ಅಂತೂರು ಬೆಂತೂರು ಗ್ರಾಮದ ಶಿವಯೋಗ ಸಮಾಧಿ ಮುಕ್ತಾಯ ಸಮಾರಂಭ ಕುರಿತು ಮಡಿವಾಳಯ್ಯ ಶಾಸ್ತ್ರಿ ಸುದ್ದಿಗೋಷ್ಠಿ ನಡೆಸಿದರು. ಗುರುಲಿಂಗ ದೇವರು, ಎಸ್.ಕೆ.ಆಲೂರು, ಮಂಜುನಾಥ ಮಜ್ಜಿಗುಡ್ಡ, ಬೂದಪ್ಪ ಜಿಣಿಗಿ, ಮಂಜುನಾಥ ಬಾವಿಕಟ್ಟಿ ಇದ್ದರು.
ತಾಲೂಕಿನ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನಮಠದಲ್ಲಿ ರಾಚೋಟೀಶ್ವರ ಶಿವಾಚಾರ್ಯರ 60ನೇ ಮೌನಾನುಷ್ಠಾನ ಹಾಗೂ 16ನೇ ಶಿವಯೋಗ ಸಮಾಧಿಯ ಮುಕ್ತಾಯ ಸಮಾರಂಭವು ಜು.5ರಂದು ಬೆಳಗ್ಗೆ 10ಕ್ಕೆ ಜರುಗಲಿದೆ ಎಂದು ಪ್ರವಚನಕಾರ ಮಡಿವಾಳಯ್ಯ ಶಾಸ್ತ್ರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ, ನೀರು, ಗಾಳಿ, ಬೆಳಕು ಇಲ್ಲದ ಜಾಗದಲ್ಲಿ 33 ದಿನ ತಪಸ್ಸು ಆಚರಿಸುವ ಮೂಲಕ ಶ್ರೀಗಳು ಪವಾಡ ಸೃಷ್ಟಿಸಿದ್ದಾರೆ. ಜು.5ರಂದು ಬೆಳಗ್ಗೆ 9.30ಕ್ಕೆ ಅವರು ತಪಸ್ಸು ಮಾಡಿದ ಜಾಗದಿಂದ ಹೊರಬಂದು, ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದರು.
ಜೂ.2ರಿಂದ ಆರಂಭವಾಗಿರುವ ಭೀಮ ಕವಿ ವಿರಚಿತ ಬಸವೇಶ್ವರ ಪುರಾಣ ಪ್ರವಚನ ಜು.4ರಂದು ಮಂಗಲವಾಗಲಿದೆ. ಜು.1ರಿಂದ 4ರವರೆಗೆ ವಿಶೇಷ ಪೂಜೆ ಹಾಗೂ 775 ಶಿವಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜು.5ರಂದು ಬೂದೀಶ್ವರರ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ ಎಂದರು.
ಜು.1 ರಂದು ಬೆಳಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ, ಬೆಳಗ್ಗೆ 9ಕ್ಕೆ 775 ಶಿವಲಿಂಗಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇವರಹಿಪ್ಪರಗಿ ಜಡೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಣ್ಣೂರ ಸಿದ್ಧಲಿಂಗ ಶಿವಾಚಾರ್ಯರು, ಅಭಿನವ ಗವಿಸಿದ್ಧಲಿಂಗ ಶಿವಯೋಗಿ ಶಿವಾಚಾರ್ಯರು ಉಪಸ್ಥಿತಿ ಇರುವರು. ಸಂಜೆ 7ಕ್ಕೆ ಧರ್ಮ ಸಭೆ ನಡೆಯುವುದು. ಜು.2 ರಂದು ಸಂಜೆ 8ಕ್ಕೆ ಧರ್ಮಸಭೆಯಲ್ಲಿ ಶಿರಹಟ್ಟಿ ಜಗದ್ಗರು ಕೀರ ಸಿದ್ಧರಾಮ ಸ್ವಾಮೀಜಿ, ವಿಶ್ವನಾಥ ದೇವರು, ನೀಲಮ್ಮತಾಯಿ, ಬಸವ ಸಮರ್ಥ ಸ್ವಾಮೀಜಿ ಬಾಗವಹಿಸುವರು. ಜು.3 ರಂದು ಸಂಜೆ 8ಕ್ಕೆ ಧರ್ಮಸಭೆಯಲ್ಲಿ ದೇವರಹಿಪ್ಪರಗಿ ಜಡೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೀರೇಶ್ವರ ಶಿವಾಚಾರ್ಯರು ಭಾಗವಹಿಸವರು ಎಂದರು.
ಜು.3 ರಂದು ಸಾಯಂಕಾಲ 8ಕ್ಕೆ ಧರ್ಮಸಭೆಯಲ್ಲಿ ದೇವರಹಿಪ್ಪರಗಿ ಜಡೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುವರು. ಜು.4 ರಂದು ಸಾಯಂಕಾಳ 7.30ಕ್ಕೆ ಬಸವ ಪುರಾಣ ಮಹಾಮಂಗಲೋತ್ಸವ ನಡೆಯವುದು. ಜ.ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ಡಾ.ಶಿವಕುಮಾರ ಸ್ವಾಮೀಜಿ ನೇತೃತ್ವ ವಹಿಸುವರು. ಜು.5 ರಂದು ಬೆಳಗ್ಗೆ 10ಕ್ಕೆ ಶಿವಯೋಗ ಸಮಾಧಿ ಮಹಾಮಂಗಲೋತ್ಸವ ಹಾಗೂ ಜಗದ್ಗುರು ಬೂದೀಶ್ವರರ ವಿಗ್ರಹ ಪ್ರತಿಷ್ಠಾಪನೆ ನಡೆಯುವುದು. ಮುಂಡರಗಿ ಅನ್ನದಾನೇಶ್ವರಮಠದ ಜ.ಡಾ.ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ.ರಾಚೋಟೀಶ್ವರ ಶಿವಾಚಾರ್ಯರು ನೇತೃತ್ವ ವಹಿಸುವರು. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡುವರು ಎಂದರು.
ಮಹಾಲಿಂಗಪುರದ ಗುರುಲಿಂಗ ದೇವರು ಮಾತನಾಡಿ, ಜು.6ರಂದು ಬೆಳಗ್ಗೆ 5 ರಿಂದ ದುಶ್ಚಟಗಳ ಭಿೆ, ಸದ್ಗುಣಗಳ ದೀೆ ಎನ್ನುವ ಸಂಕಲ್ಪದೊಂದಿಗೆ ಬೂದೀಶ್ವರ ಮಠದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ ಧರ್ಮಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಕೆ.ಆಲೂರು, ಮಂಜುನಾಥ ಮಜ್ಜಿಗುಡ್ಡ, ಬೂದಪ್ಪ ಜಿಣಿಗಿ, ಮಂಜುನಾಥ ಬಾವಿಕಟ್ಟಿ ಇದ್ದರು.