Gadag Pressmeet 
ರಾಜ್ಯ

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತರಿಂದ ಪ್ರತಿಭಟನೆ ಡಿ.8 ರಿಂದ

ಗದಗ: ಬೆಳಗಾವಿಯಲ್ಲಿ ಡಿ.8 ರಿಂದ ನಡೆಯುವ ಚಳಿಗಾಲ ಅಧಿವೇಶನದಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯಿಂದ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿ ಎಂದು ಜಿಲ್ಲಾಧ್ಯಕ್ಷ ನಟರಾಜ ಸವಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ರಾಜ್ಯಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಸಂರ್ಪೂಣ ಸಾಲ ಮನ್ನಾ ಮಾಡಬೇಕು.ರೈತರ ಪಂಪ್​ಸೆಟ್​ಗಳಿಗೆ ಉಚಿತವಾಗಿ ವಿದ್ಯುತ್​ ಪರಿಕರಗಳನ್ನು ಮೊದಲಿನಂತೆ ವಿತರಿಸಬೇಕು ಎಂದರು.
ಜಲಜೀವನ ಮಿಷನ್​ ಅಡಿಯಲ್ಲಿ ಪ್ರತಿ ಹಳ್ಳಿಗೂ ನೀರಿನ ಸಮರ್ಪಕವಾಗಿ ಪೂರೈಕೆ ಮಾಡಬೇಕು. ವಿದ್ಯುನ್ಮಾನ ದತ್ತಾಂಶ ಭಂಡಾರ ಮಾಡಿ ಅದರಲ್ಲಿ ರೈತರಿಗೆ ಬೇಕಾದ ಎಲ್ಲ ಪ್ರಮಾಣ ಪತ್ರಗಳನ್ನು ಸಂಗ್ರಹಿಸಿ ಇಡಬೇಕು. ಪ್ರಮಾಣ ಪತ್ರಗಳನ್ನು ನೀಡಲು ಬೇಕಾಗುವ ದಾಖಲೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಬರುವ ಕೆಲಸವನ್ನು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೃಹತ್​ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಹಿರೇಮಠ, ನಾಗವೇಣಿ ಕುಡಪಲಿ, ಮೋಹನ್​ ಇಬ್ರಾಹಿಮಪುರ, ರೇಖಾ ಜಡಿ, ರುದ್ರಗೌಡ ಪಾಟೀಲ, ಉಮೇಶ ಮಾರ್ತಪ್ಪನವರ, ಮಹಾರುದ್ರಯ್ಯ ಲಕ್ಕುಂಡಿ, ಸೋಮಶೇಖರ ಕಡಗದ, ಮಹಮ್ಮದ್​ ಅಲಿ ಬಾವಾಲೆ, ವಿಶ್ವನಾಥ ಹಿರೇಮಠ, ಸೋಮಶೇಖರ್​ ಚಿಳ್ಳಿಮಠ ಸೇರಿದಂತೆ ಇತರರು ಇದ್ದರು.