ಗದಗ ಸರ್ಕಾರಿ ಶಾಲೆ ನಂ.10ರಲ್ಲಿ ಜಿಲ್ಲೇ ಮಟ್ಟದ ಬೇಸಿಗೆ ಶಿಬಿರವನ್ನು ಸಿ. ಎಸ್. ಶಿವನಗೌಡರ ಉದ್ಘಾಟಿಸಿರು. ರಾಧಾ ಮಣ್ಣೂರು, ದೇವೇಂದ್ರಕುಮಾರ ಹೊಸಕೇರಿ, ರವಿ ಉಮಚಗಿ ಇತರರು ಇದ್ದರು.
ಮಕ್ಕಳು ಮೊಬೈಲ್ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಅವರಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಸಿ. ಎಸ್. ಶಿವನಗೌಡರ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 10ರಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಇಂತಹ ಶಿಬಿರಗಳ ಅವಶ್ಯಕತೆ ಹೆಚ್ಚು ಇದೆ. ಏಕೆಂದರೆ ಹಿಂದಿನ ದಿನಗಳಲ್ಲಿ ಮೊಬೈಲ್ಗಳು, ಟಿವಿ, ಇರುತ್ತಿರಲಿಲ್ಲ್ಲ. ಇದರಿಂದ ಮಕ್ಕಳು ಪ್ರಕೃತಿಯಲ್ಲಿ ಬೆರೆತು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಕ್ರಿಯಾಶೀಲರಾಗಿ, ಸದೃಢವಾಗಿ ಇರುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಮಕ್ಕಳು ಟಿವಿ ಹಾಗೂ ಮೊಬೈಲ್ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅವರಲ್ಲಿ ಸಾಕಷ್ಟು ಖಿನ್ನತೆಗಳು ಕಾಣಸಿಗುತ್ತವೆ. ಮಕ್ಕಳು ಓದಿನ ಜೊತೆಗೆ ತಮ್ಮ ಆಸಕ್ತಿಯುತವಾದ ೇತ್ರಗಳಲ್ಲಿ ತೊಡಗಿಸಿಕೊಂಡು ಮನಸ್ಸು ಮತ್ತು ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬೇಕಾಗಿದೆ ಮತ್ತು ಮನೆಯಲ್ಲಿ ತಂದೆ ತಾಯಿಗಳಿಗೆ ಸಹಾಯ ಮಾಡಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ರಾಧಾ ಮಣ್ಣೂರ ಮಾತನಾಡಿ, ಮಕ್ಕಳು ಬೇಸಿಗೆ ಶಿಬಿರದ ಮಹತ್ವವನ್ನು ಮೊದಲು ತಿಳಿದುಕೊಳ್ಳಬೇಕು. ಮಕ್ಕಳಲ್ಲಿ ಪಠ್ಯದೊಂದಿಗೆ ಕಲಾಸಕ್ತಿ ಮೂಡಿಸಲು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯಿಂದ ಹಾಗೂ ಜಿಲ್ಲಾ ಬಾಲಭವನ ಸಮಿತಿಯಿಂದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಶೇಷವಾಗಿ ದೇಸಿ ಆಟಗಳು, ಮಣ್ಣಿನ ಆಟಗಳು, ತಾರಾಲಯ ವೀಣೆ ಸೇರಿದಂತೆ ಹಲವಾರು ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಇಲ್ಲಿ ಕಲಿತಿರುವ ವಿಷಯಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಯಶ್ರೀ ಆರ್ ಅವರು ಮಾತನಾಡಿ, ಬಾಲಭವನ ಸಮಿತಿಯಿಂದ ಪ್ರತಿ ವರ್ಷ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡು ಬರುತ್ತಿದೆ. 5 ರಿಂದ 16 ವರ್ಷಗಳ ಮಕ್ಕಳಿಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 15 ದಿನಗಳವರೆಗೆ ನಡೆಯುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳಗಳೊಂದಿಗೆ ಮನೋವಿಕಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸುವ ಕೆಲಸ ಈ ಶಿಬಿರ ಮಾಡುತ್ತಿದೆ ಎಂದು ಹೇಳಿದರು.
ಪ್ರಭಾರ ಬಿಇಒ ಎಸ್. ಪಿ. ಪ್ರಭಯ್ಯನಮಠ ಮಾತನಾಡಿ, ಶಾಲೆ ಮತ್ತು ಶಿಬಿರಗಳಿಗೆ ಬಹಳ ವ್ಯತ್ಯಾಸವಿದೆ. ಶಾಲೆಯಲ್ಲಿ ಒಂದು ಕೋಣೆಯಲ್ಲಿ ಮಕ್ಕಳಿಗೆ ಶಿಣ ನೀಡಲಾಗುತ್ತಿದೆ. ಆದರೆ, ಶಿಬಿರದಲ್ಲಿ ಮುಕ್ತ ವಾತಾವರಣದ ಪರಿಸರದಲ್ಲಿ ಅವರ ಆಸಕ್ತಿದಾಯಕ ಕಲಿಕಾ ವಿಷಯಗಳಿಗೆ ಶಿಣ ನೀಡಲಾಗುತ್ತದೆ. ಪಾಲಕರು ಮಕ್ಕಳಿಗೆ ಉನ್ನತಮಟ್ಟದ ಶಿಣ ನೀಡುವ ತವಕದಲ್ಲಿ ಅವರಲ್ಲಿ ಸಂಸ್ಕಾರ ಕಲಿಸುವುದನ್ನು ಕಡಿಮೆ ಮಾಡಲಾಗುತ್ತಿದೆ. ಇದರಿಂದ ವಿದ್ಯಾವಂತರಾದ ಮಕ್ಕಳು ಮುಂದೆ ತಂದೆ ತಾಯಿಗಳನ್ನು ವೃದಾಶ್ರಮಕ್ಕೆ ಸೇರಿಸುತ್ತಿರುವುದನ್ನು ನಾವು ನೋಡುತ್ತಿದ್ದೆವೆ. ಅದ್ದರಿಂದ ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರ ನೀಡುವುದನ್ನು ನಾವು ಇಂದಿನಿಂದಲೆ ಕಲಿಸಬೇಕು ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯ ಡಾ. ರಾಜೇಂದ್ರ ಗಡಾದ ಅವರು ಮಾತನಾಡಿ, ಶಾಲೆಗಳಲ್ಲಿ ಸೀಮಿತ ವರ್ಗಗಳು ಇರುತ್ತವೆ. ಆದರೆ, ಈ ಬೇಸಿಗೆ ಶಿಬಿರದಲ್ಲಿ ಎಲ್ಲ ವರ್ಗದ ವಿದ್ಯಾಥಿರ್ಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಅವರಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳಿಗೆ ನೀರೆರೆಯುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ಅವಿಭಕ್ತ ಕುಟುಂಬದಲ್ಲಿ ಬೆಳೆದು ಮಕ್ಕಳು ಸಂಸ್ಕಾರಯುತ ಜೀವನ ನಡೆಸುತ್ತಾ ಬಂದಿದ್ದರು. ಆದರೆ, ಹಂತ ಹಂತವಾಗಿ ಕುಟುಂಬಗಳು ಚಿಕ್ಕದಾಗುತ್ತಿದ್ದು, ಇಂದು ನಾವಿಬ್ಬರೂ ನಮಗಿಬ್ಬರು ಎನ್ನುವ ಕಾಲವಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಾವು ಒಬ್ಬರು ನಮಗೆ ಏಕೆ ಮತ್ತೊಬ್ಬರು ಎನ್ನುವ ಕಾಲ ಬಂದರು ಬರಬಹುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕಿ ಲ$್ಮ ಜಿಂಗಿ ಅವರು ಮಾತನಾಡಿ, ಈ ಬೇಸಿಗೆ ಶಿಬಿರವು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ. ಈ ಶಿಬಿರದಲ್ಲಿ ಜೀವನ ಕೌಶಲ್ಯಗಳು, ಆತ್ಮವಿಶ್ವಾಸ ವೃದ್ಧಿ, ಸದೃಢ ಆರೋಗ್ಯ ಸಾಮಾಜಿಕವಾಗಿ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ಹೇಳಿದರು.
ದೇವೇಂದ್ರಕುಮಾರ ಹೊಸಕೇರಿ, ರವಿ ಉಮಚಗಿ ಇತರರು ಇದ್ದರು.
ಶಿಬಿರದಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಯೋಗ, ಕರಾಟೆ, ಚಜ್ಯುವೆಲ್ಲರಿ ಮತ್ತು ಮೆಹಂದಿ, ಚಿತ್ರಕಲೆ ಮತ್ತು ಕರಕುಶಲ ಕಲೆ ಹೇಳಿಕೊಡಲಾಗುತ್ತದೆ.