ನ್ಯಾಯಾಂಗದ ಆದೇಶ ಮೀರಿ Feb.28, 2025 ರಂದು ನಗರಸಭೆ ಚುನಾವಣೆ ನಡೆಸಿ, ನ್ಯಾಯಾಂಗ ನಿಂಧನೆ ಪ್ರಕರಣ ಎದುರಿಸುತ್ತಿದ್ದ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಡಳಿತವು ಸೋಮವಾರ ಹೈಕೋರ್ಟಗೆ ತಪ್ಪೊಪ್ಪಿಗೆ ಪತ್ರ ನೀಡಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಈ ಹಿನ್ನೆಲೆ ಚುನಾವಣಾ ಅಧಿಕಾರಿ ಗಂಗಪ್ಪ ಎಂ ಅವರ ಮೇಲಿದ್ದ ನ್ಯಾಯಾಂಗ ನಿಂಧನೆ ಪ್ರಕರಣವನ್ನು ಹೈಕೊರ್ಟ ಇತ್ಯರ್ಥಗೊಳಿಸಿದ್ದು, ಚುನಾವಣಾ ಅಧಿಕಾರಿ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೇನಿದ್ದರೂ ಬಿಜೆಪಿ ಸದಸ್ಯರ ಅನರ್ಹ ಪ್ರಕರಣ ವಿಚಾರಣೆಯೊಂದೇ ಬಾಕಿ ಇದ್ದು, ಈ ವಿಚಾರಣೆ ಬಳಿಕವೇ ನಗರಸಭೆ ಚುನಾವಣೆ ನಡೆಯಲಿದೆ.
ಕಳೆದ ವರ್ಷ 2025 Feb. 28 ರಂದು ಮಧ್ಯಾಹ್ನ 2.30ಕ್ಕೆ ನಗರಸಭೆ ಅಧಯಕ್ಷ ಉಪಾಧ್ಯಕ್ಷ ಆಯ್ಕೆಗೆ ಚನಾವಣೆ ನಿಗಧಿ ಆಗಿತ್ತು. ಮೂವರು ಸದಸ್ಯರ ಅಮಾನತ್ತು ಆದೇಶದಿಂದ ಬಿಜೆಪಿ ಸದಸ್ಯರ ಸಂಖ್ಯಾಬಲ 15ಕ್ಕೆ ಕುಸಿದಿತ್ತು. 17 ಜನ ಕಾಂಗ್ರೆಸ್ ಸದಸರಿದ್ದರು. ಸ್ವಾಭಾವಿಕವಾಗಿ ಕಾಂಗ್ರೆಸ್ಸಿನ ಕೃಷ್ಣ ಪರಾಪುರೆ ಮತ್ತು ಶಂಕುತಲಾ ಅಕ್ಕಿ ಅವರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರಸ್ಸಿನಿಂದ ನಾಮ ಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಚಂದ್ರು ತಡಸದ, ವಿಜಯಲಕ್ಷಿ$್ಮ ದಿಂಡೂರು ನಾಮ ಪತ್ರ ಸಲ್ಲಿಸಿದ್ದರು. ಸಂಖ್ಯಾಬಲದಲ್ಲಿ ಕುಸಿದ್ದಿದ್ದ ಬಿಜೆಪಿ ಸದಸ್ಯರ ಮೇಲ್ಮನ್ಮವಿ ಅಜಿರ್ಯನ್ನು ಧಾರವಾಡ ಹೈಕೋರ್ಟ ಪೀಠದಲ್ಲಿ ಮಧ್ಯಾಹ್ನ 1 ಗಂಟೆಗೆ (2025 ೆ. 28) ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು. ಮಧ್ಯಾಹ್ನ 1.40ಕ್ಕೆ ಚುನಾವಣೆ ಮುಂದೂಡುವಂತೆ ಹೈಕೋರ್ಟ ಆದೇಶ ನೀಡಿತ್ತು. ಚುನಾವಣೆಗೆ ತಡೆಯಾಜ್ಞೆ ನೀಡಿದ್ದರೂ ಸಹ ಚುವಾನಣಾ ಪ್ರಕ್ರಿಯೆ ಸಂದರ್ಭದಲ್ಲಿ ತಡೆಯಾಜ್ಞೆ ದೃಢೀಕರಣ ಪ್ರತಿ ಚುನಾವಣಾಧಿಕಾರಿ ಕೈ ಸೇರಿರಲಿಲ್ಲ. ಈ ನಡುವೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಕಾರಣ ನಗರಸಭೆಯ ಜಾಲತಾಣ, ಇಂಟರನೆಟ್ಗಳನ್ನು ಸ್ಥಗಿತಗೊಳಿಸಲಾಗಿತ್ತು. ಚುನಾವಣೆಗೆ ಕೊರ್ಟ ತಡೆಯಾಜ್ಞೆ ನೀಡಿದೆ ಎಂಬ ಉತ್ಸಾಹದಲ್ಲೇ ಬಿಜೆಪಿ ಸದಸ್ಯರು ಮತದಾನ ಕೊಠಡಿಯಿಂದ ಹೊರ ಬಂದಿದ್ದರು. ಈ ವೇಳೆ ಮತದಾನದ ಕೊಠಡಿ ಬಾಗಿಲು ಮುಚ್ಚಿಸಿದ ಚುನಾವಣಾ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ನಡೆಸಿದರು. ಸ್ವಾಭಾವಿಕವಾಗಿ ಕಾಂಗ್ರೆಸ್ ಗೆಲವು ಸಾಧಿಸಿತು. ಹೈಕೋರ್ಟ ತಡೆಯಾಜ್ಞೆ ನೀಡಿದರು ಚುನಾವಣೆ ನಡೆಸಿದ್ದ ಚುನಾವಣಾ ಅಧಿಕಾರಿ ವಿರುದ್ಧ ಬಿಜೆಪಿ ಸದಸ್ಯರು ಹೈಕೋರ್ಟಗೆ ಮೊರೆ ಹೋಗಿದ್ದರು. ಕಳೆದೊಂದು ವರ್ಷದಿಂದ ಕಾನೂನು ಸಮರದ ಹಗ್ಗ ಜಗ್ಗಾಟದಲ್ಲಿ ಕೊನೆಗೂ ನ್ಯಾಯಾಂಗ ನಿಂಧನೆ ಪ್ರಕರಣ ಇತ್ಯರ್ಥಗೊಂಡಿದೆ.
ಚುನಾವಣಾ ಅಧಿಕಾರಿ ಅವರು ನ್ಯಾಯಾಂಗ ನಿಂಧನೆ ಪ್ರಕರಣ ಕೈಬಿಡಲು ತಪ್ಪೊಪ್ಪಿಗೆ/ಸಮಜಾಯಿಸಿ/ಕ್ಷಮೆ ಅಜಿರ್ ಸಲ್ಲಿಸಿದ್ದಾರೆ. ಅಜಿರ್ಯಲ್ಲಿ "ಈಗಾಗಲೇ ನಡೆದ ಚುನಾವಣೆ ರದ್ದುಗೊಳಿಸಲಾಗಿದೆ ಮತ್ತು ಹೊಸ ಚುನಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ನ್ಯಾಯಾಂಗ ನಿಂಧನೆ ಪ್ರಕರಣ ಕೈಬಿಡಬೇಕು' ಎಂದು ಮನವಿ ಮಾಡಿದ್ದಾರೆ. ಅಜಿರ್ ಪುರಸ್ಕರಿಸಿರುವ ನ್ಯಾಯಾಲಯ ನ್ಯಾಯಾಂಗ ನಿಂಧನೆ ಪ್ರಕರಣ ಕೈಬಿಟ್ಟಿದೆ.
ಚುನಾವಣೆಗೆ ತಡೆಯಾಜ್ಞೆ ಬಂದ ನಂತರ (ವರ್ಷ 2025 ೆ. 28) ಅಂದಿನ ಅಪರ ಜಿಲ್ಲಾಧಿಕಾರಿ ಆಗಿದ್ದ ಅನ್ನರ್ಪೂಣ ಅವರು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಲು ನಗರಸಭೆಗೆ ದೌಡಾಯಿಸಿದ್ದರು. ಅಷ್ಟೊತ್ತಿಗೆ ಚುನಾವಣೆ ನಡೆದು ಕಾಂಗ್ರೆಸ್ ಅಭ್ಯಥಿರ್ಗಳು ನಗುಮೊಗದಿಂದಲೇ ನಗರಸಭೆಯಿಂದ ಹೊರ ಬಂದಿದ್ದರು.
ಕೋರ್ಟ ಆದೇಶದ ನಂತರವು ಚುನಾವಣೆ ನಡೆಸಿದ್ದ ಚುನಾವಣಾ ಅಧಿಕಾರಿ ಗಂಗಪ್ಪ ಅವರು ನ್ಯಾಯಾಂಗ ನಿಂಧನೆಗೆ ಒಳಗಾಗಿದ್ದರು. ಈಗ ಕೋರ್ಟಗೆ ತಪ್ಪೊಪ್ಪಿಗೆ ಪತ್ರ ನೀಡಿದ್ದರಿಂದ ಪ್ರಕರಣ ಇತ್ಯರ್ಥಗೊಂಡಿದೆ. ಕಾನೂನು ಸಮರದಲ್ಲಿ ನಮಗೆ ಗೆಲವು ಸಿಗಲಿದೆ.
ಉಷಾ ದಾಸರ, ಮಾಜಿ ನಗರಸಭೆ ಅಧ್ಯಕ್ಷ
* ಬಿಜೆಪಿ ಅಧಿಕಾರದಲ್ಲಿ ಇದ್ದ ಸಂರ್ಭದಲ್ಲಿ ವಕಾರು ಸಾಲು ಲೀಸ್ ನೀಡುವ ಠರಾವು ನಿರ್ಣಯ.
* ವಕಾರು ಸಾಲು ಠರಾವು ದೃಢೀಕರಣ ಪತ್ರಿಯನ್ನು ಲೀಸ್ ಪಡೆದ ಮಾಲೀಕರಿಂದ ಕೋರ್ಟಗೆ ಸಲ್ಲಿಕೆ.
*ಠರಾವು ದರಢೀಕರಣ ಪತ್ರಕ್ಕೆ ನಕಲಿ ಸಹಿ ಮಾಡಿದ್ದಾರೆ ಎಂದು ಮೂವರು ಸದಸ್ಯರು ಸೇರಿದಂತೆ ಇತರರ ವಿರುದ್ಧ ಠಾಣೆಯಲ್ಲಿ ಪೌರಾಯುಕ್ತರು ದೂರು ದಾಖಲು.
* ಜಾಮೀನು ಕೋರಿ ಸದಸ್ಯರು ನ್ಯಾಯಾಲಯ ಮೊರೆ. ಜಾಮೀನು ಪಡೆಯಲು ಯಶಸ್ವಿ.
* ಪ್ರಕರಣ ರದ್ದು ಕೋರಿ ಸದಸ್ಯರಿಂದ ನ್ಯಾಯಾಲಯಕ್ಕೆ ಅಜಿರ್ ಸಲ್ಲಿಕೆ. ಅಜಿರ್ ತಿರಸತ.
* ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಕಲಿ ಸಹಿ ಎಂದು ದೃಢ.
* ಪೊಲೀಸರಿಂದ ಚಾರ್ಜಶೀಟ್ ಸಲ್ಲಿಕ್ಕೆ. ನಕಲಿ ಠರಾವು ಬಗ್ಗೆ ಚಾರ್ಜ ಶೀಟ್ ನಲ್ಲಿ ಉಲ್ಲೇಖ.
* ನಕಲಿ ಠರಾವು ಆರೋಪ ಹಿನ್ನೆಲೆ ಸದಸ್ಯರ ಅಮಾನತ್ತು ಕೋಟಿ ಪೌರಾಯುಕ್ತ, ಜಿಲ್ಲಾಧಿಕಾರಿಗಳಿಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ.
* ಪ್ರಕರಣ ವಿಚಾರಣೆ ನಡೆಸಿದ್ದ ಪ್ರಾದೇಶಿಕ ಆಯುಕ್ತರಿಂದ ಸದಸ್ಯರ ಸದಸ್ಯತ್ವ ಸ್ಥಾನದಿಂದ ಅನರ್ಹ ಆದೇಶ.
* ಪ್ರಾದೇಶಿಕ ಆಯುಕ್ತರ ಆದೇಶ ರದ್ದು ಕೋರಿ ಸದಸ್ಯರಿಂದ ಕೊರ್ಟ ಮೊರೆ. ಅಮಾನತ್ತು ಆದೇಶ ರದ್ದು.
* ಮತದಾನ ಹಕ್ಕು ನೀಡುವಂತೆ ಸದಸ್ಯರಿಂದ ಕೋರ್ಟ ಮೊರೆ. ಹೈಕೋರ್ಟ ಅಸ್ತು.
* ಸುಪ್ರೀಂ ಕೋರ್ಟ ಪ್ರಕರಣಗಳ ಗಣನೆಗೆ ತೆಗೆದುಕೊಂಡು ಆದೇಶ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಕೋರ್ಟ್ ಸೂಚನೆ
* ಹೈಕೋರ್ಟ ಆದೇಶ ನೀಡಿದ ದಿನ ಸಂಜೆ ವೇಳೆ ಸುಪ್ರೀಂ ಕೋರ್ಟ ಪ್ರಕರಣ ಉಲ್ಲೇಖಿಸಿದ ಗುರುವಾರ ಪ್ರದಾದೇಶಿಕ ಆಯುಕ್ತರಿಂದ ಮತ್ತೊಮ್ಮೆ ಅಮಾನತ್ತು ಆದೇಶ.
* ಅಮಾನತ್ತು ಹಿನ್ನೆಲೆ ಚುನಾವಣೆ ಮುಂದೂಡುವಂತೆ ಶುಕ್ರವಾರ ಬೆಳಗ್ಗೆ ಬಿಜೆಪಿ ಸದಸ್ಯರು ಕೊರ್ಟ ಮೊರೆ. ಮಧ್ಯಾಹ್ನ 1.40ಕ್ಕೆ ಚುನಾವಣೆ ಮೂಂದೂಡಿದ ಕೋರ್ಟ
* ಕೋರ್ಟ ಆದೇಶ ದೃಢೀಕೃತ ಪತ್ರಿ ಕೈ ಸೇರದ ಹಿನ್ನೆಲೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾ ಅಧಿಕಾರಿ.
* ಕಾಂಗ್ರೆಸ್ ಪಕ್ಷಕ್ಕೆ ಗೆಲವು, ಕಾನೂನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪ.
* ಚುನಾವಣಾ ಪ್ರಕ್ರಿಯೆ ವಿರುದ್ಧ ಬಿಜೆಪಿ ಕೋರ್ಟ ಮೊರೆ. ಮಾ.3 ರಂದು ವಿಚಾರಣೆ ನಿಗದಿ.
* ೆ.27ರಂದು ಮಾ.3ರ ಚುನಾವಣೆಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ.
* ಮಾ.2ರಂದು ನ್ಯಾಯಾಂಗ ನಿಂಧನೆ ಪ್ರಕರಣ ಇತ್ಯರ್ಥ. ಅನರ್ಹತೆ ಪ್ರಕರಣವೊಂದೇ ಬಾಕಿ