ಬೆಳೆವಿಮೆ ಮತ್ತು ಗಂಡಾಂತರ ಬೆಳೆವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಹನಮರಡ್ಡಿ ಮೊರಬರಡ್ಡಿ, ರಾಜ್ಯ ಕಾರ್ಯದಶಿರ್ ಎ್​. ಎಸ್​. ಪಾಟೀಲ, ಉಮೇಶ ಲಿಂಗರಡ್ಡಿ, ಬೂದೇಶ ಮೈಲಾರ, ಜಿಲ್ಲಾಧ್ಯ ರುದ್ರಯ್ಯ ಹಿರೇಮಠ, ಅಶೋಕ ಬಶೆಟ್ಟಿ, ಸತೀಶ ಗಿಡ್ಡಹನುಮಣ್ಣವರ, ಸೋಮನಗೌಡ್ರ ಪಾಟೀಲ, ಗೋವಿಂದರಡ್ಡಿ ಕೊಣ್ಣೂರ, ಕಿರಣ ಪವಾರ, ಜಗದೀಶ ಕೊಣ್ಣೂರ, ಈರಣ್ಣ ಬಂಡಿಹಾಳ, ಈರಪ್ಪ ಹಳ್ಳಿ, ಸಿದ್ದು ಯಾಳವಾಡ, ಮಲ್ಲನಗೌಡ ಪಾಟೀಲ, ಪ್ರಕಾಶ ರೆಡಿಯಪ್ಪನವರ, ಕೊಟ್ರಯ್ಯ ಕಟ್ಟಿಮನಿ, ಸತೀಶಕುಮಾರ ಸಲಗಾರ, ಹುಚ್ಚಪ್ಪ ಗುರಿಕಾರ, ಮಂಜು ಸಿದ್ದನಗೌಡ, ಅಶೋಕಕುಮಾರ, ಶೇಖರ, ರಾಜು, ಬಸವರಾಜ ಮಲ್ಲಿಕಾರ್ಜುನ, ವೀರಪ್ಪ ಚೆನ್ನಪ್ಪನವರ, ಆರ್​. ಜಿ. ಪೊಲೀಸಪಾಟೀಲ,  
ರಾಜ್ಯ

ಬೆಳೆವಿಮೆ ಮತ್ತು ಗಂಡಾಂತರ ಬೆಳೆವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಶಿವಾನಂದ ಹಿರೇಮಠ
ಗದಗ: 2025 - 26 ನೇ ಸಾಲಿನ ಪ್ರಧಾನಮಂತ್ರಿ ಸಲಾ ಭೀಮಾ ಯೋಜನೆಯ ಬೆಳೆವಿಮಾ ಪರಿಹಾರ ಹಾಗೂ ಬೆಳೆವಿಮೆ ನೀಡುವಂತೆ ಆಗ್ರಹಿಸಿ ರಾಜ್ಯ ಬೆಳೆವಿಮಾ ಹೋರಾಟ ಸಮಿತಿ ಹಾಗೂ ವಿವಿದ ರೈತ ಸಂಟನೆಗಳ ನೇತೃತ್ವದಲ್ಲಿ ಗುರುವಾರ ನೂರಾರು ರೈತರು ಜಿಲ್ಲಾಡಳಿತ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ನಗರದ ಟಿಪ್ಪು ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಬೆಳೆವಿಮಾ ಹೋರಾಟ ಸಮಿತಿಯ ರಾಜ್ಯಾಧ್ಯ ಪರಮೇಶ್ವರಪ್ಪ ಜಂತ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ, ಈರುಳ್ಳಿ, ಹೆಸರು, ಶೇಂಗಾ, ಗೋವಿನಜೋಳ ಸೇರಿದಂತೆ ಮುಂತಾದ ಮುಂಗಾರು ಬೆಳೆಗಳಲ್ಲಿ ಪ್ರಧಾನಮಂತ್ರಿ ಸಲ ಭೀಮಾ ಯೋಜನೆಯಡಿ ಲಾಂತರ ರೈತರು ಬೆಳೆ ವಿಮಾ ಪಾವತಿಸಿದ್ದು, ಇಲ್ಲಿಯವರೆಗೂ ವಿಮಾ ಕಂಪನಿಯ ಮಧ್ಯಂತರ ಪರಿಹಾರ ನೀಡಿಲ್ಲ. ಓರಿಯಂಟಲ್​ ವಿಮಾ ಕಂಪನಿ ಗದಗ ಜಿಲ್ಲೆಯ ರೈತರಿಗೂ ಮತ್ತು ಸರ್ಕಾರಕ್ಕೂ ಮೋಸ ಮಾಡುತ್ತಿದೆ. ಮಧ್ಯಂತರ ಸ್ಥಳಿಯ ಗಂಡಾಂತರ ಪರಿಹಾರ ರೈತರ ಖಾತೆಗೆ ಹಾಕದೇ ಕುಂಟ ನೆಪ ಹೇಳುತ್ತ ದಿನಗಳನ್ನು ಮುಂದೆ ಹಾಕುತ್ತಿದ್ದಾರೆ. ಅದ್ದರಿಂದ ಜಿಲ್ಲಾಧಿಕಾರಿ ಅವರು ತಣ ಬೆಳೆ ವಿಮಾ ಕಂಪನಿಗೆ ಆದೇಶ ಮಾಡಿ ಬೆಳೆ ವಿಮಾ ತುಂಬಿದ ಎಲ್ಲ ರೈತರಿಗೂ ಸ್ಥಳಿಯ ಗಂಡಾಂತರ ಬೆಳೆ ವಿಮಾ ಪರಿಹಾರ ಮತ್ತು ಬೆಳೆ ವಿಮಾ ಪಾವತಿಸುವಂತೆ ಆದೇಶ ಮಾಡಬೇಕು. ಒಂದು ವಾರದೊಳಗಾಗಿ ಓರಿಯಂಟಲ್​ ವಿಮಾ ಕಂಪನಿಗೆ ಬೆಳೆವಿಮೆ ಹಣ ರೈತರ ಖಾತೆಗೆ ಜಮೆ ಮಾಡುವಂತೆ ಆದೇಶ ಮಾಡದಿದ್ದರೆ ಜಿಲ್ಲೆಯ ರೈತರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿಧಿರ್ಷ್ಟಾವದಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯ ಹನಮರಡ್ಡಿ ಮೊರಬರಡ್ಡಿ, ರಾಜ್ಯ ಕಾರ್ಯದಶಿರ್ ಎ್​. ಎಸ್​. ಪಾಟೀಲ, ಉಮೇಶ ಲಿಂಗರಡ್ಡಿ, ಬೂದೇಶ ಮೈಲಾರ, ಜಿಲ್ಲಾಧ್ಯ ರುದ್ರಯ್ಯ ಹಿರೇಮಠ, ಅಶೋಕ ಬಶೆಟ್ಟಿ, ಸತೀಶ ಗಿಡ್ಡಹನುಮಣ್ಣವರ, ಸೋಮನಗೌಡ್ರ ಪಾಟೀಲ, ಗೋವಿಂದರಡ್ಡಿ ಕೊಣ್ಣೂರ, ಕಿರಣ ಪವಾರ, ಜಗದೀಶ ಕೊಣ್ಣೂರ, ಈರಣ್ಣ ಬಂಡಿಹಾಳ, ಈರಪ್ಪ ಹಳ್ಳಿ, ಸಿದ್ದು ಯಾಳವಾಡ, ಮಲ್ಲನಗೌಡ ಪಾಟೀಲ, ಪ್ರಕಾಶ ರೆಡಿಯಪ್ಪನವರ, ಕೊಟ್ರಯ್ಯ ಕಟ್ಟಿಮನಿ, ಸತೀಶಕುಮಾರ ಸಲಗಾರ, ಹುಚ್ಚಪ್ಪ ಗುರಿಕಾರ, ಮಂಜು ಸಿದ್ದನಗೌಡ, ಅಶೋಕಕುಮಾರ, ಶೇಖರ, ರಾಜು, ಬಸವರಾಜ ಮಲ್ಲಿಕಾರ್ಜುನ, ವೀರಪ್ಪ ಚೆನ್ನಪ್ಪನವರ, ಆರ್​. ಜಿ. ಪೊಲೀಸಪಾಟೀಲ, ಬಸವರಾಜ ಗುಡ್ಡಪ್ಪನವರ, ಭರಮಪ್ಪ ಹುಲಗೂರ, ಮಹೇಂದ್ರಗೌಡ ಚಿಕ್ಕನಗೌಡ್ರ, ಶರಣಪ್ಪ ಹುಲಗೂರ, ಮಂಜು ಕುರಡಗಿ, ಕೆ.ಸಿ.ಅಮ್ಮಿನಬಾವಿ ಸೇರಿದಂತೆ ಹಲವರು ಇದ್ದರು.