ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಜಿಲ್ಲೆ ವಿವಿಧ ಭಾಗಗಳಲ್ಲಿ ನಿರ್ಮಾಣ ಆಗುತ್ತಿರುವ ಮನೆಗಳ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ಸಾಗದ ಹಿನ್ನೆಲೆ ಸಾವಿರಾರು ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಕಡೆಗಳಲ್ಲಿ ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಬಡ ಕುಟುಂಬಗಳು ಸರ್ಕಾರದ ಭರವಸೆಯತ್ತ ಕಾದು ಕುಳಿತಿವೆ. ಕಳೆದ ಎರಡು ವರ್ಷದಲ್ಲಿ ಜಿಲ್ಲೆಗೆ ಒಟ್ಟು 2413 ಮನೆಗಳು ಮಂಜೂರಾಗಿದ್ದು ಇದರಲ್ಲಿ ಕೇವಲ 1359 ಮನೆಗಳು ಮಾತ್ರ ರ್ಪೂಣಗೊಂಡಿವೆ ಇನ್ನೂ ಶೇ. 50 ರಷ್ಟು ಬಾಕಿ ಇವೆ.
ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಆಶ್ರಯ ಯೋಜನೆಗಳಡಿ ಕೊಳಗೇರಿ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸುವ ಉದ್ದೇಶದಿಂದ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಗುತ್ತಿಗೆದಾರರ ನಿರ್ಲಕ್ಷ$್ಯ, ಅನುದಾನ ಬಿಡುಗಡೆಯಲ್ಲಿ ವಿಳಂಬ, ತಾಂತ್ರಿಕ ಅಡಚಣೆ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಪರಿಣಾಮ ಕಾಮಗಾರಿ ನಿಧಾನಗೊಂಡಿದೆ.
ಗದಗ ತಾಲೂಕು ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ನಿಗದಿತ ಗುರಿಗಿಂತ ಕಡಿಮೆ ಸಾಧಿಸಲಾಗಿದೆ. ಕಳೆದ ಎರಡೂ ವರ್ಷಗಳ ಹಿಂದೆಯೇ ಮಂಜೂರಾದ ಮನೆಗಳು ಇನ್ನೂ ರ್ಪೂಣಗೊಂಡಿಲ್ಲ. ಕೆಲವು ಕಡೆ ಫಲಾನುಭವಿಗಳಿಂದ ಹಣ ಪಾವತಿಯಾದರೂ ಸಹ ನಿರ್ಮಾಣ ರ್ಪೂಣಗೊಳಿಸದೇ ಬಾಕಿ ಉಳಿದಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ತಾಲೂಕಿನಲ್ಲಿ ಒಟ್ಟು 7.37 ಕೋಟಿ ಅನುದಾನ ಬಳಕೆ ಆಗಿದೆ. ತಾಲೂಕಿನಲ್ಲಿ 863 ಮನೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಅನುಮತಿ ಸಿಕ್ಕಿತ್ತು. ಇದರಲ್ಲಿ 514 ಮನೆಗಳು ರ್ಪೂಣಗೊಂಡಿವೆ. ಇನ್ನೂಳಿದ ಮನೆಗಳ ಕಾಮಗಾರಿ ವಿವಿಧ ಹಂತದಲ್ಲಿ ನಡೆಯುತ್ತಿದೆ. ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿಗೆ 4.03 ಕೋಟಿ ಅನುದಾನ ಬಿಡುಗಡೆ ಆಗಿದ್ದು, 750 ಮನೆಗಳಿಗೆ ಮಂಜೂರಾತಿ ಸಿಕ್ಕಿದೆ. 420 ಮನೆಗಳು ರ್ಪೂಣಗೊಂಡಿವೆ. 40 ಮನೆಗಳು ಆರಂಭಿಸುವುದು ಇನ್ನೂ ಬಾಕಿ ಇದೆ. ಅದೇ ರೀತಿ ರೋಣ ಮತ್ತು ಗಜೇಂದ್ರಡದಲ್ಲಿ 1.04 ಕೋಟಿ ಅನುದಾನ ಬಿಡುಗಡೆ ಆಗಿದೆ. 300 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿತ್ತು. ಅದರಲ್ಲಿ 200 ಮನೆಗಳ ನಿರ್ಮಾಣ ರ್ಪೂಣಗೊಂಡಿದ್ದು, ಬಾಕಿ 100 ಮನೆಗಳು ವಿವಿಧ ಹಂತದಲ್ಲಿ ಬಾಕಿ ಇವೆ. ನರಗುಂದ ತಾಲೂಕಿನಲ್ಲಿ 2.08 ಕೋಟಿ ವೆಚ್ಚದಲ್ಲಿ 500 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. 90 ಮನೆಗಳನ್ನು ಆರಂಭಿಸುವುದು ಬಾಕಿ ಇದ್ದು, 225 ಮನೆಗಳು ರ್ಪೂಣಗೊಂಡಿವೆ. ಒಟ್ಟಾರೆ ಶೇ. 50 ರಷ್ಟು ಪ್ರಗತಿ ಸಾಧಿಸುವುದು ಬಾಕಿ ಇದ್ದು, ಅನುದಾನ ಬಿಡುಗಡೆ ವಿಳಂಬ ಆಗುತ್ತಿದೆ.
ಗದಗ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹೊರತು ಪಡಿಸಿ, ರಸ್ತೆ ಅಭಿವೃದ್ದಿ ಹಾಗೂ ಇತರೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಹೊಸ ಕೊಳಚೆ ಪ್ರದೇಶಗಳ ಘೋಷಣೆಗಳು ಇಲ್ಲ.
ಮಂಜೂರಾದ ಒಟ್ಟು ಮನೆಗಳ ಸಂಖ್ಯೆ - 2413
ಆರಂಭವಾಗದ ಮನೆಗಳ ಸಂಖ್ಯೆ - 130
ರ್ಪೂಣಗೊಂಡ ಮನೆಗಳ ಸಂಖ್ಯೆ - 1359
ನೆಲಮಟ್ಟದಲ್ಲಿ ಕಾಮಗಾರಿಗಳು ವೇಗ ಪಡೆಯದಿರುವುದು ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಹುಟ್ಟಿಸಿದೆ. ಮನೆ ಮಂಜೂರಾಗಿದೆ ಎನ್ನುವ ದಾಖಲೆ ಇದೆ. ಆದರೆ ಕಟ್ಟಡ ಮಾತ್ರ ಅರ್ಧದಲ್ಲೇ ನಿಂತಿದೆ. ಬಾಡಿಗೆ ಮನೆಯಲ್ಲಿ ವಾಸ ಮುಂದುವರಿದಿದೆ.
ರವಿಕಾಂತ ಅಂಗಡಿ, ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ
ಸ್ಥಳಿಯರು ಹಾಗೂ ಜನಪ್ರತಿನಿಧಿಗಳು ಕೂಡ ಕಾಮಗಾರಿ ತ್ವರಿತಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಬದಲು ಸಮರ್ಪಕ ಹಣಕಾಸು ಒದಗಿಸಿ, ಗುತ್ತಿಗೆದಾರರ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಬೇಕು.
ಚಂದ್ರು ತಡಸದ, ನಗರಸಭೆ ಸದಸ್ಯ
ಲಾನುಭವಿಗಳು 50 ಸಾವಿ ರೂ. ಹಣ ಪಾವತಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 4.50 ಲಕ್ಷ ರೂ ಬಿಡುಗಡೆ ಆಗುತ್ತದೆ. ಅನುದಾನ ಬಂದಂತೆ ಕಾಮಗಾರಿ ರ್ಪೂಣಗೊಳಿಸುತ್ತೇವೆ.
ಮಂಜುನಾಥ, ಎಇಇ, ಕೊಳಗೇರಿ ಅಭಿವೃದ್ಧಿ ಮಂಡಳಿ