ಹಾವೇರಿ ಜಿಲ್ಲೆಯ ಕಂಚಾರಗಟ್ಟಿ ವ್ಯಾಪ್ತಿಯ ನರಸೀಪುರ ಗ್ರಾಮದಲ್ಲಿ ಡಿ.14 ರಿಂದ 15 ರವರಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಿಂದ ಅಂಬಿಗರ 10ನೇ ಶರಣ ಸಂಸತಿ ಉತ್ಸವ, ವಚನ ಗ್ರಂಥ ಮಹಾ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಂತ ಬೀಷ್ಮ ಚೌಡಯ್ಯ ಶ್ರೀಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.14 ರಂದು ಬೆಳಗ್ಗೆ 6ಕ್ಕೆ ನಿಜಶರಣ ಅಂಬಿಗರ ಚೌಡಯ್ಯ ನವರ ತೊಟ್ಟಿಲೋತ್ಸವ ಕಾರ್ಯಕ್ರಮ, ಬೆಳಗ್ಗೆ 8ಕ್ಕೆ ಅಂಬಿಗರ ಚೌಡಯ್ಯ ನವರ ಐಕ್ಯ ಮಂಟಪ ಪೂಜೆ, 11ಕ್ಕೆ ಸಾಮೂಹಿಕ ಸರಳ ವಿವಾಹ ಮಹೋತ್ಸವ, ಲಿಂ.ಸದ್ಗುರು ಶಾಂತಮುನಿ ಸ್ವಾಮೀಜಿಗಳವರ 10ನೇ ಸ್ಮರಣೋತ್ಸವ, ಮಧ್ಯಾಹ್ನ 12ಕ್ಕೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಸಾಯಂಕಾಲ 7ಕ್ಕೆ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ, ರಾತ್ರಿ 8ಕ್ಕೆ ಜಾನಪದ ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಡಿ.15 ರಂದು ಬೆಳಗ್ಗೆ 8ಕ್ಕೆ ಧರ್ಮ ಧ್ವಜಾರೋಹಣ, ಬೆಳಗ್ಗೆ 9.30ಕ್ಕೆ ಧರ್ಮ ಸಭೆ, ಬೆಳಗ್ಗೆ 10ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಮಹಷಿರ್ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಮಾಡಲಾಗುತ್ತದೆ. ಬೆಳಗ್ಗೆ 11ಕ್ಕೆ ನಿಜಶರಣ ಅಂಬಿಗರ ಚೌಡಯ್ಯ ನವರ 906ನೇ ಜಯಂತೋತ್ಸವ, ಮಧ್ಯಾಹ್ನ 12ಕ್ಕೆ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ ಪೀಠಾರೋಹಣದ ದಶಮಾನೋತ್ಸವ ಹಅಗೂ ಸಂಜೆ 5 ಕ್ಕೆ ವಚನ ಗ್ರಂಥ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಅಂಬಿಗರ ಸಮಾಜವು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಸಮಾಜವಾಗಿದೆ. ಈ ಬೃಹತ್ ಸಮಾವೇಶದ ಮೂಲಕ ನಮ್ಮ ಬಹುದಿನಗಳ ಬೇಡಿಕೆಯಾದ ಎಸ್ಟಿ ಮೀಸಲಾತಿ ನೀಡುವಂತೆ ಹಕ್ಕು ಒತ್ತಾಯ ಮಾಡಲಾಗುತ್ತದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಮಾಜದ ಭಾಂಧವರಿಂದ ಸರ್ಕಾರಕ್ಕೆ ಬೇಡಿಕೆಗೆ ಆಗ್ರಹಿಸಿ ಒತ್ತಡ ಹಾಕಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಪುಟಗನಾಳ, ಬಸವರಾಜ ಸಪ್ಪನಗೋಳ, ಜಿಲ್ಲಾಧ್ಯಕ್ಷ ಜಿ.ಬಿ.ಗಾರವಾಡ, ಕಾಶಪ್ಪ ಬಳಗಾನೂರ, ಮಾಲತೇಶ ಬಾಕಿರ್, ಭೀಸಿ ಮೆಗಲಮನಿ, ಪಿ. ಎನ್. ಓಲೇಕಾರ, ಚಂದ್ರಶೇಖರ ಪೂಜಾರ, ಯಲ್ಲಪ್ಪ ಹುನಗುಂದ, ಮಂಜುನಾಥ ಸುನಗಾರ ಸೇರಿದಂತೆ ಇತರರು ಇದ್ದರು.