ಗದಗ ತಾಲೂಕಿನ ಬಳಗಾನೂರನಿಂದ ಹುಯಿಲಗೋಳ ಗ್ರಾಮಕ್ಕೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ಮರಗಳನ್ನು ಕತ್ತರಿಸಿರುವುದು.
ತಾಲೂಕಿನ ಬಳಗಾನೂರ ನಿಂದ ಹುಯಿಲಗೋಳ ಗ್ರಾಮಕ್ಕೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ಮರಗಳನ್ನು ಕತ್ತರಿಸಿರುವ ಟನೆ ಗದಗ ತಾಲೂಕಿನಲ್ಲಿ ಶನಿವಾರ ಮುಸುಕಿನ ಜಾವ ನಡೆದಿದೆ. ಶುಕ್ರವಾರ ತಡರಾತರಿ ವರೆಗೂ ಇದ್ದ ಮರಗಳು ಶನಿವಾರ ಬೆಳಗ್ಗೆ ಇಲ್ಲದಂತಾಗಿವೆ.
ಶಿರಸಲ ಎಂಬ ಜಾತಿಯ ಮರಗಳು ಇವಾಗಿದ್ದು, ಕಳೆದ 12 ವರ್ಷಗಳ ಹಿಂದೆ ಆರ್ಆರ್ಪಿ ಹಾಗೂ ನರೇಗಾ ಯೋಜನೆಯಡಿ 3 ಕಿಮೀ ವರೆಗೆ 976 ಸಸಿಗಳನ್ನು ನಡೆಸಲಾಗಿತ್ತು. ಅರಣ್ಯ ಇಲಾಖೆಯವರು ನೀರುಣಿಸಿ, ಪಾಲನೆ, ಪೋಷಣೆ ಮಾಡಿ ಬೆಳೆಸಿದ್ದರು. ಹತ್ತಾರು ವರ್ಷಗಳ ಕಾಲ ಬೆಳೆದು ಹೆಮ್ಮರವಾಗಿ ರಸ್ತೆಯ ಎರಡೂ ಬದಿಯಲ್ಲಿ ಚಪ್ಪರಗಳಂತೆ ಕಾಣಬೇಕಿದ್ದ ಮರಗಳು ಈಗ ಬರುಡಾಗಿವೆ. ಮಾಃಇತಿ ಪ್ರಕಾರ ಹುಯಿಲಗೋಳ ಗ್ರಾಮದ ರೈತರು ಈ ಮರಗಳನ್ನು ಕಡಿದಿರಬಹುದು ಎಂದು ಆರೋಪಿಸಲಾಗುತ್ತಿದೆ. ಈ ಮರಗಳಿಂದ ಜಮೀನಿನಲ್ಲಿ ಬೆಳೆ ಬೆಳೆಯುತ್ತಿಲ್ಲ. ಹಾಗಾಗಿ ಮರಗಳನ್ನು ಕಡಿಯಬೇಕು ಎಂದು ಕೆಲ ರೈತರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಎರಡು ವರ್ಷಗಳಿಂದಲೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತ ಬಂದಿದ್ದರೂ ಎನ್ನಲಾಗಿದೆ.. ಈ ಮರಗಳ ನೆರಳಿನಿಂದ ಅದರ ಸುತ್ತಲೂ ನನ್ನ ಜಮೀನಿನಲ್ಲಿ ಬೆಳೆ ಬೆಳೆಯುತ್ತಿಲ್ಲ. ಹಾಗಾಗಿ ಮರ ಕಡಿಯಲು ಪರವಾನಿಗೆ ಕೇಳಿದ್ದರಂತೆ. ಆದರೆ, ಅರಣ್ಯ ಇಲಾಖೆ ಇದಕ್ಕೆ ಸಹಮತಿ ನೀಡಿರಲಿಲ್ಲ ಎಂದು ಹೇಳಲಾಗಿದೆ. ಈ ಟನೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ಅನುಮತಿ ಇಲ್ಲದೇ ಮರ ಕಡಿಯುವುದು ಗಂಭೀರ ಪ್ರಕರಣ ಆಗಿದೆ. ಈ ಕುರಿತು ದೂರು ದಾಖಲಿಸಲಾಗಿದೆ. ಯಾರೇ ತಪು$್ಪ ಮಾಡಿದರು ಕಾನೂನು ಕ್ರಮ ಜರುಗಿಸಲು ಇಲಾಖೆ ಹಿಂದೆ ಸರಿಯುವುದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುಗುತ್ತಿದೆ.
- ವಿರೇಂದ್ರ ಮರಿಬಸಣ್ಣವರ, ಗದಗ ವಲಯ