ಕಾಂಗ್ರೆಸ್ಸಿನ ಏಳು ಸುತ್ತಿನಕೋಟೆ ಬೇದಿಸಲು ಎಸ್ಡಿಪಿಐ ಸಿದ್ಧತೆ
ವಾರ್ಡ್ ಚುನಾವಣೆಗೆ ಸಿದ್ಧತೆ ನಡೆಸಿ ಎಸ್ಡಿಪಿಐ
12 ವಾರ್ಡ್ಗಳಲ್ಲಿ ಈಗಿನಿಂದಲೇ ಸಿದ್ಧತೆ
ಅಲ್ಪಸಂಖ್ಯಾತ ಮುಸ್ಲಿಂ ಮತಗಳನ್ನು ಶೇ. 99 ರಷ್ಟು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದ ಕಾಂಗ್ರೆಸ್ಸಿಗೆ ಈಗ ಎಸ್ಡಿಪಿಐ ಸಂಟನೆ ತಲೆನೋವಾಗಿ ಪರಿಣಮಿಸಿದೆ. ಮುಂಬರುವ ಸ್ಥಳಿಯ ಸಂಸ್ಥೆ ಹಾಗೂ ವಿಧಾನಸಭೆ ಚುಣಾವಣೆಯಲ್ಲಿ ಎಸ್ಡಿಪಿಐ ಸ್ವತಂತ್ರವಾಗಿ ಸ್ಪಧಿರ್ಸುವುದಾಗಿ ಜಿಲ್ಲೆಯಲ್ಲಿ ಘೋಷಿಸಿದೆ. ಈ ಕುರಿತು ಬೃಹತ್ ಸಮಾವೇಶವನ್ನು ನಡೆಸಿದೆ. ಹಾಗಾಗಿ, ಈ ವರೆಗೆ ಕಾಂಗ್ರೆಸ್ಸಿನ ಏಳುಸುತ್ತಿನ ಕೋಟೆಯಲ್ಲಿ ಭದ್ರವಾಗಿದ್ದ ಮುಸ್ಲಿಂ ಮತಬ್ಯಾಂಕ್ ಹೋಳಾಗುವ ಲಕ್ಷಣಗಳು ಘೋಚರಿಸಿದ್ದು, ಮುಂಬರುವ ಸ್ಥಳಿಯ ಸಂಸ್ಥೆಯ ಚುನಾವಣೆಯಲ್ಲಿ ಮುಸ್ಲಿಂ ಮತಬ್ಯಾಂಕ್ ಹಿಡಿದಿಟ್ಟುಕೊಳ್ಳುವುದೇ ಕಾಂಗ್ರೆಸ್ಸಿಗೆ ಸವಾಲಾಗಿದೆ.
ನಗರದಲ್ಲಿ ಎಸ್ಡಿಪಿಐ ಸಂಟನೆ ಇದೇ ಮೊದಲ ಬಾರಿಗೆ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆ ಸ್ಪರ್ಧೆಗೆ ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಇದರಿಂದ ಕಾಂಗ್ರೆಸ್ ಪಕ್ಷ ಗಲಿಬಿಲಿಗೊಂಡಿದೆ. ಕೆಲ ಮುಸ್ಲಿಂ ಮುಖಂಡರು ಕಾಂಗ್ರೆಸ್ ಪರವಾಗಿದ್ದರೆ, ಇತ್ತೀಚಿನ ಜೆನ್ಜಿ ಮುಸ್ಲಿಂ ಮತದಾರರು ಎಸ್ಡಿಪಿಐ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಜೆನ್ಜಿ ಮುಸ್ಲಿಂ ಮತದಾರರನ್ನು ಕಾಂಗ್ರೆಸ್ ಕಡೆಗೆ ವಾಲಿಸುವುದೇ ಮುಸ್ಲಿಂ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
ನಗರಸಭೆ ಚುನಾವಣೆಗೆ ಸಿದ್ಧತೆ:
ಮೂಲಗಳ ಪ್ರಕಾರ ಎಸ್ಡಿಪಿಐ ಸಂಟನೆ ಮುಂಬರುವ ನಗರಸಭೆ ಚುನಾವಣೆಯಲ್ಲಿ 12 ವಾರ್ಡಗಳಲ್ಲಿ ಗೆಲ್ಲಲು ಈಗಿನಿಂದಲೇ ಸಿದ್ಧತೆ ನಡೆಸಿದೆ. ಎಸ್ಡಿಪಿಐ ಗುರುತಿಸಿ 12 ವಾರ್ಡಗಳಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರಿದ್ದಾರೆ. ಭಾಗಶಃ ಈ 12 ವಾರ್ಡಗಳಲ್ಲಿ ಈಗ ಕಾಂಗ್ರೆಸ್ ನಗರಸಭೆ ಸದಸ್ಯರಿದ್ದು, ವಾರ್ಡ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪೈಪೋಟಿ ನೀಡಲಿದ್ದಾರೆ. ನಗರದ ವಾಡ್ ನಂ 1ರ ಆಶ್ರಯ ಕಾಲೋನಿ, ವಾರ್ಡ ನಂ 10 ಬೆಟಗೇರಿ ಕುರಹಟ್ಟಿ ಪೇಟೆ, ವಾರ್ಡ ನಂ 16 ಡಿಸಿ ಮಿಲ್, ವಾರ್ಡ ನಂ 17 ಜವುಳಗಲ್ಲಿ, ವಾರ್ಡ ನಂ 18ರ ಜವುಳಗಲ್ಲಿ ತಗ್ಗು ಪ್ರದೇಶ, ವಾರ್ಡ ನಂ 20ರ ಖಾನತೋಟ, ವಾರ್ಡ 22ರ ಗಂಗಿಮಡಿ ತಾಜನಗರ, ವಾರ್ಡ ನಂ 23ರ ಒಕ್ಕಲಗೇರಿ ಹಿಂದಿನ ಭಾಗ ಹೀಗೆ ನಗರದ 12 ವಾರ್ಡಗಳಲ್ಲಿ ಎಸ್ಡಿಪಿಐ ಸಿದ್ಧತೆ ನಡೆಸಿದೆ. ಎಸ್ಡಿಪಿಐ ಸಿದ್ಧತೆ ನಡೆಸಿರುವ ಈ ವಾರ್ಡಗಳಲ್ಲಿ ಶೇ. 30 ರಿಂದ ಶೇ. 55 ರಷ್ಟು ಅಲ್ಪಸಂಖ್ಯಾತ ಮುಸ್ಲಿಂ ಮತದಾರರೇ ಇದ್ದಾರೆ.
ಇತ್ತೀಚೆಗೆ ಜರುಗಿ ಗದಗ ಬೆಟಗೇರಿ ಅಂಜುಮನ್ ಚುನಾವಣೆಯಲ್ಲಿ ಎಸ್ಡಿಪಿಐ ಜಯಬೇರಿ ಬಾರಿಸಿದೆ. ಒಟ್ಟು 6 ಸಾವಿರ ಮತಗಳಲ್ಲಿ 3500 ಕ್ಕೂ ಹೆಚ್ಚು ಮತಗಳನ್ನು ಎಸ್ಡಿಪಿಐ ಬಾಚಿದೆ. ಒಟ್ಟು 11 ಸ್ಥಾನಗಳಲ್ಲಿ ಚುನಾವಣೆ ನಡೆದು, ಅದರಲ್ಲಿ 8 ಎಸ್ಡಿಪಿ ಅಭ್ಯಥಿರ್, 3 ಕಾಂಗ್ರೆಸ್ ಬೆಂಬಲಿತ ಅಭ್ಯಥಿರ್ಗಳು ಗೆದ್ದಿದ್ದರು. ಪ್ರಸ್ತುಯ ಅಂಜುಮನ್ ಸಂಸ್ಥೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕೋಶಾಧ್ಯಕ್ಷರಾಗಿ ಎಸ್ಡಿಪಿಐ ಅಭ್ಯಥಿರ್ಗಳೇ ಅಧಿಕಾರ ನಡೆಸುತ್ತಿದ್ದಾರೆ.
ಸರ್ಕಾರ, ಶಾಸಕರುಗಳು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಸಾಕಷ್ಟು ಅನುದಾನ ನೀಡಿದರೂ ಸಹ ಸ್ಥಳಿಯ ಎರಡನೇ ಹಂತದ ಕಾಂಗ್ರೆಸ್ ನಾಯಕರು ಸಮಪರ್ಕವಾಗಿ ಮುಸ್ಲಿಂ ಸಮುದಾಯಕ್ಕೆ ಅನುದಾನ ಒದುಗಿಸುತ್ತಿಲ್ಲ. ಅಲ್ಪಸಂಖ್ಯಾತ ಅಧಿಕ ಇರುವ ಹಿಂದುಳಿದ ವಾರ್ಡಗಳಲ್ಲಿ ಈಗಲೂ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಹೀಗಾಗಿ ಅಲ್ಪಸಂಖ್ಯಾತ ಜೆನ್ಜಿ ಮತದಾರರು ಎಸ್ಡಿಪಿಐ ಕಡೆ ವಾಲುತ್ತಿದ್ದಾರೆ. ಈ ಬೆಳವಣಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೂ ನುಂಗಲಾರದ ತುತ್ತಾಗಿದೆ.
ಇತ್ತೀಚೆಗೆ ದಾವಣಗೆರೆ ದಣ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜಮ್ಮೀರ್ ಅಹಮ್ಮದ ನೀಡಿದ್ದ ಹೇಳಿಕೆಯಿಂದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯಥಿರ್ಗೆ ಟಿಕೆಟ್ ನೀಡಬೇಕು ಎಂಬ ಬಲವಾದ ಕೂಗು ಕೇಳಿಬಂದಿತ್ತು. ಹಲವು ಸುತ್ತಿನ ಮಾತುಕತೆ ನಡೆದು ಸಮರ್ಥ ಮಲ್ಲಿಕಾರ್ಜು ಶಾಮನೂರ ಅವರಿಗೆ ಟಿಕೆಟ್ ನೀಡಲಾಗಿತ್ತು. ಹಲವು ಮುಸ್ಲಿಂ ಮುಖಂಡರು ಮತ್ತು ಟಿಕೆಟ್ ಆಕಾಂಗಳನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ಬೆವರು ಹರಿಸಿತ್ತು. ಪರ್ಯಾಯವಾಗಿ ಎಸ್ಡಿಪಿಐ ಅಭ್ಯಥಿರ್ ಸ್ಪಧಿರ್ಸಿ 18975 ಮತಗಳನ್ನು ಪಡೆದಿದ್ದರು. ಇದರಿಂದಾಗಿ ಕಾಂಗ್ರೆಸ್ ಗೆಲುವಿನ ಅಂತರ ಕೇವಲ 5700 ಮತಗಳಿಗೆ ಕುಸಿದಿತ್ತು. ಹೀಗಾಗಿ ಎಸ್ಡಿಪಿ ಸಂಟನೆಯು ಕಾಂಗ್ರೆಸ್ ಮತಬ್ಯಾಂಕಿಗೆ ಕಂಟಕ ಎಂಬುದನ್ನು ಕಾಂಗ್ರೆಸ್ ಈಗಾಗಲೇ ಅರಿತಿದ್ದು, ಮುಸ್ಲಿಂ ಮತಬ್ಯಾಂಕ್ ಅಧಿಕ ಇರುವ ಕ್ಷೇತ್ರದಲ್ಲಿ ಸ್ಥಳಿಯ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಯಶಸ್ಸು ಗಳಿಸುವುದೇ ಕಾಂಗ್ರೆಸ್ಸಿಗೆ ಸಾವಾಲಾಗಿ ಪರಿಣಮಿಸಿದೆ. ಅದೇ ರೀತಿ ಗದಗ ನಗರದ ಹಲವು ವಾರ್ಡಗಳಲ್ಲಿ ಈ ಬಾರಿ ಎಸ್ಡಿಪಿಐ ತನ್ನ ಹಿಡಿತ ಬಿಗಿಗೊಳಿಸಿದೆ.
ಮುಸ್ಲಿಂ ಮತದಾರರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯಕ್ಕೆ ಬೇಸತ್ತು ಮುಸ್ಲಿಂ ಮತದಾರರು ಎಸ್ಡಿಪಿಐ ಕಡೆ ವಾಲುತ್ತಿದ್ದರು. ಕಾಂಗ್ರೆಸ್ ಪಕ್ಷ ಮುಸ್ಲಿಂ ಮತದಾರನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿತ್ತು. ಇದಕ್ಕಾಗಿ ಬೇಸತ್ತಿದ್ದಾರೆ. ಇನ್ನೂ ಅಲ್ಪಸಂಖ್ಯಾತ ಮಹಿಳೆಯರು ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ ಬಿಜೆಪಿಯತ್ತ ವಾಲುತ್ತಿದ್ದಾರೆ ಎಂಬುದು ವಿಶೇಷ