ಗದಗ ತೊಂಟದಾರ್ಯ ಜಾತ್ರಾ ಮಹೋತ್ಸವ ನಿಮಿತ್ಯ ತೋಂಟದ ಸಿದ್ಧರಾಮ ಶ್ರೀಗಳಿಂದ ಒಕ್ಕಲಗೇರಿ ಓಣಿಯಲ್ಲಿ ಜಾಗೃತಿ ಪಾದಯಾತ್ರೆ ಜರುಗಿತು. ಸಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸ್ವಾಮಿಗಳು, ಬೈರನಹಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಕೊಟ್ರಪ್ಪ ಕಮತರ, ಎಂ. ಎಂ. ಹಿರೇಮಠ, ಅನಿಲ್ ಮೇಲಗೇರಿ, ಶಿವಕುಮಾರಗೌಡ ಪಾಟೀಲ, ಆಂಜನೇಯ ಕಟಗಿ, ವಿನಾಯಕ ಮಾನ್ವಿ ಇತರರು ಇದ್ದರು.
ಗದಗ: ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ವ್ಯಸನಮುಕ್ತ ಸಮಾಜ ಜಾಗೃತಿಗಾಗಿ ನಗರದ ಒಕ್ಕಲಗೇರಿಯ ರಾಚೋಟೇಶ್ವರ ದೇವಸ್ಥಾನದಿಂದ ಶನಿವಾರ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಓಣಿಯ ಪ್ರಮುಖ ರಸ್ತೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ತೋಂಟದ ಸಿದ್ದರಾಮ ಸ್ವಾಮಿಗಳ ಜೋಳಿಗೆಯಲ್ಲಿ ಓಣಿಯ ನಾಗರಿಕರು ಮದ್ಯದ ಪೌಚ್ಗಳು, ಗುಟ್ಕಾ ಪಾಕೇಟ್ಗಳು ಹಾಗೂ ತಂಬಾಕು ಉತ್ಪನ್ನಗಳನ್ನು ಹಾಕಿ ದುಷ್ಚಟದಿಂದ ದೂರಾಗಿ ಹೊಸ ಬದುಕನ್ನು ಸಾಗಿಸುತ್ತೆವೆ ಎಂದು ಪ್ರಮಾಣ ಮಾಡಿದರು ಶ್ರೀಗಳಿಂದ ಆಶೀರ್ವಾದ ಪಡೆದರು.
ಇದಕ್ಕೂ ಮುನ್ನ ಪಾದಯಾತ್ರೆಯ ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿಯ ಚಿತ್ತಾರ ಬಿಡಿಸಿ, ಪುಷ್ಪಗಳನ್ನು ಹರಡಿ ಪಾದಯಾತ್ರೆಯನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸ್ವಾಮಿಗಳು, ಬೈರನಹಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಕೊಟ್ರಪ್ಪ ಕಮತರ, ಎಂ. ಎಂ. ಹಿರೇಮಠ, ಅನಿಲ್ ಮೇಲಗೇರಿ, ಶಿವಕುಮಾರಗೌಡ ಪಾಟೀಲ, ಆಂಜನೇಯ ಕಟಗಿ, ಜಾತ್ರಾ ಮಹೋತ್ಸವದ ಅಧ್ಯ ವಿನಾಯಕ ಮಾನ್ವಿ, ಕಾರ್ಯದಶಿರ್ ಚೇತನ ಅಂಗಡಿ, ಜಾತ್ರಾ ಮಹೋತ್ಸವದ ಉಪಾಧ್ಯ ಶಿವಯ್ಯ ನಾಲ್ವತ್ವಾಡಮಠ, ಸುಭಾಷ ಚಂದ್ರಪ್ಪನವರ, ಎಂ.ಜಿ. ಹೂಗಾರ, ಚಂದ್ರಶೇಖರ ರಾಜೂರ, ಎಸ್. ವಿ. ಪವಾಡಿಗೌಡ್ರ, ಉಮೇಶಗೌಡ್ರ ಪಾಟೀಲ ಇತರರು ಇದ್ದರು.