Gadag 
ರಾಜ್ಯ

ನಗರ "ಮಹಾಯೋಜನೆ'ಗೂ ಮುನ್ನವೇ 260 ಏಕರೆ ಭೂಬದಲಾವಣೆಗೆ ಪ್ರಯತ್ನ

ಶಿವಾನಂದ ಹಿರೇಮಠ
ನಗರಾಭಿವೃದ್ಧಿಯಲ್ಲಿ ಆತುರದ ಭೂ ಉಪಭೋಗ ಬದಲಾವಣೆ ಪ್ರಕ್ರಿಯೆ
ಶಿವಾನಂದ ಹಿರೇಮಠ ಗದಗ
ನಗರದಲ್ಲಿ ಸದ್ದಿಲ್ಲದೇ ಬೃಹತ್​ ಅಕ್ರಮವೊಂದು ಬೆಳಕಿಗೆ ಬಂದಿದೆ. ನಗರ "ಮಹಾಯೋಜನೆ' ಅನುಮೋದನೆಗೂ ಮುನ್ನವೇ 260 ಏಕರೆ ಜಮೀನನ್ನು ವಾಣಿಜ್ಯ, ವಸತಿ, ಶೈಕ್ಷಣಿಕ ಉಪ ಭೋಗಕ್ಕೆ ಬದಲಾವಣೆಗೆ ಮಾಡುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ. ಇಂತಹ ಆತುರದ ಪ್ರಕ್ರಿಯೆಗೆ ನಗರಾಭಿವೃದ್ಧಿ ಇಲಾಖೆ ಮುಂದಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜತೆಗೆ ಭೂ ಬದಲಾವಣೆ(ಸಿಎಲ್​ಯು) ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಅಂದಾಜು 260ಕ್ಕೂ ಅಧಿಕ ಎಕೆರೆ ಜಮೀನಿಗೆ ಸೂಕ್ತ ದಾಖಲೆಗಳಿಲ್ಲದೇ ಪೌರಾಡಳಿತ (ಯುಡಿಡಿ) ಇಲಾಖೆಗೆ ರವಾನಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ನಗರಾಭಿವೃದ್ಧಿಯಲ್ಲಿ ಕಾಣದ ಕೈಗಳು ಈ ಆತುರದ ಪ್ರಕ್ರಿಯೆಯಲ್ಲಿ ಕೈಜೋಡಿಸಿದ್ದು, ಮಹಾಯೋಜನೆಗೂ ಮುನ್ನವೇ ಭೂಉಪಭೋಗ ಬದಲಾವಣೆ ಮಾಡಿಕೊಳ್ಳಬಹುದು ಎಂದು ಪೌರಾಡಳಿತದಿಂದ ಆದೇಶ ಪಡೆಯಲು ಸಹ ಕಾಣದ ಕೈಗಳು ಯಶಸ್ಸಾಗಿವೆ.
ಏನಿದು ಮಹಾಯೋಜನೆ?
ದಿನೇ ದಿನೆ ಗದಗ ನಗರ ವ್ಯಾಪ್ತಿ ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ನಗರಾಭಿವೃದ್ಧಿ ಇಲಾಯು ನಗರದ ವ್ಯಾಪ್ತಿಯನ್ನು ಮಿತಿಗೊಳಿಸಿ, ಮಹಾಯೋಜನೆ (ನಗರದ ಮಾಸ್ಟ್​ ಪ್ಲಾ$್ಯನ್​) ಸಿದ್ಧಪಡಿಸಿ, ಅದರಂತೆ ಯೋಜನೆಯ ಅನುಮತಿಗಾಗಿ ಯುಡಿಡಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಒಂದು ಬಾರಿ ಮಹಾಯೋಜನೆ ಅನುಮೋದನೆ ನಂತರದ 5 ವರ್ಷಗಳ ಕಾಲ ನಗರಾಭಿವೃದ್ಧಿ ಇಲಾಖೆಯಿಂದ ಕೃಷಿ ವಲಯ ಭೂಮಿಯನ್ನು ಇತರೆ ಉಪಭೋಗಕ್ಕೆ (ಸಿಎಲ್​ಯು) ಭೂ ಬದಲಾವಣೆ/ ಭೂ ಪರಿವತಿರ್ಸಲು ಸಾಧ್ಯವಿಲ್ಲ. ಕಳೆದ 2005ರಲ್ಲಿ ನಗರದ ಮಾಸ್ಟರ್​ ಪ್ಲಾ$್ಯನ್​ ಗೆ ಅನುಮತಿ ನೀಡಲಾಗಿತ್ತು. 2005 ರಿಂದ ಈವರೆಗೆ ಗದಗ ನಗರ ಶೇ. 50ಕ್ಕೂ ಅಧಿಕ ವಿಸ್ತೀರ್ಣಗೊಂಡಿದೆ. ಹೋಗಾಗಿ ಮತ್ತೊಮ್ಮೆ ಮಾಸ್ಟರ್​ ಪ್ಲಾ$್ಯನ್​ ಸಿದ್ಧ ಪಡಿಸಿ ಪೌರಾಡಳಿತ ಇಲಾಖೆಗೆ ಅನುಮತಿಗಾಗಿ ಕಳಿಸಲು ಯೋಜಿಸಲಾಗಿತ್ತು. ಒಮ್ಮೆ ಅನುಮತಿ ಸಿಕ್ಕರೆ ಮುಂದಿನ 5 ವರ್ಷಗಳ ಕಾಲ ಭೂಉಪಭೋಗ ಬದಲಾವಣೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ತರಾತುರಿಯಲ್ಲಿ 260ಕ್ಕೂ ಅಧಿಕ ಎಕೆರೆ ಜಮೀನನ್ನು ಭೂಉಪಭೋಗ ಪರಿವರ್ತನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ. ಒಂದು ಏಕರೆ ಭೂ ಪರಿವರ್ತನೆಗೆ ಸರ್ಕಾರಿ ಖರ್ಚು 1.50 ಲಕ್ಷ ಹಿಡಿದು ಇತರೆ ಖರ್ಚು ಸೇರಿ ಒಟ್ಟು 8 ರಿಂದ 9 ಲಕ್ಷ ಖರ್ಚು ಖಾಸಗಿ ಡೆವಲಪರ್ಸ್​ಗಳು ಭರಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ 260 ಎಕೆರೆ ಭೂ ಪರಿವರ್ತನೆಗೆ 235 ಕೊಟಿಗೂ ಹೆಚ್ಚು ವೆಚ್ಚವನ್ನು ಭರಿಸಲಾಗುತ್ತಿದೆ ಎನ್ನಲಾಗುತ್ತಿದೆ ಎಂದು ತಿಳಿದು ಬಂದಿದೆ.
ಟಿಪಿಎಂ ಅನುಮತಿಯೇ ಇಲ್ಲ:
ಭೂ ಭದಲಾವಣೆ ಪ್ರಕ್ರಿಯೆಯಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿನ ಸರ್ಕಾರದಿಂದ ನಿಯೋಜಿತ ಟಿಪಿಎಂ (ಟೌನ್​ ಪ್ಲಾ$್ಯನಿಂಗ್​ ಮೆಂಬರ್​) ಅವರಿಂದ ದಾಖಲೆಗಳ ಪರಿಶೀಲನೆ, ಅನುಮೋದನೆಯೊಂದಿಗೆ ಭೂ ಬದಲಾವಣೆ ದಾಖಲೆಗಳು ಬೆಂಗಳೂರಿನ ಪೌರಾಡಳಿತ ಇಲಾಖೆಗೆ ಸಲ್ಲಿಕೆ ಆಗಬೇಕು. ಮೂಲಗಳ ಪ್ರಕಾರ ಟಿಪಿಎಂ ಅನುಮತಿ ಇಲ್ಲದೇ, ಸೂಕ್ತ ದಾಖಲೆಗಳನ್ನು ಲಗತ್ತಿಸದೇ ನಗರಾಭಿವೃದ್ಧಿ ಇಲಾಖೆಯಿಂದ ಆತುರವಾಗಿ ಪೌರಾಡಳಿತ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಕೆಲವು ಪ್ರಸ್ತಾವನೆಗಳಿಗೆ ಕೇವಲ ಪಹಣಿ ಲಗತ್ತಿಸಿ ಸಲ್ಲಿಸಲಾಗಿದೆ. ಭೂ ಉಪಭೋಗಕ್ಕೆ ಬೇಕಿರುವ ಸಭೆಯ ನಡವಳಿಗಳು, ಪತ್ರಿಕಾ ಪ್ರಕಟಣೆ ಪ್ರತಿ, ಮಹಾಯೋಜನೆ ಉದೃತ ಭಾಗ, ಗೂಗಲ್​ ನೆ, ಪಹಣಿ, 11ಇ ನೆ, ಮುಟೇಶನ, ಉಪವಿಭಾಗಾಧಿಕಾರಿಗಳಿಂದ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ಇರುವ 19 ದಾಖಲೆಗಳೇ ಕೆಲ ಪ್ರಸ್ತಾವನೆಗಳಿಗೆ ಲಗತ್ತಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ಬಾಕ್ಸ್​:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಸಭಾ ನಡಾವಳಿಗಳೇ ಅಂತಿಮ ಆಗಿರುತ್ತವೆ. ಯಾವುದೇ ನಿರ್ಣಗಳನ್ನು ಸಭೆಯ ಮೂಲಕವೇ ಕೈಗೊಂಡು ನಡಾವಳಿಗಳನ್ನು ಪುಸ್ತಕದಲ್ಲಿ ಬರೆದಿಡುವುದು ನಿಯಮ. ಸಭಾ ನಡಾವಳಿಯಂತೆಯೇ ಆಡಳಿತ ನಡೆಸಬೇಕು. ಭೂಉಪಭೋಗ ಬದಲಾವಣೆಗಳನ್ನು ಸಭಾ ನಡುವಳಿಗಳಲ್ಲೇ ನಿರ್ಣಯಿಸಬೇಕು. ಆದರೆ, ಗದಗ ನಗರಾಭಿವೃದ್ಧಿಯಲ್ಲಿ ಸಮಪರ್ಕಕವಾಗಿ ಸಭಾ ನಡಾವಳಿಗಳೇ ಜರುಗಿಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ತಿಳಿದು ಬಂದಿದೆ. ತನಿಖೆ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ.
ಕಾಣದ ಕೈಚಳಕ:
ಕಾನೂನಿನಲ್ಲಿರುವ ನ್ಯೂನ್ಯತೆಗಳನ್ನೇ ಬಳಸಿಕೊಂಡು ಬಂಡವಳ ಶಾಹಿಗಳು ಆತುರದಲ್ಲಿ ಭೂ ಉಪಭೋಗ ಬದಲಾವಣೆ ಪ್ರಕ್ರಿಯೆಗೆ ಮುಂದಾಗಿರುವುದು ಶಾಸಕ ಎಚ್​.ಕೆ. ಪಾಟೀಲ ಕೆಂಗೆಣ್ಣಿಗೆ ಗುರಿಯಾಗಿತ್ತು. ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಈ ಆತುರದ ಪ್ರಕ್ರಿಯೆಗೆ ಎಚ್​.ಕೆ. ಪಾಟೀಲರು ರ್ಪೂಣವಿರಾಮ ಇಟ್ಟಿದ್ದರು. ಆದರೆ, ಮಹಾಯೋಜನೆ (ಮಾಸ್ಟರ್​ ಪ್ಲಾ$್ಯನ್​ ) ಅನುಮೋದನೆಗೂ ಮುನ್ನವೇ ಭೂಉಪಭೋಗ ಬದಲಾವಣೆ ಮಾಡಿಕೊಳ್ಳಬಹುದು ಎಂದು ಪೌರಾಡಳಿತ ಇಲಾಖೆಯಿಂದ ಆದೇಶ ಪಡೆಯಲು ಪ್ರಭಾವಿಗಳು ಯಶಸ್ಸು ಕಂಡಿದ್ದಾರೆ.
ಕೋಟ್​:
ನಡಾಳಿಗಳ ಮೂಲಕವೇ ಕಾರ್ಯ ನಿರ್ವಹಿಸಲಾಗುತ್ತಿದೆ. ಯಾವುದೇ ನಿಯಮ ಬಾಹಿರ ಚಟುವಟಿಕೆಗಳು, ಕಾರ್ಯಗಳು ನಗಾರಭಿವೃದ್ಧಿಯಲ್ಲಿ ನಡೆದಿಲ್ಲ. ನಿಯಮದಂತೆ ಭೂಉಪಭೋಗ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ.
ಸಿದ್ದಪ್ಪ ಬೇವೂರು, ಆಯುಕ್ತರು, ನಗರಾಭಿವೃದ್ಧಿ