ಜಿಲ್ಲಾಡಳಿತ ಭವನದಲ್ಲಿ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆ ಜರುಗಿತು. ದುರಗೇಶ ಕೆ.ಆರ್​, ಶ್ರೀಶೈಲ ಸೋಮನಕಟ್ಟಿ, ಎ. ಎ. ಕಂಬಾಳಿಮಠ, ಬಸನಗೌಡ ಕೋಟೂರ ಇತರರು ಇದ್ದರು. 
ರಾಜ್ಯ

ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆ ಜರುಗಿತು.
ಅಪರ ಜಿಲ್ಲಾಧಿಕಾರಿ ಡಾ.ದುರಗೇಶ ಕೆ. ಆರ್​. ಮಾತನಾಡಿ, ಜಿಲ್ಲಾ ಪಂಚಾಯತಿ ಹಾಗೂ ಅಧೀನದಲ್ಲಿ ಬರುವ ಕಚೇರಿಗಳಿಂದ ವಿವಿಧ ಯೋಜನೆಗಳಡಿ ಆರಂಭ ಆಗಿರುವ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಿರ್ಕರ ಕಲ್ಯಾಣ ಮಂಡಳಿಗೆ ಶೇ 1 ರಷ್ಟು ಸುಂಕ ಭರಿಸಿರುವುದನ್ನು ಪರಿಶೀಲಿಸಬೇಕು. ಯಾವುದೇ ಸರ್ಕಾರದ ಇಲಾಖೆ, ಸಾರ್ವಜನಿಕ ಪ್ರಾಧಿಕಾರ, ಸ್ಥಳಿಯ ಸಂಸ್ಥೆಗಳು ಹಾಗೂ ಪಂಚಾಯತ್​ ರಾಜ್​ ಸಂಸ್ಥೆಗಳು ಕಡಿತ ಮಾಡಿದ ಅಥವಾ ವಸೂಲು ಮಾಡಿದ ಸುಂಕವನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಿರ್ಕರ ಕಲ್ಯಾಣ ಮಂಡಳಿಗೆ ರವಾನಿಸದಿದ್ದರೆ, ಸುಂಕವನ್ನು ಮಂಡಳಿಗೆ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಈ ಕುರಿತು ಸಭೆ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.
ಸರ್ಕಾರದ ಇಲಾಖೆಗಳು ಅಥವಾ ಸಾರ್ವಜನಿಕ ಉದ್ದಿಮೆಗಳು ಯಾವುದೇ ನಿರ್ಮಾಣ ಕಾಮಗಾರಿಯನ್ನು ನಡೆಸದೇ ಇದ್ದರೆ ಅಂತಹ ಇಲಾಖೆಗಳು ಅಥವಾ ಸಾರ್ವಜನಿಕ ಉದ್ದಿಮೆಗಳು ನಿರ್ಮಾಣ ಕಾಮಗಾರಿಯ ವೆಚ್ಚವನ್ನು ಪಾವತಿಸುವಾಗ ಪಾವತಿಯ ಮೂಲದಲ್ಲೇ ಶೇ. 1 ರಷ್ಟು ಸುಂಕವನ್ನು ಹಾಗೂ ಯಾವುದೇ ವ್ಯಕ್ತಿಗೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ನಗರ ಸ್ಥಳಿಯ ಸಂಸ್ಥೆಗಳು ನೆ ಅನುಮೋದನೆ ಅಥವಾ ಪರವಾನಿಗೆ ನೀಡಿದ ಸಂದರ್ಬದಲ್ಲಿ ಪರವಾನಿಗೆ ಅಥವಾ ನೆ ಅನುಮೋದನೆ ನೀಡುವ ಸಮಯದಲ್ಲಿ ಶೇ. 1 ರಷ್ಟು ಸುಂಕವನ್ನು ಪಡೆದುಕೊಂಡು ಮಂಡಳಿಗೆ ರವಾನಿಸಬೇಕು. ನಗರ ಸ್ಥಳಿಯ ಸಂಸ್ಥೆಗಳು ಹಾಗೂ ಪಂಚಾಯತ್​ ರಾಜ್​ ಸಂಸ್ಥೆಗಳು ನೀಡಿದ ನೆ, ಅನುಮೋದನೆ ಅಥವಾ ನಿರ್ಮಾಣ ಪರವಾನಿಗೆ ಪರಿಶೀಲನೆ ನಡೆಸಿ ಮಾಲೀಕರು, ನಿಯೋಜಕರಿಂದ ವಸೂಲು ಮಾಡಿದ ಸುಂಕವನ್ನು ಮಂಡಳಿಗೆ ರವಾನಿಸಿದ ಕುರಿತು ಪರಿಶೀಲನೆ ನಡೆಸಬೆಕುಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಎ. ಎ. ಕಂಬಾಳಿಮಠ, ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಜಿಲ್ಲಾ ಬಾಲಕಾಮಿರ್ಕ ನಿಮೂರ್ಲನಾ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ಕಾಮಿರ್ಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಇತರರು ಇದ್ದರು.