ಗದಗ ತಾಲೂಕಿನ ಲಕ್ಕುಂಡಿ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್​.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕ ಪ್ರಜ್ವಲ್​ ರಿತ್ತಿ ಸನ್ಮಾನಿಸಿ ಗೌರವಿಸಲಾಯಿತು. ಸಿದ್ದು ಪಾಟೀಲ, ಐ.ಎನ್​.ಕುಂಬಾರ, ಪ್ರಕಾಶ ತೋಪಿನ, ವಿ. ವಿ ಗಂಧದ, ಕೆ. ಎಂ. ಪಾಟೀಲ, ತಿಪ್ಪಣ್ಣ ಅಂಬಕ್ಕಿ, ಮಲ್ಲಪ್ಪ ಕಮತರ, ಬಿ. ವಿ. ಪಾಟೀಲ, ಎ. ಎನ್​. ಪೂಜಾರ ಇತರರು ಇದ್ದರು. 
ರಾಜ್ಯ

ನಿಧಿ ಒಪ್ಪಿಸಿದ ಬಾಲಕಿನಿಗೆ ಪಿಯುಸಿ ವರೆಗೂ ಉಚಿತ ಶಿಕ್ಷಣ: ಸಿದ್ದು ಪಾಟೀಲ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ಕಾಮಾಗಾರಿಯ ತಳಪಾಯದಲ್ಲಿ ಸಿಕ್ಕ ಚಿನ್ನಾಭರಣಗಳ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ತಲುಪಿಸಿದ ನಮ್ಮ ಸಂಸ್ಥೆಯ ವಿದ್ಯಾಥಿರ್ ಪ್ರಜ್ವಲ್​ ರಿತ್ತಿ ಅವರಿಗೆ ಪಿಯುಸಿ ವರೆಗೂ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷ ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದರು.
ಜನತಾ ವಿದ್ಯಾವರ್ದಕ ಸಂಸ್ಥೆಯ ಬಿ.ಎಚ್​.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ 8 ನೇ ತರಗತಿಯಲ್ಲಿ ಓದುತ್ತಿರುವ ಪ್ರಜ್ವಲ್​ ರಿತ್ತಿಯವರನ್ನು ಸನ್ಮಾನಿಸಿ ಮಾತನಾಡಿದ ಅವರು ಸಂಸ್ಥೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸರ್ವ ಪದಾಧಿಕಾರಿಗಳ ಸಭೆ ಕರೆದು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಶಾಲೆಯ ಎಲ್ಲ ಕಾರ್ಯ ಚಟುವಟಿಕೆಯಲ್ಲಿಯೂ ಸಹ ಪ್ರಾಮಾಣಿಕತೆಯಿಂದ ಓದುತ್ತಿರುವ ಪ್ರಜ್ವಲ ಅವರು ತನ್ನ ಮನೆ ನಿರ್ಮಾಣದ ಪಾಯದಲ್ಲಿ ದೊರೆತ ಅಮೂಲ್ಯವಾದ ಚಿನ್ನಾಭರಣಗಳ ನಿಧಿಯನ್ನು ಸರ್ಕಾರಕ್ಕೆ ನೀಡಿ ಸಾಮಾಜಿಕ ಬದುಕಿನಲ್ಲಿಯೂ ಸಹ ಪ್ರಮಾಣಿಕತೆ ತೋರಿದ್ದು ಅವರ ಭವಿಷ್ಯದ ಶಿಕ್ಷಣಕ್ಕೆ ಜನತಾ ವಿದ್ಯಾವರ್ದಕ ಸಂಸ್ಥೆಯು ಪಿ.ಯು ವರೆಗೂ ಉಚಿತ ಶಿಕ್ಷಣವನ್ನು ನೀಡುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಐ.ಎನ್​.ಕುಂಬಾರ ಮಾತನಾಡಿ ಪ್ರಜ್ವಲ್​ ವಿದ್ಯಾಥಿರ್ಯಂತಹ ಪ್ರಾಮಾಣಿಕ ವಿದ್ಯಾಥಿರ್ಗಳು ಮನೆ ಮನೆಯಲ್ಲಿ ಇರಬೇಕು ಅಂದಾಗ ಮಾತ್ರ ನಮ್ಮ ಸಂಸ್ಥೆ ಮತ್ತು ಗ್ರಾಮಕ್ಕೆ ಕೀತಿರ್ ಬರುತ್ತದೆ. ಇಂತಹ ವಿದ್ಯಾಥಿರ್ಯನ್ನು ನಮ್ಮ ಸಂಸ್ಥೆಗೆ ಕಳಿಸಿದ್ದು ಕುಟುಂಬ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸಂಸ್ಥೆಯ ಕಾರ್ಯದಶಿರ್ ಪ್ರಕಾಶ ತೋಪಿನ, ವಿ. ವಿ ಗಂಧದ, ಕೆ. ಎಂ. ಪಾಟೀಲ, ತಿಪ್ಪಣ್ಣ ಅಂಬಕ್ಕಿ, ಮಲ್ಲಪ್ಪ ಕಮತರ, ಬಿ. ವಿ. ಪಾಟೀಲ, ಎ. ಎನ್​. ಪೂಜಾರ ಇತರರು ಇದ್ದರು.