ಜಿಲ್ಲಾ ಪೊಲೀಸ್ ಇಲಾಖೆ ವಶಪಡಿಸಿಕೊಂಡ ಅಕ್ಕಿಯನ್ನು ಗೋಡೌನ್ ನಲ್ಲಿ ಸಂಗ್ರಹಿಸಿ ಇಟ್ಟಿರುವುದು.
ಹರಪನಹಳ್ಳಿಯಿಂದ ಗುಜರಾತ್ ರಾಝ್ಯದ ಅಹಮ್ಮದಾಬಾದ್ಗೆ ಅಕ್ರಮವಾಗಿ ಸಾಗಿಸುತ್ತಿದ್ದ 14 ಲಕ್ಷ ರೂ. ಮೌಲ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಅಕ್ಕಿ ಸಾಗಾಟ ಜತೆಗೆ 29 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಾಥಮಿಕವಾಗಿ ಲಾರಿಚಾಲಕನನ್ನು ವಶಕ್ಕೆ ಪಡೆದು ವಿಚಾರಣಗೆ ಒಳಪಡಿಸಲಾಗಿದೆ. ಗದಗ ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು ಸಮೀಪ ಈ ಕಾರ್ಯಾಚರಣೆ ನಡೆದಿದ್ದು, ಅಕ್ರಮ ಅಕ್ಕಿ ಸಾಗಾಟ ಜಾಲವನ್ನು ಬೇಧಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು.
ಲಾರಿಯು ಮಧ್ಯ ಪ್ರದೇಶದ ನೋಂದಣಿ ಹೊಂದಿದೆ. ಎಂಪಿ09ಡಿಎನ್7251 ಸಂಖ್ಯೆಯ ಲಾರಿಯಲ್ಲಿ 34,720 ಕೆಜಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಭಾಗದಿಂದ ಗದಗ-ಇಳಕಲ್ ಮಾರ್ಗವಾಗಿ ಗುಜರಾತ್ ಕಡೆಗೆ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಆಧರಿಸಿ ಜಪ್ತಿ ಮಾಡಲಾಗಿದೆ. ಚಾಲಕ ಹೇಳಿಕೆ ಪ್ರಕಾರ ಹರಪನಹಳ್ಳಿಯ ಒಂದು ಖಾರ್ಕಾನೆ ಈ ಅಕ್ಕಿಯನ್ನು ತುಂಬಿಸಲಾಗಿದೆ. ಅಹಮ್ಮದಾಬಾದ್ ಗೆ ರವಾನಿಸಲು ಹೇಳಲಾಗಿತ್ತು. ಸಂಬಳ ಆಧಾರದಲ್ಲಿ ನನ್ನನ್ನು ಚಾಲಕನಾಗಿ ನೇಮಿಸಿದ್ದರು ಎಂದು ಚಾಲಕ ಹೇಳಿದ್ದಾನೆ. ಚಾಲಕ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಜಪ್ತಿ ವೇಳೆ ನಕಲಿ ಬಿಲ್ಗಳು ದೊರೆತಿವೆ. ಈ ನಕಲಿ ಬಿಲ್ಗಳನ್ನು ಎಲ್ಲಿ ಪಡೆಯಲಾಗಿದೆ. ಯಾರು ನೀಡಿದರು. ನಕಲಿ ಬಿಲ್ಗಳನ್ನು ಅಸಲಿ ಎನ್ನುವ ರೀತಿ ಸಿದ್ಧವಾಗಿಸಿ ಕೊಡುವ ಜಾಲ ಎಲ್ಲಿದೆ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಜಪ್ತಿ ಮಾಡಿದ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ, ತದ ನಂತರ ಬ್ರಾ$್ಯಂಡೆಡ್ ಅಕ್ಕಿ ಜತೆ ಮತ್ತು ಪ್ರತ್ಯೇಕ ಬ್ರಾ$್ಯಂಡೆಡ್ ಚೀಲಗಳಲ್ಲಿ ತುಂಬಿ ಪುನಃ ಮಾರುಕಟ್ಟೆಗೆ ಮಾರಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ಜಾಳವನ್ನು ಹುಡುಕಲಾಗುವುದು ಎಂದು ಎಸ್ಪಿ ಹೇಳಿದರು.
ಬಡವಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ವಶಕ್ಕೆ ಪಡೆದ ಅಕ್ಕಿ ಚೀಲಗಳನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡೌನ್ನಲ್ಲಿ ಅಂಗ್ರಹಿಸಿ ಇಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ.