ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಜರುಗಿದ ಕೆ.ಎಚ್. ಪಾಟೀಲ 101 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಭಾಕರ ಕೋರೆ ಅವರಿಗೆ ಕೆ.ಎಚ್. ಪಾಟೀಲ ವಾಷಿರ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ರಾಜಕಾರಣಿ ದಿವಂಗತ ಕೆ. ಎಚ್. ಪಾಟೀಲ ಬದುಕಿದ್ದರೆ ನಾನು ಇನ್ನೂ ರಾಜಕೀಯ ಜೀವನದ ಉತ್ತುಂಗಕ್ಕೆ ಏರುತ್ತಿದೆ ಎಂದು ಪದ್ಮಶ್ರೀ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಜರುಗಿದ ಕೆ.ಎಚ್. ಪಾಟೀಲ 101 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಎಚ್. ಪಾಟೀಲ ವಾಷಿರ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಶಾಸಕ ಸ್ಥಾನದ ಟಿಕೆಟ್ ನೀಡಿದ್ದು ಕೆ. ಎಚ್. ಪಾಟೀಲು ಎಂದು ಸ್ಪರಿಸಿದರು. ಪ್ರಶಸ್ತಿಯ 5 ಲಕ್ಷ ರೂ. ಮೊತ್ತವನ್ನು ಗದಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭಿಸುತ್ತಿರುವ ಬುತ್ತಿಯ ಆಲಕ್ಕೆ ನೀಡುತ್ತೇನೆ ಎಂದು 5 ಲಕ್ಷ ಮೊತ್ತವನ್ನು ಮರುಕಳಿಸಿದರು.
ಕೆ.ಎಚ್. ಪಾಟೀಲ್ ಅವರು ರಾಜಕೀಯದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಕೆ.ಎಚ್. ಪಾಟೀಲ್ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದಲೇ ತಾವು ರಾಜಕೀಯದಲ್ಲಿ ಮುನ್ನಡೆಯಲು ಸಾಧ್ಯವಾಯಿ. ತಾವು ರಾಜಕೀಯದಲ್ಲಿ ಆರಂಭಿಕ ಹಂತದಲ್ಲಿದ್ದಾಗ ಕೆ.ಎಚ್. ಪಾಟೀಲ್ ಅವರು ಚುನಾವಣೆಯಲ್ಲಿ ಸ್ಪಧಿರ್ಸಲು ಪ್ರೋತ್ಸಾಹಿಸಿದರು. ಅವರಂತಹ ಹಿರಿಯ ನಾಯಕರು ಯುವಕರಿಗೆ ಅವಕಾಶ ನೀಡಿ ಪ್ರೋತ್ಸಾಹ ನೀಡುತ್ತಿದ್ದರಿಂದ ರಾಜಕೀಯದಲ್ಲಿ ಹೊಸ ನಾಯಕತ್ವ ಬೆಳೆದಿದೆ ಎಂದು ಹೇಳಿದರು.
ಸರ್ಕಾರಿ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ ಹಾಗೂ ರೈತರಿಗೆ ಉತ್ತಮ ಕಬ್ಬಿನ ಬೆಲೆ ದೊರಕುವಂತೆ ಮಾಡುವಲ್ಲಿ ಕೆ.ಎಚ್. ಪಾಟೀಲ್ ಅವರ ಕೊಡುಗೆ ಮಹತ್ವದ್ದಾಗಿದೆ. ರಾಜ್ಯದ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಕೆ.ಎಚ್. ಪಾಟೀಲ ಅವರು ವಿಶೇಷ ಆಸಕ್ತಿ ತೋರಿದ ನಾಯಕರಲ್ಲಿ ಪ್ರಮುಖರಾಗಿದ್ದಾರೆ ಎಂದು ಹೇಳಿದರು.