ಕಾಳಿದಾಸ ಶಿಕ್ಷಣ ಸಂಸ್ಥೆ ರಜತಮಹೋತ್ಸವ ಕುರಿತು ಜಿ.ಬಿ.ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ಬಿ. ಬಿ. ಭಾವಿಕಟ್ಟಿ, ಫಕೀರಪ್ಪ ಹೆಬಸೂರ, ಆರ್. ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ. ಬಿ. ಭಾನಾಪೂರ, ಆರ್. ಎಂ. ನಿಂಬನಾಯ್ಕ, ಎಸ್. ಡಿ. ಸಿಂಗಟಾಲಕೇರಿ, ಎಸ್. ಎಸ್. ಕರಡಿ ಸೇರಿದಂತೆ ಇತರರು ಇದ್ದರು.
ಕೊಪ್ಪಳದ ಶ್ರೀಗಳಿಂದ ರಜತ ಮಹೋತ್ಸವಕ್ಕೆ ಚಾಲನೆ
ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯು ಮೆ. 2027 ಕ್ಕೆ 25 ವರ್ಷಗಳನ್ನು ಪೂರೈಸಲಿದೆ. ಅದರ ನಿಮಿತ್ಯವಾಗಿ 2026-&2027 ರ ಶೈಕ್ಷಣಿಕ ವರ್ಷವನ್ನು ರಜತೋತ್ಸವ ವರ್ಷ ಎಂದು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೂ.7 ರಂದು ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿ ನಡೆಯುವ ರಜತ ಮಹೋತ್ಸವ ಕಾರ್ಯಕ್ರಮವನ್ನು ಕೊಪ್ಪಳ್ಳ ಶ್ರೀಗಳು ಉದ್ಘಾಟಿಸಲಿದ್ದಾರೆ ಎಂದು ರಜತ ಮಹೋತ್ಸವ ಸಮಿತಿ ಉಸ್ತುವಾರಿ ಡಾ. ಜಿ. ಬಿ. ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಳಿದಾಸ ಶಿಕ್ಷಣ ಸಂಸ್ಥೆ ವತಿಯಿಂದ ಪ್ರಸ್ತುತ ಕನ್ನಡ, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಮಹಿಳಾ ವಸತಿ ನಿಲಯಗಳನ್ನು ಮತ್ತು ಐಟಿಐ ಕಾಲೇಜು ನಡೆಸಲಾಗುತ್ತಿದೆ. ಜನತೆಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ನಿವೃತ್ತ ನ್ಯಾಯಾಧೀಶ ಎಸ್. ಜಿ. ಪಲ್ಲೇದ ಮಾತನಾಡಿ, ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ಕಟ್ಟಡದ ಆವರಣದಲ್ಲಿ 25 ಸಸಿಗಳನ್ನು ನೆಡಲಾಗುವುದು. ಮಾಜಿ ಶಾಸಕ ಡಿ. ಆರ್. ಪಾಟೀಲ, ಸಿ. ಬಸವಣ್ಣ ಹಾಗೂ ಚಂದ್ರಶೇಖರ ನುಗ್ಗಲಿ ಅವರನ್ನು ಸನ್ಮಾನಿಸಲಾಗವುದು. ಹಾಗೂ ಮುಂದಿನ ದಿನಗಳಲ್ಲಿ ಎಸೆಸೆಲ್ಸಿ, ಪಿಯುಸಿ ವಿದ್ಯಾಥಿರ್ಗಳಿಗೆ ಸನ್ಮಾನ, ಆರೋಗ್ಯ ಶಿಬಿರ, ರಕ್ತದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬಿ. ಬಿ. ಭಾವಿಕಟ್ಟಿ, ಫಕೀರಪ್ಪ ಹೆಬಸೂರ, ಆರ್. ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ. ಬಿ. ಭಾನಾಪೂರ, ಆರ್. ಎಂ. ನಿಂಬನಾಯ್ಕ, ಎಸ್. ಡಿ. ಸಿಂಗಟಾಲಕೇರಿ, ಎಸ್. ಎಸ್. ಕರಡಿ ಸೇರಿದಂತೆ ಇತರರು ಇದ್ದರು.