ಗದಗ: ಜಿ.ಎನ್.ಜೆ ಸ್ಪೋರ್ಟ್ಸ್ ವರ್ಲ್ಡ್ ಹಾಗೂ ಗದಗ ಜಿಲ್ಲಾ ಸ್ವಿಮ್ಮಿಂಗ್ ಅಸೋಸಿಯೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದ ಸ್ವಿಮ್ಮಿಂಗ್ ಸಮರ್ ಕ್ಯಾಂಪಿನ ಮುಕ್ತಾಯ ಸಮಾರಂಭವು ಭಾನುವಾರ ಜರುಗಿತು.
ಕಾರ್ಯಕ್ರಮವನ್ನು ಗಣ್ಯ ಅತಿಥಿಗಳಾದ ಶೇಖಣ್ಣ ಕಬಳಿಕಾಯಿ, ರಿಚರ್ಡ್ ಧರ್ಮದಾಸ್, ಅಶೋಕ್ ಸಂಕಣ್ಣವರ್, ಡಾ. ಗೌಡಬಳ್ಳಿ, ಆಲ್ವಿನ್ ದಾಸ್ ಹಾಗೂ ಸೋಫಿಯಾ ಧರ್ಮದಾಸ್ ಅವರು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶೇಖರ್ ಅವರು, “ಈಜು ಇಂದು ಕೇವಲ ಕ್ರೀಡೆಯಲ್ಲ, ಬದುಕಿನ ಅವಿಭಾಜ್ಯ ಕೌಶಲ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಈಜು ಕಲಿಯುವುದು ಅತ್ಯಗತ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬೆಳವಣಿಗೆಗೆ ಈಜು ಅತ್ಯುತ್ತಮ ಕ್ರೀಡೆಯಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ಧೈರ್ಯವನ್ನು ಬೆಳೆಸುವ ಶಕ್ತಿ ಈಜಿಗಿದೆ” ಎಂದು ಹೇಳಿದರು.
ಎರಡು ತಿಂಗಳ ಕಾಲ ನಡೆದ ಈ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಈಜಿನ ಮೂಲಭೂತ ಹಾಗೂ ಉನ್ನತ ಮಟ್ಟದ ತರಬೇತಿಯನ್ನು ಪಡೆದರು. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ನೀರಿನ ಸುರಕ್ಷತೆ, ವಿವಿಧ ಈಜು ಶೈಲಿಗಳು, ಸ್ಪರ್ಧಾತ್ಮಕ ತಂತ್ರಗಳು ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಯ ಕುರಿತು ವಿಶೇಷ ತರಬೇತಿ ನೀಡಲಾಯಿತು.
ಮುಖ್ಯ ಅತಿಥಿಗಳು ರಿಚಾರ್ಜ ಧರ್ಮ ದಾಸ್ ಮಾತನಾಡಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಂತರಾಷ್ಟ್ರ ಮಟ್ಟಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಕಾರ್ಯವನ್ನು ಸಂಸ್ಥೆ ಮುಂದುವರಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಶೇಖಣ್ಣ ಕಬಳಿಕಾಯಿ, ಅಶೋಕ್ ಸಂಕಣ್ಣವರ್, ರಿಚರ್ಡ್ ಧರ್ಮ ದಾಸ್. ಡಾ. ಗೌಡಬಳ್ಳಿ, ಎಡ್ವರ್ಡ್ ಧರ್ಮ ದಾಸ್ ಆಲ್ವಿನ್ ಧರ್ಮ ದಾಸ್, ಸೋಫಿಯಾ ಧರ್ಮದಾಸ್ ಮೋಹನ್ ಹೊಸಮನಿ ಸಂಜಯ್ ಬಾಗ್ಮಾರ. ಏನ್ ಡಿ ಪಾಟೀಲ್. ಬಟ್ಟುರ್ ಸರ್ ಕಾರ್ತಿಕ್ ಬ್ರೆಜಿಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಶಿಕುಮಾರ್ ಮುಂಡರಗಿ ನೆರವೇರಿಸಿದರು.