ಜಿಲ್ಲೆಯ ಮುಳಗುಂದ ಪಟ್ಟಣದ ಹೊರವಲಯದಲ್ಲಿ ಇರುವ ಮಣ್ಣಿನ ಕ್ವಾರಿಯೊಂದರಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾಥಿರ್ಗಳು ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಟನೆ ಶನಿವಾರ ಜರುಗಿದೆ.
ಮೃತ ವಿದ್ಯಾಥಿರ್ಗಳನ್ನು ಬಸವರಾಜ್ ಬಡಿಗೇರ್ (15) ಹಾಗೂ ಪರಶುರಾಮ ವಡ್ಡರ್ (15) ಎಂದು ಗುರುತಿಸಲಾಗಿದೆ. ಇವರು ಮುಳಗುಂದ ಪಟ್ಟಣದ ಸಂಯುಕ್ತ ಕಿರಿಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪಟ್ಟಣದಲ್ಲಿರುವ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾಥಿರ್ಗಳು ಎಂದು ತಿಳಿದು ಬಂದಿದೆ.
ಶನಿವಾರ ಶಾಲೆ ಮುಗಿಸಿಕೊಂಡ ಬಳಿಕ ಹಾಸ್ಟೆಲ್ಗೆ ತೆರಳುವ ಮುನ್ನ, ಅಂಬೇಡ್ಕರ್ ವಸತಿ ನಿಲಯದ ಆರು ವಿದ್ಯಾಥಿರ್ಗಳು ಸಮೀಪದ ಮಣ್ಣಿನ ಕ್ವಾರಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಆಳ ಹಾಗೂ ಕ್ವಾರಿಯ ಅಸಮತೋಲನದ ಕಾರಣದಿಂದ ಆರು ವಿದ್ಯಾಥಿರ್ಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಉಳಿದ ವಿದ್ಯಾಥಿರ್ಗಳು ಕೆರೆಯಿಂದ ಹೊರಂದಿದ್ದಾರೆ. ಹೊರಬಮದ ವಿದ್ಯಾಥಿರ್ಗಳು ಸಹಾಯಕ್ಕಾಗಿ ಕೂಗಿಕೊಂಡ ಬಳಿಕ ಸ್ಥಳಿಯರಿಗೆ ವಿಷಯ ತಿಳಿದಿದೆ. ತಕ್ಷಣವೇ ಸ್ಥಳಿಯರು, ಅಗ್ನಿಶಾಮಕ ದಳ ಹಾಗೂ ಮುಳಗುಂದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶೋಧ ಕಾರ್ಯದ ಮೂಲಕ ಮೃತ ವಿದ್ಯಾಥಿರ್ಗಳ ಶವಗಳನ್ನು ಹೊರತರಲಾಯಿತು. ಟನೆ ನಂತರ ಮುಳಗುಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಶೋಕದ ವಾತಾವರಣ ಉಂಟುಮಾಡಿದೆ. ಟನೆ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಸಿಗೆ ರಜೆ ಹಾಗೂ ಶಾಲೆ ಸಮಯದ ಬಳಿಕ ಮಕ್ಕಳು ಈಜಲು ತೆರಳುವ ಘಟನೆಗಳು ಹೆಚ್ಚಾಗುತ್ತಿವೆ. ಮಣ್ಣಿನ ಕ್ವಾರಿಗಳು, ಕೆರೆಗಳು, ಹೊಂಡಗಳು ಹಾಗೂ ನದಿಗಳಲ್ಲಿ ನೀರಿನ ಆಳ, ತಳಭಾಗದ ಮಣ್ಣು ಮತ್ತು ಅಕಸ್ಮಿಕ ಕುಸಿತಗಳು ಜೀವಕ್ಕೆ ಭಾರೀ ಅಪಾಯಕಾರಿ ಆಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಅಪಾಯಕರ ಸ್ಥಳಗಳಿಗೆ ತೆರಳದಂತೆ ಸ್ಪಷ್ಟ ಸೂಚನೆ ನೀಡಬೇಕು. ಶಾಲಾ ಆಡಳಿತ ಹಾಗೂ ವಸತಿ ನಿಲಯಗಳು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಮೂಡಿಸಬೇಕು. ಸಂಬಂಧಪಟ್ಟ ಇಲಾಖೆ ಹಾಗೂ ಪಂಚಾಯತ್ಗಳು ಕ್ವಾರಿಗಳ ಸುತ್ತ ಎಚ್ಚರಿಕೆ ಫಲಕ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.