Gadag 
ರಾಜ್ಯ

ಆತ್ಮಹತ್ಯೆಯೋ? ಕೊಲೆಯೋ? ತನಿಖೆಗೆ ಆಗ್ರಹ

ಶಿವಾನಂದ ಹಿರೇಮಠ
ಗ್ರಾಮೀಣಾಭಿವೃದ್ದಿ ವಿವಿ ಹಾಸ್ಟೆಲ್​ ನಲ್ಲಿ ಯುವತಿ ಮೃತದೇಹ ಪತ್ತೆ
ಶಿವಾನಂದ ಹಿರೇಮಠ, ಗದಗ
ಇತ್ತೀಚೆಗೆ ನಗರದ ಹೊರವಲಯದಲ್ಲಿ ಇರುವ ಗ್ರಾಮೀಣಾಭಿವೃದ್ಧಿ ವಿವಿ ಹಾಸ್ಟೆಲ್​ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಇದೀಗ ಈ ಪ್ರಕರಣ ನಗರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಹೇಳುಲಾಗುತ್ತಿದೆಯಾದರೂ, ಯುವತಿಯ ಶವದ ಮೇಲೆ ಕಂಡು ಬಂದ ಗಾಯಗಳು ಪೋಷಕರನ್ನು ಹಲವು ಅನುಮಾನಕ್ಕೆ ದೂಡಿವೆ. ಇದೇ ಅನುಮಾನವನ್ನು ಪೊಲೀಸ್​ ಇಲಾಖೆಯು ವ್ಯಕ್ತಪಡಿಸಿದ್ದು, ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬುದರ ಬಗ್ಗೆ ಯಾವುದೇ ಪ್ರಭಾವಕ್ಕೆ ಒಳಗಾಗದೇ ಪೊಲೀಸ್​ ಇಲಾಖೆ ಪಾರದರ್ಶಕ ತನಿಖೆ ಮಾಡಿದರಷ್ಟೇ ಸತ್ಯಾಂಶ ಹೊರ ಬರಲಿದೆ.
ಶವ ಪತ್ತೆ?
ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ದ್ವೀತಿಯ ಸೆಮಿಸ್ಟರ್​ನಲ್ಲಿ ಕಲಿಯುತ್ತಿದ್ದ ವಿದ್ಯಾಥಿರ್ನಿ ಡಾ. ವೀಣಾ ಹಾನಾಪುರ ಅವರ ಶವ ವಿವಿಯ ವಿದ್ಯಾಥಿರ್ನಿಯರ ಹಾಸ್ಟೆಲ್​ ನಲ್ಲಿ ಜು. 23 ರಂದು ಗುರುವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೊಂದು ಆತ್ಮಹತ್ಯೆ ಎಂದು ಉಲ್ಲೇಖಿಸಲಾಗುತ್ತಿದೆ. ಆದರೆ, ಪೋಷಕರು ಹಾಸ್ಟೆಲ್​ ವಾರ್ಡನ್​, ಸುಪರಿಂಡೆಂಟ್​ ಮೇಲೆ ಅನುಮಾನ ಕವ್ಯಕ್ತಪಡಿಸಿದ್ದಾರೆ. ವಿವಿ ಸಿಬ್ಬಂದಿಗಳು ಪ್ರತಿಯೊಂದು ಹಂತದಲ್ಲಿ ವ್ಯತ್ಯಾಸದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪೋಷಕರ ಅನುಮಾನಗಳೇನು?
ಶವ ಪತ್ತೆಯಾದ ಸಂದರ್ಭದಲ್ಲಿ ಪೋಷಕರಿಗೆ ಮಹಿಳಾ ಹಾಸ್ಟೆಲ್​ ವಾರ್ಡನ್​ ಒಬ್ಬರು ಕರೆ ಮಾಡಿದ್ದರು. ನೀವು ಹಾಸ್ಟೆಲ್​ಗೆ ಬೇಗ ಬನ್ನಿ ಎಂದು ತಿಳಿಸಿದ್ದರು. ಆದರೆ, ಗದಗ ಬಂದ ತಕ್ಷಣ ಹಾಸ್ಟೆಲ್​ ವಾರ್ಡನ್​ ಅವರು ಪೋಷಕರಿಗೆ ಬೇಟಿಗೂ ಬರಲೇ ಇಲ್ಲ. ವಿವಿಯಿಂದ ಅಧಿಕಾರಿಗಳು ಯಾರೂ ಬರಲೇ ಇಲ್ಲ. ನಂತರ ವಿವಿ ಸಿಬ್ಬಂದಿ ಕರೆ ಮಾಡಿ ಶವವನ್ನು ಶವಗಾರದಲ್ಲಿ ಇಟ್ಟಿದ್ದಾರೆ. ಇದೆಲ್ಲವನ್ನು ನಮ್ಮ ಮತ್ತು ಪೊಲಿಸರ ಸಮ್ಮುಖದಲ್ಲಿ ಪ್ರಕ್ರಿಯೆ ಮುಗಿದಿದೆ. ಪೊಲಿಸ್​ ಠಾಣೆಗೆ ತೆರಳಿ ಎಲ್ಲ ಪ್ರಕ್ರಿಯೆ ಮುಗಿಸಿದ್ದೇವೆ ಎಂದು ತಿಳಿಸಿದರು. ಈ ಬಗ್ಗೆ ಪೊಲೀಸ್​ ಇಲಾಖೆಯಲ್ಲಿ ವಿಚಾರಿಸಿದಾಗ ವಿವಿ ಸಿಬ್ಬಂದಿ ನಮ್ಮಲ್ಲೇಖೆ ಬರುತ್ತಾರೆ? ಎಂದು ನಮ್ಮನ್ನೇ ಪ್ರಶ್ನಿಸಿದ್ದಾರೆ. ವಿವಿ ಸಿಬ್ಬಂದಿ ಮೇಲೆ ನಮಗೆ ಅನುಮಾನ ಮೂಡುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಶವವನ್ನು ಆಸ್ಪತ್ರೆಗೆ ಶ್ಟಿ ಮಾಡಬೇಕೆ ಬೇಡವೋ ಎಂದು ನಮ್ಮನ್ನು ಕೇಳಲೇ ಇಲ್ಲ. ಅವರೇ ಸ್ವಯಂ ನಿರ್ಧಾರ ತೆಗೆದುಕೊಂಡಿದ್ದಾರೆ. ಪೊಲೀಸ್​ ಸ್ಟೇಷನ್​ ನಲ್ಲಿ ನಾವು ಮಾತನಾಡಿದ್ದೇವೆ ಎಂದು ವಿವಿ ಸಿಬ್ಬಂದಿ ಸುಳ್ಳು ಹೇಳುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಯಾವ ವೈದ್ಯರು ಶವ ಪರೀೆ ಮಾಡಿದ್ದಾರೆ? ಆ ವೈದ್ಯರನ್ನು ಕರೆದುಕೊಂಡು ಬಂದವರು ಯಾರು? ಶವ ಇಳಿಸಬೇಕಾದರೆ ವೈದ್ಯರು ಯಾರಿದ್ದರೂ? ಅಲ್ಲಿ ವೈದ್ಯರನ್ನು ಕರೆದುಕೊಂಡು ಬಂದವರು ಯಾರು? ಅಲ್ಲಿನ ಸಿಸಿಟಿಪಿ ದೃಶ್ಯಗಳನ್ನು ಪರಿಶೀಲಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಯಾವುದು ಸತ್ಯ, ಯಾವುದು ಸುಳ್ಳು?
ಪೊಲೀಸ್​ ಮೂಲಗಳ ಪ್ರಕಾರ ಮೃತ ವಿದ್ಯಾಥಿರ್ನಿಗೆ ಓರ್ವ ವಿದ್ಯಾಥಿರ್ಯೊಂದಿಗೆ ಪ್ರೇಮವಿತ್ತು ಎನ್ನಲಾಗಿದೆ. ವಿದ್ಯಾಥಿರ್ಯು ತಮ್ಮ ಸಂಬಂಧವನ್ನು ಕಡಿತಗೊಳಿಸಿದ್ದರಿಂದ ವಿದ್ಯಾಥಿರ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಈ ಮಾಹಿತಿಯನ್ನು ಅಲ್ಲಗಳೆದಿರುವ ಪೋಷಕರು, ನನ್ನ ಮಗಳು ಪ್ರೇಮ ವೈಲ್ಯದಿಂದ ನೇಣು ಬಿಗಿದುಕೊಂಡಿದ್ದೆ ಆದರೆ ಅವಳ ಮೈಮೇಲೆ ಗಾಯಗಳು ಹೇಗೆ ಮೂಡಿವೆ. ಕವಿ ಮತ್ತು ಮೂಗಿನಿಂದ ರಕ್ತ ಏಕೆ ಬಂದಿತ್ತು. ಹಲ್ಲುಗಳು ಏಕೆ ಮುರಿದಿವೆ. ಈ ಎಲ್ಲ ಅನುಮಾನಗಳಿದ್ದು, ನನ್ನ ಮಗಳ ಕೊಲೆ ಆಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೋಟ್​:
ಮಗಳ ಶವ ಗಮನಿಸಿದಾಗ ಹಲ್ಲು ಪುಡಿ ಆಗಿದ್ದವು. ಕವಿ ಮತ್ತು ಮೂಗಿನಲ್ಲಿ ರಕ್ತ ಬಂದಿವೆ. ಕುತ್ತಿಗೆ ಮೇಲೆ ಬೆರಳಿನ ಗುರುತುಗಳಿವೆ. ಹಾಗಾಗಿ ಈ ಬಗ್ಗೆ ತನಿಖೆ ಆಗಬೇಕು. ಈ ಬಗ್ಗೆ ಪೊಲೀಸ್​ ವರಿಷ್ಠಾಧಿಕಾರಿ ಜತೆ ಚರ್ಚೆ ನಡೆಸಿದ್ದೇವೆ. ಮನವಿಯನ್ನೂ ನೀಡಿದ್ದೇವೆ. ಪಾರದರ್ಶಕ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಲಕ್ಷಿ$್ಮ ಹಾನಾಪುರ, ಮೃತ ವಿದ್ಯಾಥಿರ್ನಿ ತಾಯಿ
ಕೋಟ್​:
ಮೃತ ವಿದ್ಯಾಥಿರ್ನಿ ಪೋಷಕರು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮನವಿ ನೀಡಿದ್ದಾರೆ. ನಾನು ಕೂಡ ಪೋಷಕರ ಜತೆ ಚಚಿರ್ಸಿದ್ದೇನೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಕೊಲೆಯೋ? ಆತ್ಮಹತ್ಯೆಯೋ ಎಂಬುದು ಸಾಾಧಾರಗಳ ಮೂಲಕವೇ ಹೇಳಬೇಕಾಗುತ್ತದೆ. ಪೋಸ್ಟಮಾರ್ಟಮ್​ ವರದಿ ಅನುಸಾರ ನಿರ್ಧಾರಕ್ಕೆ ಬರಲಾಗುತ್ತಿದೆ. ಪಾರದರ್ಶಕ ತನಿಖೆ ನಡೆಸಲಾಗುತ್ತಿದೆ.
ರೋಹನ್​ ಜಗದೀಶ, ಎಸ್ಪಿ, ಗದಗ