ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಗೆ ಜೀವ ಬೆದರಿಕೆ ಆರೋಪ ತಳ್ಳಿ ಹಾಕಿ ವಸಂತಗೌಡ ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ಚಂದ್ರು ಬಾಳೆಹಳ್ಳಿಮಠ, ಪ್ರಕಾಶ ಬಸರಿಗಿಡದ, ಶಿವರುದ್ರಪ್ಪ ಇಟಗಿ, ಎಂ. ಆರ್​.ಹಿರೇಮಠ, ಚನ್ನಬಸಯ್ಯ ಬಂಕಾಪುರ, ಪರಶುರಾಮ ಕಟ್ಟಿಮನಿ ಇದ್ದರು.  
ರಾಜ್ಯ

ಪುಟ್ಟರಾಜ ಗವಾಯಿಗಳ ಮಠದ ಪರಂಪರೆ ಉಳಿಸಬೇಕು: ವೀರೇಶ್ವರ ಪುಣ್ಯಾಶ್ರಮ ಸೋಲ್​ ಟ್ರಸ್ಟ್​ ಮನವಿ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಭಕ್ತರ ಸಹಕಾರ ಹಾಗೂ ಕಾಣಿಕೆಗಳಿಂದ ಮಠ-ಮಾನ್ಯಗಳು ನಡೆದುಕೊಂಡು ಬಂದಿವೆ. ದೇಣಿಗೆ ನೀಡುವವರು ತಮ್ಮ ಹೆಸರನ್ನು ನೋಂದಾಯಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಂಪರೆ ಎಂದು ವೀರೇಶ್ವರ ಪುಣ್ಯಾಶ್ರಮ ಸೋಲ್​ ಟ್ರಸ್ಟ್​ ಚಂದ್ರು ಬಾಳೆಹಳ್ಳಿಮಠ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಅನಾಥ ಮಕ್ಕಳಿಗೆ ಬದುಕು ನೀಡಿದ ಮಹಾನ್​ ಪರಂಪರೆ ಪುಟ್ಟರಾಜ ಗವಾಯಿಗಳ ಮಠಕ್ಕಿದೆ. ಮಠದ ಕಾರ್ಯಗಳಿಗೆ ಭಕ್ತರು ಸದಾ ಬೆಂಬಲ ನೀಡಿದ್ದಾರೆ ಎಂದರು.
ರಾಜು ಖಾನಪ್ಪನವರು ಜಾತ್ರೆಯನ್ನು ವಿರೋಧಿಸುವ ಬದಲು ಸಮಾಜದ ಹಿರಿಯರನ್ನು ಕರೆದು ಸಭೆ ನಡೆಸಿ, ಎಲ್ಲರೊಂದಿಗೆ ಚಚಿರ್ಸಿ ಜಾತ್ರೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಸಂತಗೌಡ ಪೊಲೀಸ್​ ಪಾಟೀಲ ಮಾತನಾಡಿ, ಕಳೆದ 5 ವರ್ಷಗಳಿಂದ ಪೂಜ್ಯ ಪುಟ್ಟರಾಜ ಗವಾಯಿಗಳಿಗೆ ಬೆಳ್ಳಿ ತುಲಾಭಾರ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದ್ದೇವೆ. ಅವರು ಲಿಂಗೈಕ್ಯರಾದ ಬಳಿಕವೂ ಮಠದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಆದರೆ ಈಗ ಕೆಲವು ವಿಚಾರಗಳಿಂದ ಮನಸ್ಸಿಗೆ ನೋವು ಉಂಟಾಗಿದೆ. ಭಕ್ತರ ನೀಡುವ ದವಸಧಾನ್ಯ ಹಾಗೂ ಇತರೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇಂತಹ ಬೆಳಗವಣಿಗೆ ಸರಿಯಲ್ಲ ಎಂದರು.
ಶಿವರುದ್ರಪ್ಪ ಇಟಗಿ ಮಾತನಾಡಿ, ಟರಾವಿಗೆ ತಮ್ಮ ಸಹಿ ಇಲ್ಲದೆ ಖಾತೆಯನ್ನು ಪ್ರಾರಂಭಿಸಿ ವ್ಯವಹಾರ ಮಾಡಲಾಗಿದೆ. ಹಾಗಾಗಿ ಬ್ಯಾಂಕ್​ ಸಿಬ್ಬಂದಿಗಳಿಗೆ ವ್ಯವಹಾರ ಬಂದ್​ ಮಾಡುವಂತೆ ಮನವಿ ಮಾಡಲಾಗಿದೆ. ಕಲ್ಲಯ್ಯ ಅಜ್ಜನವರಿಗೆ ಯಾವುದೇ ರೀತಿಯ ಹಣದ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕಾಶ ಬಸರಿಗಿಡದ ಮಾತನಾಡಿ, ಕೆಲವು ಮಠದ ಆಸ್ತಿಗೆ ಸಂಬಂಧಿಸಿದ ವಿಚಾರಗಳು ನ್ಯಾಯಾಲಯದಲ್ಲಿ ಇವೆ. ನಾವು ಯಾವುದೇ ಆಸ್ತಿ ಕಬಳಿಸುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ. ಆರ್​.ಹಿರೇಮಠ, ಚನ್ನಬಸಯ್ಯ ಬಂಕಾಪುರ, ಪರಶುರಾಮ ಕಟ್ಟಿಮನಿ ಇದ್ದರು.