- ಕಳೆದ ಬಾರಿ 17ನೇ ಸ್ಥಾನದಲ್ಲಿದ್ದ ಜಿಲ್ಲೆ
- 92.60 ವಿದ್ಯಾಥಿರ್ಗಳು, 97.68 ವಿದ್ಯಾಥಿರ್ನಿಯರು ಪಾಸ್..
- ಜಿಲ್ಲೆಯ ಒಟ್ಟು ಫಲಿತಾಂಶ ಶೇ. 95.24
- ಜಿಲ್ಲೆಗೆ ಮುಂಡರಗಿ ಸ್ಟ್, ಗದಗ ಶಹರ ಲಾಸ್ಟ್
ಗುರುವಾರ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆ ಶೇ. 95.24 ಫಲಿತಾಂಶದೊಂದಿಗೆ 16ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಳೆದ ಬಾರಿ 17ನೇ ಸ್ಥಾನದಲ್ಲಿದ್ದ ಗದಗ ಜಿಲ್ಲೆ ಈ ಬಾರಿ ಒಂದು ಸ್ಥಾನ ಜಿಗಿತಗೊಂಡಿದೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 7584 ಹೆಣ್ಣು ಮಕ್ಕಳ ಪೈಕಿ 7408 (ಶೇ.97.68 ) ಹಾಗೂ ಪರೀಕ್ಷೆಗೆ ಹಾಜರಾದ 7028 ಗಂಡು ಮಕ್ಕಳ ಪೈಕಿ 6508 (ಶೇ. 92.60) ವಿದ್ಯಾಥಿರ್ಗಳು ಪಾಸಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು ಹಾಜರಾದ 14612 ವಿದ್ಯಾಥಿರ್ಗಳ ಪೈಕಿ 13916 (ಶೇ.95.24) ವಿದ್ಯಾಥಿರ್ಗಳು ತೇರ್ಗಡೆ ಹೊಂದಿದ್ದಾರೆ. 2023- 24ನೇ ಸಾಲಿನಲ್ಲಿ ಶೇ. 74.76 ಫಲಿತಾಂಶದೊಂದಿಗೆ ಹಾಗೂ 2024-25ನೇ ಸಾಲಿನಲ್ಲಿ ಶೇ. 67. 72 ಫಲಿತಾಂಶದೊಂದಿಗೆ ಎರಡೂ ಬಾರಿಯೂ ಜಿಲ್ಲೆ 17ನೇ ಸ್ಥಾನವನ್ನೇ ಗಳಿಸಿತ್ತು. ಈ ಬಾರಿ ಶೇ. 95.24 ಲಿತಾಂಶದೊಂದಿಗೆ 16ನೇ ಸ್ಥಾನ ಪಡೆದು ಒಂದು ಸ್ಥಾನ ಏರಿಕೆ ಕಂಡು ಸಾಧನೆ ಮಾಡಿದೆ. ಫಲಿತಾಂಶದಲ್ಲಿ ವಿದ್ಯಾಥಿರ್ನಿಯರೇ ಮೆಲುಗೈ ಸಾಧಿಸಿದ್ದಾರೆ ಎಂಬುದು ಹೊಸತೇನಲ್ಲದ ವಿಷಯ.
ರೋಣ ತಾಲೂಕಿನ ಇಟಗಿ ಗ್ರಾಮದ ಆದರ್ಶ ವಿದ್ಯಾಲಯದ(ಆರ್ಎಂಎಸ್ಎ) ಪ್ರವಿಣಕುಮಾರ ಸೊಬಗಿನ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂಡರಗಿಯ ಎಸ್ಎಫ್ಎಸ್ ಆಂಗ್ಲ ಮಾಧ್ಯಮ ಶಾಲೆಯ ಸಂಧ್ಯಾ ಲಮಾಣಿ 621 ಅಂಕ ಗಳಿಸುವ ಮೂಲಕ ಜಿಲ್ಲೆಗೆ ದ್ವೀತಿಯ ಹಾಗೂ ಗಜೇಂದ್ರಗಡ ಪಟ್ಟಣದ ಕಿತ್ತೂರು ಚೆನ್ನಮ್ಮ ವಸತಿ ನಿಲಯದ ವಿದ್ಯಾಥಿರ್ನಿ ಸುಷ್ಮಾ ನಾಯಕ ಹಾಗೂ ಮುಂಡರಗಿ ತಾಲೂಕು ಕೊರ್ಲಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯದ(ಆರ್ಎಂಎಸ್ಎ) ರೇವಂತರೆಡ್ಡಿ ನಾಗರಾಜ ಅವರು 620 ಅಂಕ ಗಳಿಸುವ ಮೂಲಕ ಇಬ್ಬರೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಮುಂಡರಗಿ ತಾಲೂಕು ಪ್ರಥಮ ಸ್ಥಾನ, ಗದಗ ನಗರದ ಕೊನೆ ಸ್ಥಾನಗಳಿಸಿದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಶಿರಹಟ್ಟಿ ತಾಲೂಕು ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಗದಗ ಶಹರ ಲಿತಾಂಶ ಕಳೆದ ಬಾರಿಯೂ ಕೊನೆ ಸ್ಥಾನದಲ್ಲಿ ಇತ್ತು. ಈ ಬಾರಿಯೂ ಕೊನೆಯ ಸ್ಥಾನದಲ್ಲೇ ಇದೆ.
ಶೇ. 100 ರಷ್ಟು ಫಲಿತಾಂಶದಲ್ಲಿ ಸಾಧನೆ:
ಪ್ರಸಕ್ತ 2025 - 26ನೇ ಸಾಲಿನಲ್ಲಿ ಶೇ. 100 ರಷ್ಟು ಸಾಧನೆ ಮಾಡಿದ ಶಾಲೆಗಳ ಸಂಖ್ಯೆ ಕಳೆದ ಬಾರಿಗಿಂತಲೂ ಅಧಿಕಗೊಂಡಿವೆ. ಶಿಕ್ಷಣ ಇಲಾಖೆ ಪರಿಶ್ರಮಕ್ಕೆ ಇದು ಸಾಯಾಗಿದೆ. ಜಿಲ್ಲೆಯಲ್ಲಿ 63 ಸರ್ಕಾರಿ ಶಾಲೆಗಳು, 29 ಅನುದಾನಿತ ಶಾಲೆಗಳು, 33 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 125 ಶಾಲೆಗಳು ಶೇ. 100 ರಷ್ಟು ಲಿತಾಂಶ ಸಾಧಿಸಿವೆ. ಕಳೆದ 2024 25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ಕಾರಿ 5 ಶಾಲೆಗಳು, ಅನುದಾನಿತ 1 ಶಾಲೆ ಮತ್ತು ಅನುದಾನ ರಹಿತ 5 ಶಾಲೆಗಳು ಸೇರಿ ಒಟ್ಟು 11 ಶಾಲೆಗಳು ಮಾತ್ರ ಶೇ. 100 ರಷ್ಟು ಫಲಿತಾಂಶ ಸಾಧಿಸಿದ್ದವು.
ಜಿಲ್ಲಾ ಕೇಂದ್ರದಲ್ಲಿ ಗದಗ ಶಹರವು ಜಿಲ್ಲಾ ವ್ಯಾಪ್ತಿಯ ಲಿತಾಂಶದಲ್ಲಿ ಏರಿಕೆ ಕಾಣುತ್ತಿಲ್ಲ. 2024ನೇ ಸಾಲಿನಲ್ಲಿ ಗದಗ ಶಹರ ಶೇ. 66.24 ಲಿತಾಂಶದೊಂದಿಗೆ ಜಿಲ್ಲಾ ವ್ಯಾಪ್ತಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. 2025ನೇ ಸಾಲಿನಲ್ಲಿ ಶೇ. 58.60 ಫಲಿತಾಂಶದೊಂದಿಗೆ ಕೊನೆಯ 6ನೇ ಸ್ಥಾನದಲ್ಲಿತ್ತು. ಪ್ರಸಕ್ತ 2026ರಲ್ಲೂ 92.80 ಲಿತಾಂಶದೊಂದಿಗೆ 6ನೇ ಸ್ಥಾನದಲ್ಲಿದೆ. ಆದರೆ, ಶೇ. ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ ಎಂಬುದು ಅಭಿನಂದನಾರ್ಹ.
ತಾಲೂಕು - ಶಿಕ್ಷಣ ಸಂಸ್ಥೆ ವಿದ್ಯಾಥಿ ಹೆಸರು ಶೇ. ಅಂಕ ಜಿಲ್ಲೆಯಲ್ಲಿ ಸ್ಥಾನ
ರೋಣ - ಇಟಗಿ ಗ್ರಾಮದ ಆದರ್ಶ ವಿದ್ಯಾಲಯದ ಪ್ರಬಿಣಕುಮಾರ ಸೊಬಗಿನ - 99.52 - ಪ್ರಥಮ
ಮುಂಡರಗಿ - ಎಸ್ಎಫ್ಎಸ್ ಆಂಗ್ಲ ಮಾಧ್ಯಮ - ಸಂಧ್ಯಾ ಲಮಾಣಿ - 99.36 ದ್ವೀತಿಯ
ಗಜೇಂದ್ರಗಡ - ಕಿತ್ತೂರು ಚೆನ್ನಮ್ಮ ವಸತಿ ನಿಲಯ - ಸುಷ್ಮಾ ನಾಯಕ - 99.20 ತೃತೀಯ
ಮುಂಡರಗಿ ಕೊರ್ಲಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯದ - ರೇವಂತರೆಡ್ಡಿ ನಾಗರಾಜ 99.20 - ತೃತೀಯ
2024ರ ಫಲಿತಾಂಶ - ಶೇ. 74.76
2025ರ ಫಲಿತಾಂಶ - ಶೇ. 67.72
ಕನ್ನಡ ಮಾಧ್ಯಮದಲ್ಲಿ ಗಜೇಂದ್ರಗಡ ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ಪದ್ಮಾವತಿ ಶಾಭಾದಿ 619(ಶೇ. 99.04), ಆಂಗ್ಲ ಮಾಧ್ಯಮದಲ್ಲಿ ರೋಣ ತಾಲೂಕಿನ ಇಟಗಿ ಗ್ರಾಮದ ಆದರ್ಶ ವಿದ್ಯಾಲಯದ ಪ್ರಬಿಣಕುಮಾರ ಸೊಬಗಿನ 622(99.52) ಹಾಗೂ ಉರ್ದು ಮಾಧ್ಯಮದಲ್ಲಿ ಗದಗ ಪಟ್ಟಣದ ಸರ್ಕಾರಿ ಉರ್ದು ಶಾಲೆಯ ಆಲಿಯಾ ಕುಕನೂರು 602(96.32) ಅಂಕ ಪಡೆಯುವ ಮೂಲಕ ಮಾಧ್ಯಮವಾರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಜಿಲ್ಲೆಯ ಲಿತಾಂಶ ಸುಧಾರಣೆ ವಿಶೇಷ ಉಪನ್ಯಾಸ, ಕಾರ್ಯಅಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಶೈಕ್ಷಣಿಕವಾಘಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿಗಳನ್ನು ತೆಗೆದುಕೊಳ್ಳಲಾಗಿದೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪ್ರತಿ ವಿದ್ಯಾಥಿರ್ಗೂ ವೈಯಕ್ತಿಕವಾಗಿ ಕರೆ ಮಾಡುವ ಮೂಲಕ ಓದು ಬರಹಕ್ಕೆ ಆಧ್ಯತೆ ನೀಡಲಾಗಿತ್ತು. ಜಿಲ್ಲೆಯ ಎಲ್ಲ ಶಿಕ್ಷಕರು ವಿಶೇಷ ಆಸಕ್ತಿ ವಹಿಸಿದ್ದರಿಂದ ಈ ಬಾರಿ ಲಿತಾಂಶ ಸುಧಾರಣೆ ಕಂಡಿದೆ. ಮುಂದೆಯೂ ಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗುವುದು.
ಆರ್. ಎಸ್. ಬುರಡಿ, ಡಿಡಿಪಿಐ ಗದಗ