ನಗರದ ಗಂಗಾಪೂರ ಪೇಟೆಯ ದುರ್ಗಾದೇವಿ ಜಾತ್ರಾ ಮಹೋತ್ಸವ ಕುರಿತು ಸಿದ್ದಪ್ಪ ಪಲ್ಲೇದ ಸುದ್ದಿಗೋಷ್ಠಿ ನಡೆಸಿದರು. ಅನಿಲಕುಮಾರ ಸಿದ್ದಮ್ಮನಹಳ್ಳಿ, ಈಶ್ವರ ಕೋಟೆ, ರವಿ ಶಿದ್ಲಿಂಗ, ಎಂ. ಎಸ್​ ಪಾಟೀಲ, ಬಸವರಾಜ ಬೆಳದಡಿ, ಯಮನಪ್ಪ ಗೊಂದಿ, ಬಸಪ್ಪ ಶಿರೂರ, ದೇವಪ್ಪ ಹುರಕಟ್ಟಿ, ಹುಲಿಗೆಪ್ಪ ಜಡಿ, ಬಸವರಾಜ ಅಣ್ಣಿಗೇರಿ, ಶರಣಪ್ಪ ಗಾಣಿಗೇರ, ಬಸವರಾಜ ಕವಳಿಕಾಯಿ, ಬಸವರಾಜ ಹಿತ್ತಲಗುತ್ತಿ ಇತರರು ಇದ್ದರು.  
ರಾಜ್ಯ

ಜೂ. 28 ರಿಂದ ದುರ್ಗಾದೇವಿ ಜಾತ್ರಾ ಮಹೋತ್ಸವ: ಸಿದ್ದಪ್ಪ ಪಲ್ಲೇದ

ಶಿವಾನಂದ ಹಿರೇಮಠ
ಗದಗ:
ನಗರದ ಗಂಗಾಪೂರ ಪೇಟೆಯ ಶ್ರೀದುರ್ಗಾದೇವಿಯ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂತಿರ್ ಪ್ರತಿಷ್ಠಾಪನಾ ಕಾರ್ಯಕ್ರಮವಿ ಜೂ.28 ರಿಂದ ಅದ್ದೂರಿಯಾಗಿ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ಸಿದ್ದಪ್ಪ ಪಲ್ಲೇದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂ. 28 ರಿಂದ ಜು.13 ರ ವರೆಗೆ ಹೋಮ, ಧಾಮಿರ್ಕ, ಸಾಂಸತಿಕ, ಆರೋಗ್ಯ ಶಿಬಿರ, ನಾಟಕ, ರಯತರಿಗೆ ಜಾಗೃತಿ ಕಾರ್ಯಕ್ರಮ, ದೇವಿಯ ಸಹಸ್ರ ನಾಮಾವಳಿ ಪಠಣ ಸೇರಿದಂತೆ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಜು.4 ರಂದು ಕಳಸಾರೋಹಣ, ಜು.7 ರಂದು ಉಡಿ ತುಂಬುವುದು, ಜು. 8 ರಂದು ಮಹಾರಥೋತ್ಸವ, ಜು,9 ರಂದು ಲು ರಥೋತ್ಸವ, ಜು. 10 ರಂದು ಸಾಮೂಹಿಕ ವಿವಾಹ, ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ದುರ್ಗಾದೇವಿಯ ಬೆಳ್ಳಿ ಮೂತಿರ್ಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಗುರು ಸಿದ್ಧವಿರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಡಾ. ಪರಮೇಶ ಕಲ್ಲನಗೌಡರ ಉಪನ್ಯಾಸ ನೀಡಲಿದ್ದಾರೆ. ಎಂ. ಎಸ್​ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಡಿ. ಆರ್​. ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ, ವಿನಾಯಕ ಮಾನ್ವಿ, ಬಸವರಾಜ ಬೆಳದಡಿ ಸೇರಿದಂತೆ ಹಲವರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದರು.
ಅನಿಲಕುಮಾರ ಸಿದ್ದಮ್ಮನಹಳ್ಳಿ, ಈಶ್ವರ ಕೋಟೆ, ರವಿ ಶಿದ್ಲಿಂಗ, ಎಂ. ಎಸ್​ ಪಾಟೀಲ, ಬಸವರಾಜ ಬೆಳದಡಿ, ಯಮನಪ್ಪ ಗೊಂದಿ, ಬಸಪ್ಪ ಶಿರೂರ, ದೇವಪ್ಪ ಹುರಕಟ್ಟಿ, ಹುಲಿಗೆಪ್ಪ ಜಡಿ, ಬಸವರಾಜ ಅಣ್ಣಿಗೇರಿ, ಶರಣಪ್ಪ ಗಾಣಿಗೇರ, ಬಸವರಾಜ ಕವಳಿಕಾಯಿ, ಬಸವರಾಜ ಹಿತ್ತಲಗುತ್ತಿ ಇತರರು ಇದ್ದರು.