ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಪರಿಷ್ಕರಿಸಿ ವಿಬಿಜಿರಾಮ್ಜಿ ಎಂಬ ನೂತನ ಯೋಜನೆಯನ್ನ ಕೇಂದ್ರ ಸರ್ಕಾರ ಜಾರಿ ಮಾಡಿದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಶೀತಲ ಸಮರಕ್ಕೆ ಹೊಸ ವೇದಿಕೆ ಸಜ್ಜಾಗಿದೆ. ಅಧಿವೇಶನ ಮೊದಲ ದಿನವೂ ರಾಜ್ಯಪಾಲರ ಭಾಷಣ ಕುರಿತಾಗಿ ರಾಜ್ಯ ಸರ್ಕಾರ ಆಕ್ಷೇಪ ಎತ್ತಿದ್ದು, ಮುಂದುವರಿದು ಜಿಲ್ಲಾ ಗಣರಾಜಯೋತ್ಸವ ಕಾರ್ಯಕ್ರಮದಲ್ಲೂ ಸಹ ವೈಮನಸ್ಸಿನ ನೆರಳು ಹಿಂಬಾಲಿಸಿತು. ವಿಬಿಜಿರಾಮ್ಜಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ವೇದಿಕೆ ಮೇಲಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಕಾರ್ಯಕ್ರಮವನ್ನು ಬಯ್ಕಾಟ್ ಮಾಡಿ ಹೊರ ನಡೆದ ಟನೆ ಸಂಭವಿಸಿತು.
ಕೆ.ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆಯುದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪ್ರಾಯದಂತೆ ಕಾನೂನು ಸಚಿವ ಎಚ್.ಕೆ. ಪಾಟೀಲರಿಂದ ಭಾಷಣ ಮುಂದು ವರಿದಿತ್ತು. ಈ ವೇಳೆ ಭಾಷಣದಲ್ಲಿ ವಿಬಿಜಿರಾಮ್ಜಿ ಯೋಜನೆ ಬಗ್ಗೆ ಎಚ್.ಕೆ ಪಾಟೀಲ ವಿಷಯ ಪ್ರಸ್ತಾಪಿಸಿದರು. "ಬಂಡವಾಳ ಶಾಹಿಗಳ ಹಿತಾಸಕ್ತಿಯನ್ನು ಕಾಪಾಡುವ ಗುತ್ತಿಗೆದಾರರ ಕೇಂದ್ರಿಕೃತ ವಿಬಿಜಿಗ್ರಾಮಜಿ ಯೋಜನೆ ಹೆಸರಿನಲ್ಲಿ ಗ್ರಾಮೀಣ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ. ಯೋಜನೆಯನ್ನು ನಿರಸನಗೊಳಿಸಿದೆ. ಉದ್ಯೋಗವನ್ನು ಕಸಿದುಕೊಳ್ಳುವ ಈ ಯೋಜನೆನ್ನು ಕೇಂದ್ರ ಸರ್ಕಾರಕ್ಕೆ ರದ್ದು ಮಾಡಿ ಬಡವರ ಪರವಾದ, ಕೃಷಿ ಕಾಮಿರ್ಕರ ಪರವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನ ಪುನಃ ಸ್ಥಾಪನೆ ಮಾಡಬೇಕು ಎಂದು ಭಾಷಣದಲ್ಲಿ ಒತ್ತಾಯಿಸಿದರು.
ಸಚಿವ ಎಚ್.ಕೆ. ಪಾಟೀಲ ಭಾಷಣಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಆಕ್ಷೇಪ ವ್ಯಕ್ತಪಡಿಸಿದರು. ಭಾಷಣ ಸ್ಥಳಕ್ಕೆ ಬಂದ ಪರಿಷತ್ ಸದಸ್ಯ ಎಸ್.ವಿ ಸಂಕನೂರು ಅವರು, ಹೊಸ ಯೋಜನೆಯಲ್ಲಿ 100 ರಿಂದ 125ಕ್ಕೆ ಕೂಲಿ ದಿನವನ್ನು ಹೆಚ್ಚಿಸಲಾಗಿದೆ. ಕೂಲಿ ಪಾವತಿಗಳು ಶ್ರೀವಾಗಿ ಕಾಮಿರ್ಕರಿಗೆ ದೊರೆಯುವಂತಹ ವಿಷಯಗಳನ್ನು ಅಳವಡಿಸಲಾಗಿದೆ. ಆದರೆ, ವಿಬಿಜಿರಾಮ್ಜಿ ಯೋಜನೆಯು ಕೂಲಿಕಾಮಿರ್ಕರ ಉದ್ಯೋಗ ಕಸಿದುಕೊಳ್ಳುತ್ತದೆ ಎಂದು ಸುಳ್ಳು ಸಂದೇಶ ಏಕೆ ನೀಡುತ್ತೀರಿ ಎಂದು ಸಚಿವರನ್ನು ಪ್ರಶ್ನಿಸಿದರು. ಈ ಭಾಷಣಕ್ಕೆ ನನ್ನ ವಿರೋಧ ವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ವೇದಿಕೆಯಿಂದ ಹೊರನಡೆದರು. ಸಚಿವ ಎಚ್.ಕೆ. ಪಾಟೀಲರು ಭಾಷಣ ಮುಂದುವರಿಸಿದರು. ಈ ಟನೆಯಿಂದ ಜಿಲ್ಲಾ ಕ್ರೀಡಾಂಗಣ ಕಾರ್ಯಕ್ರಮದಲ್ಲಿ ಸ್ವಲ್ಪ ಇರಿಸು ಮುರಿಸು ಉಂಟಾದಂತೆ ಕಂಡಿತು.
ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮಾಗಾಂಧಿ ಹೆಸರು ಕಿತ್ತು ಹಾಕುವ ಹುನ್ನಾರದ ಹಿಂದಿನ ಉದ್ದೇಶವೇನಿದೆ. ಗ್ರಾಮೀಣ ಕೂಲಿಕಾರರನ್ನು ಗುತ್ತಿಗೆದಾರರ ಕೈಅಡಿಯಲ್ಲಿ ಕೆಲಸ ಮಾಡುವಂತೆ ಹೊಸ ಯೋಜನೆ ಜಾರಿ ಆಗಿದೆ, ಬಡವರ, ಕೂಲಿ ಕಾಮಿರ್ಕರ ಪರ, ನಿರುದ್ಯೋಗಿಗಳ ಪರ ಮಾತನಾಡಿದರೆ ಬಿಜೆಪಿ ಸದಸ್ಯರು ಸಹಿಸಿಕೊಳ್ಳುವುದಿಲ್ಲ.
ಸಚಿವ ಎಚ್.ಕೆ. ಪಾಟೀಲ, ಕಾನೂನು ಸಚಿವ
ವಿಬಿ ರಾಮ್ ಜಿ ಯೋಜನೆ ಬಗ್ಗೆ ಸಚಿವರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಜನರಿಗೆ ತಪ್ಪ ಸಂದೇಶ ನೀಡುವ ಕೆಲಸವನ್ನು ಸಚಿವರು ಮಾಡಿದ್ದಾರೆ. ಹೊಸ ಯೋಜನೆಯು ಕೇಂದ್ರದ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಪಾಸ್ ಆಗಿ ನಂತರ ಯೋಜನೆಯಾಗಿ ಜಾರಿ ಆಗಿದೆ. ಹೊಸ ಯೋಜನೆಯಲ್ಲಿ ಕೂಲಿ ಕಾಮಿರ್ಕರಿಗೆ ಹೆಚ್ಚಿನ ದಿನದ ಉದ್ಯೋಗ ನೀಡಿದ್ದೇವೆ. ಪ್ರತಿ ವಾರ ಸಂಬಳ ನೀಡುವ ಯೋಜನೆಯು ಇದರಲ್ಲಿ ಒಳಗೊಂಡಿದೆ. ಯಾವುದನ್ನು ತಿಳಿದುಕೊಳ್ಳದೇ ಅಸತ್ಯವನ್ನು ಹೇಳಬಾರದು
ಎಸ್.ವಿ. ಸಂಕನೂರು, ವಿಧಾನ ಪರಿಷತ್ ಸದಸ್ಯ