ಭಾರತ ಸರ್ಕಾರದ ರಸ್ತೆ ಹಾಗೂ ಹೆದ್ದಾರಿ ಸಚಿವಾಲಯದ ಸೇತು ಬಂಧನ (ಆರ್ಓಬಿ) ಯೋಜನೆಯ ಕೇಂದ್ರ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಅನುದಾನದ ಸಿಆರ್ಐಎಫ್ ಯೋಜನೆಯಲ್ಲಿ 2023ರಲ್ಲಿ ಜಿಲ್ಲೆಗೆ ಮಂಜೂರಾಗಿದ್ದ 5 ಮೇಲ್ಸೇತುವೆ ಯೋಜನೆ ರ್ಪೂಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. 784.50 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಆದರೆ, ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ರೈಲ್ವೆ ನಿಲ್ದಾಣದಲ್ಲಿ ಮಾತ್ರ ಈ ಯೋಜನೆ ಆರಂಭಗೊಂಡಿದ್ದು, ಇತರೆಡೆ ಈ ಯೋಜನೆ ಅನುಷ್ಠಾನಕ್ಕೆ ವಕ್ರದೆಸೆ ಬೀರಿದೆ.
ರಾಜ್ಯ ಹೆದ್ದಾರಿಗಳಲ್ಲಿ ರೈಲ್ವೆ ಕ್ರಾಸಿಂಗ್ ನಿಂದ ಜನರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಸೇತುಬಂಧ ಯೋಜನೆಯಡಿ ರಾಜ್ಯದಲ್ಲಿ 22 ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಈ ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ನರಗುಂದ ಕ್ಷೇತ್ರದ ಶಾಸಕ ಸಿಸಿ ಪಾಟೀಲ ಅವರ ಅವಧಿಯಲ್ಲಿ ಸಮೀೆ ಕೈಗೊಳ್ಳಲಾಗಿತ್ತು. ರಾಜ್ಯದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ 22 ಪ್ರಮುಖ ಸ್ಥಳಗಳನ್ನು ಗುರುತಿಸಿ, ಈ ಪಟ್ಟಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. ರೈಲ್ವೆ ಮೇಲ್ಸೇತುವೆ ನಿಮಿರ್ಸುವಂತೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದರಲ್ಲಿ ಜಿಲ್ಲೆಗೆ ಐದು ಸೇತುವೆಗಳನ್ನು ಮಂಜೂರಾತಿ ಪಡೆಯುವಲ್ಲಿ ಅಂದಿನ ಸಚಿವರಾಗಿದ್ದ ಶಾಸಕ ಸಿ.ಸಿ ಪಾಟೀಲ ಯಶಸ್ವಿ ಆಗಿದ್ದರು.
ಜಿಲ್ಲೆಯ ರೋಣ ತಾಲೂಕಿನ ನರಗುಂದ ವಿಧಾನಸಭಾ ವ್ಯಾಪ್ತಿಯ ಸಿಂಧನೂರು ಹೆಮ್ಮಡಗ ರಾಜ್ಯ ಹೆದ್ದಾರಿ 30ರಲ್ಲಿ ಮಲ್ಲಾಪುರ ರೈಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ, ಹಳೆಯ ಸೋಮನಕಟ್ಟಿ ಮೇಲ್ಮಠ ಅಸೂಟಿ ರಸ್ತೆಗೆ ರೈಲ್ವೆ ಹಳಿದಾಟಲು ಮೇಲ್ಸೇತುವೆಗೆ ಮಂಜೂರಾತಿ ದೊರೆತಿದೆ. ಗದಗ ತಾಲೂಕಿನ ತಿಮ್ಮಾಪುರ ರಸ್ತೆಯಲ್ಲಿ ಹಾಗೂ ತಿಮ್ಮಾಪುರ ಮತ್ತು ಹರ್ಲಾಪುರ ಗ್ರಾಮಗಳನ್ನು ಸಂಪರ್ಕ ಕಲ್ಪಿಸುವ ರಸ್ತೆಗೆ ಹಾಗೂ ಗದಗ ನಗರದಿಂದ ಬೆಟಗೇರಿ ಪ್ರಮುಖ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಜನನಿಬಿಡ ಸ್ಥಳದಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು. ಕಾಮಗಾರಿ ನಿರ್ಮಾಣದ ಉಸ್ತುವಾರಿಯನ್ನು ರೈಲ್ವೆ ಇಲಾಖೆಯೇ ವಹಿಸಿಕೊಂಡಿದೆ.
ನಗರದಲ್ಲೂ ಇನ್ನೂ ಆರಂಭವಿಲ್ಲ:
ಗದಗ ನಗರದಿಂದ ಬೆಟಿಗೇರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ಸದ್ಯ ಅಂಡರ್ ಪಾಸ್ ಇದೆ. ರಸ್ತೆ ಮಾರ್ಗ ಉತ್ತಮವಾಗಿಲ್ಲ. ಮಳೆಯಾಗುತ್ತಿದ್ದಂತೆ ವಾಹನ ದಟ್ಟಣೆ ಹೆಚ್ಚಾಗಿ ಜನರು ತೊಂದರೆ ಅನುಭವಿಸುತ್ತಾರೆ. ಮಳೆಯಿಂದಾಗಿ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಳ್ಳುತ್ತದೆ ಮತ್ತು ಎಚ್ಸಿವಿ ವಾಹನಗಳು ಕೆಲವೊಮ್ಮೆ ಅಂಡರ್ ಪಾಸ್ ನಲ್ಲಿ ಸಿಕ್ಕು ಸಂಚಾರಕ್ಕೆ ಅಡಚನೆ ಆಗುವ ದೃಶ್ಯಗಳು ಆಗಾಗಾ ಸಾಮಾನ್ಯವಾಗಿ ಕಂಡು ಬರುತ್ತದೆ. ಹಲವು ವರ್ಷಗಳಿಂದ ಈ ಸಮಸ್ಯೆಯನ್ನು ಸ್ಥಳಿಯರು ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಈ ತೊಂದರೆಗೆ ಶಾಶ್ವತವಾಗಿ ಮುಕ್ತಿ ಸಿಗುವ ಆಶಾಭಾವ ಮೂಡಿತ್ತು. ಆದರೆ, ಮೂಲಗಳ ಪ್ರಕಾರ ಬೂಸ್ವಾಧಿನ, ಕಾಮಗಾರಿ ನೀಲನೆ ಬದಲು ಮಾಡುವ ಸಂಬಂಧ ಸ್ಥಳಿಯರ ಆಗ್ರಹವಿದೆ. ಅದಕ್ಕಾಗಿ ಯೋಜನೆ ಅನುಷ್ಠಾ ವಿಳಂಬ ಎಂದು ಅಭಿಪ್ರಾಯಗಳು ಕೇಳಿಬರುತ್ತಿವೆ. ರೈಲ್ವೆ ಮೆಲ್ಸೇತುವೆ ಕಾಮಗಾರಿ ಶ್ರೀವೇ ಪ್ರಾರಂಭವಾಗಿ ರ್ಪೂಣಗೊಳ್ಳಬೇಕು. ನಗರ ಸಂಚಾರ ಮತ್ತಷ್ಟು ಸರಳವಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಜಿಲ್ಲೆಯ ಮಲ್ಲಾಪೂರ ನಿಲ್ದಾಣದಲ್ಲಿ ಆರಂಭ ಆಗಬೇಖಿದ್ದ ಯೋಜನೆಗೆ ಈಗ ನೀಲ ನಕ್ಷ ಅನುಮತಿ ದೊರೆತಿದೆ. ಇನ್ನೂಳಿದ ಕಡೆ ಯೋಜನಾ ಪ್ರಕ್ರಿಯೆ ಮುಂದುವರಿಯಬೇಕಿದೆ. ನಾನು ಇತ್ತೀಚೆಗೆ ಉಸ್ತುವಾರಿ ವಹಿಸಿಕೊಂಡಿದ್ದರಿಂದ ಹೆಚ್ಚಿನ ಮಾಹಿತಿ ಇಲ್ಲ.
ಸ್ವಪ್ನಿಲ್, ಯೋಜನಾ ಮೇಲಿಸ್ತುವಾರಿ
ಮೇಲ್ಸೇತುವೆ ನಿರ್ಮಾಣ ಕಾಮಗಾರಿ ರೈಲ್ವೆ ಇಲಾಖೆಗೆ ಸಂಬಂಧಿಸಿದೆ. ಹೀಗಾಗಿ ಇದರ ವ್ಯಾಪ್ತಿ ನಮ್ಮದಲ್ಲ. ಕಾಮಗಾರಿ ಆರಂಭಿಸುವ ಮುನ್ನ ಇಲಾಖೆ ಅನುಮತಿಗಾಗಿ ಪತ್ರ ಬರೆಯುತ್ತಾರೆ. ಕಾಮಗಾರಿ ವೇಳೆ ಲೋಕೋಪಯೋಗಿ ಇಲಾಖೆ ಆಸ್ತಿಗಳಿಗೆ ಧಕ್ಕೆ ಬರುತ್ತಿದ್ದರೆ ಅದನ್ನು ನಾವು ಮೇಲುಸ್ತುವಾರಿ ನೋಡುಕೊಳ್ಳುತ್ತೇವೆ.
ಉಮೇಶ ನಾಯಕ, ಇಇ, ಲೋಕೋಪಯೋಗಿ ಇಲಾಖೆ ಗದಗ