ದರೂ ಕಣ್ಣಿದ್ದವರು ಕಣ್ತೇರೆದು ಅಧ್ಯಯನ ಮಾಡುವಂತಹ ಅಪೂರ್ವವಾದ ಗ್ರಂಥಗಳನ್ನು ರಚಿಸಿದ ತ್ರಿಭಾಷಾ ಸಾಹಿತಿಗಳು, ತ್ರಿಕಾಲ ಪೂಜಾನಿಷ್ಠರಾಗಿದ್ದರು ಎಂದರು.
ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ ಅನಾಥ ಮಕ್ಕಳಿಗೆ ವ್ಯಕ್ತಿಗಳಿಗೆ ಉಚಿತ ವಸತಿ, ಅನ್ನ, ಶಿಣ ನೀಡುವ ಮೂಲಕ ಅವರು ಸಂಗೀತವನ್ನು ಕರಗತ ಮಾಡಿಕೊಂಡು ಸ್ವತಂತ್ರವಾಗಿ ಜೀವನ ನಡೆಸುವಂತೆ ಮಾಡಿದವರು. ಅಂತೆಯೇ ಸಾವಿರಾರು ಕಲಾವಿದರು ನಾಡಿನಲ್ಲಿ, ದೇಶ ವಿದೇಶಗಳಲ್ಲಿ ಶ್ರೇಷ್ಠ ಸಂಗೀತ ಕಲಾವಿದರಾಗಿದ್ದಾರೆ. ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.
ಸಿ.ಕೆ.ಕಡಣಿ ಶಾಸ್ತ್ರೀ, ವಿ.ಕೆ.ಗುರುಮಠ, ಎಸ್​.ಐ.ಯಾಳಗಿ, ಜಿ.ಎಸ್​.ಹಿರೇಮಠ, ರಾಜು ಕುರಡಗಿ ಇತರರು ಇದ್ದರು.