ಓಂಬಡ್ಸಮನ್​ ವರದಿಯಲ್ಲಿ ಬಹಿರಂಗ! ಹಲವು ಪ್ರಕರಣಗಳಲ್ಲಿ ಹಣ ವಸೂಲಿ. 
ರಾಜ್ಯ

ಜಿಲ್ಲೆಯಲ್ಲಿ ನಿಲ್ಲದ ನರೇಗಾ ಅಕ್ರಮ! ಖೋಟ್ಟಿ ದಾಖಲೆ ಸೃಷ್ಟಿ ಹಣ ದುರ್ಬಳಕೆ

ಶಿವಾನಂದ ಹಿರೇಮಠ
ಓಂಬಡ್ಸಮನ್​ ವರದಿಯಲ್ಲಿ ಬಹಿರಂಗ! ಹಲವು ಪ್ರಕರಣಗಳಲ್ಲಿ ಹಣ ವಸೂಲಿ.
ಶಿವಾನಂದ ಹಿರೇಮಠ ಗದಗ
ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳಲ್ಲಿ(ನರೇಗಾ) ಅಕ್ರಮಗಳು, ಹಣ ದುರ್ಬಳಕೆ ಮತ್ತು ನಿಯಮ ಉಲ್ಲಂನೆ ಪ್ರಕರಣಗಳು ಹರಿಯುವ ನೀರಿನಂತೆ ನಿರಂತರವಾಗಿ ಬೆಳಕಿಗೆ ಬರುತ್ತಲೇ ಇವೆ. ಖೊಟ್ಟಿ ದಾಖಲೆ ಸೃಷ್ಟಿಸಿ ನರೇಗಾ ಯೋಜನೆಯ ಹಣ ಲಪಟಾಯಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಸ್ಥಳಿಯ ಸಂಸ್ಥೆ ಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿ ವರ್ಗ ಜತೆಗೂಡಿ ಈ ಅಕ್ರಮಗಳಿಗೆ ಪುಷ್ಠಿ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ನಡುವೆ ಜಿಲ್ಲಾ ಒಂಬಡ್ಸಮನ್​ ಅವರು ನೂರಾರು ಪ್ರಕರಣಗಳನ್ನು ಪರಿಶೀಲನೆ ಮಾಡಿ ಲಾಂತರ ರೂ. ವಸೂಲಿಗೆ ಆದೇಶ ನೀಡಿದ್ದಾರೆ. ಕೆಲ ಪ್ರಕರಣಗಳಲ್ಲಿ ವಸೂಲಿ ಮಾಡಲಾಗಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಓಂಬಡ್ಸಮನ್​ ಅವರು ಮರುಪಾವತಿಗೆ ಶಿಾರಸ್ಸು ಮಾಡಿದ ಮೊತ್ತದ ಪರ್ಯಾಯವಾಗಿ ಕನಿಷ್ಠ ಮೊತ್ತವನ್ನು ಮರು ಪಾವತಿಸಿ ಕೈತೊಳೆದು ಕೊಳ್ಳಲಾಗುತ್ತಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಅಕ್ರಮ ಮಾರ್ಗದಿಂದ ಜೇಬು ತುಂಬಿಸಿಕೊಂಡಿದ್ದ ಹಣವನ್ನು ಮರುಪಾವತಿ ಮಾಡಲು ಅಕ್ರಮದಲ್ಲಿನ ಭಾಗಿದಾರರು ಹಿಂದೇಟು ಹಾಕುತ್ತಿದ್ದಾರೆ.
ನರೇಗಾ ಯೋಜನೆಯಡಿಯಲ್ಲಿ ಆಗುತ್ತಿರುವ ಕಾಮಗಾರಿಗಳ ಪಾರದರ್ಶಕತೆ ಬಗ್ಗೆ ಈ ಮೊದಲಿನಿಂದಲೂ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಮೂಡುತ್ತಿರುವುದು ಸಹಜ. ಹೀಗಾಗಿ ಈ ವರೆಗೂ ಹಲವು ಕಾಮಗಾರಿಗಳ ಅಕ್ರಮ ತನಿಖೆ ಮಾಡಿ ಮರುಪಾವತಿಗೆ ಶಿಾರಸ್ಸು ಮಾಡಿರುವ ಓಂಬಡ್ಸಮನ್​ ಅವರು ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರಿಂದ ಅಭಿಪ್ರಾಯವು ಕೇಳಿಬರುತ್ತಿದೆ.
ಖೊಟ್ಟಿ ದಾಖಲೆ ಸೃಷ್ಟಿ:
ಖೊಟ್ಟಿ ದಾಖಲೆ ಸೃಷ್ಟಿಸಿದ ಪ್ರಕರಣವೊಂದು ಬೆಳಿಕೆಗೆ ಬಂದಿದ್ದು, ಈ ಪ್ರಕರಣದಲ್ಲಿ ಮೊತ್ತವನ್ನು ಮರುಪಾವತಿಸಿರುವ ಟನೆ 2022 - 23ರಲ್ಲಿ ರೋಣ ತಾಲೂಕಿನ ಜಿಗಳೂರು ಗ್ರಾಮದಲ್ಲಿ ನಡೆದಿದೆ. ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಜಿಗಳೂರು ಗ್ರಾಮದಲ್ಲಿ 22 ರೈತರ ಜಮೀನನ ಬದುಗಳ ಸುತ್ತಲೂ ತೆಂಗಿನ ಸಸಿ ನೆಟ್ಟಿರುವುದಾಗಿ ಖಒಟ್ಟಿ ದಾಖಲೆ ಸೃಷ್ಟಿ ಹಣ ಲಪಟಾಯಿಸಲಾಗಿತ್ತು. ಈ ಪ್ರಕರಣದಲ್ಲಿ ಓಂಬಡ್ಸಮನ್​ ಅವರು ಒಟ್ಟು 2,23,831 ರೂ, ಹಣವನ್ನು ಮರುಪಾವತಿಸಲು ಆದೇಶಿಸಿದ್ದರು. ಪ್ರಕರಣದಲ್ಲಿ 1,29,325 ರೂ. ಗಳನ್ನು ಮರು ಪಾವತಿ ಪಡೆದುಕೊಳ್ಳಲಾಗಿದೆ. ಅದೇ ರೀತಿ 2022&23ನೇ ಅವಧಿಯಲ್ಲಿ ಮಲ್ಲಾಪುರ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಬಿಲ್​ನಲ್ಲಿ ಅಕ್ರಮ ಎಸಗಿದ್ದು ಈ ಪ್ರಕರಣದಲ್ಲೂ 27.310 ರೂ. ಗಳನ್ನು ಅಕ್ರಮ ಭಾಗಿದಾರರು ಮರುಪಾವತಿ ಮಾಡಿದ್ದಾರೆ. ಸಾಮಗ್ರಿ ಬಿಲ್​ ನಲ್ಲಿ ಅಕ್ರಮ ಎಸಗಿದ ಕಾರಣ 16,446 ರೂ, ಹುನಗುಂಡಿ ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿಯಲ್ಲಿ ಎಸಗಿದ ಅಕ್ರಮದ 69,725 ರೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ಓಂಬಡ್ಸಮನ್​ ವರದಿಯಂತೆ ಸರ್ಕಾರಕ್ಕೆ ಮರುಪಾವತಿ ಆಗಿದೆ.
ಗದಗ ತಾಲೂಕಿನಲ್ಲಿ 2024 - 25ರ ಅವಧಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಬಿಂಕದಕಟ್ಟಿ, ಕುರ್ತಕೋಟಿ, ಅಸುಂಡಿ ಗ್ರಾಮದಲ್ಲಿ ನಿಯಮಗಳ ಉಲ್ಲಂನೆಯಿಂದಾಗಿ ಒಟ್ಟು 4000 ರೂ, ಶಿರಹಟ್ಟಿಯಲ್ಲೂ 8 ಸಾವಿರ ರೂ. ಮೊತ್ತದ ಅಕ್ರಮ ಸಾಭಿತಾಗಿದ್ದು, ಹಣವನ್ನು ಮರು ಪಾವತಿ ಪಡೆಯಲಾಗಿದೆ. ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನರೇಗಾ ಕಾಮಗಾರಿಯಲ್ಲಿ ನಿಯಮ ಗಾಳೀಗೆ ತೂರಿದ ಹಿನ್ನೆಲೆ 5000 ರೂ. ಮರುಪಾವತಿಗೆ ಶಿಾರಸ್ಸು, ಎನ್​ಎಂಎಂಎಸ್​ ತಂತ್ರಾಂಶದಲ್ಲಿ ೋಟೋ ಹಾಕದ ಕಾರಣ ಗಜೇಂದ್ರಗಡ ತಾಲೂಕಿನ ರಾಂಪುರ ಗ್ರಾಮದಲ್ಲಿ 3000 ರೂ., ರಾಜೂರು ಗ್ರಾಮದಲ್ಲಿ 2000 ರೂ., ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ 2000 ರೂ., ಹುಯೀಲಗೊಳ ಗ್ರಾಮದಲ್ಲಿ 3000 ರೂ., ಹೀಗೆ ವಿವಿಧ ಪ್ರಕರಣಗಳಲ್ಲಿ ಹಣ ಮರುಪಾವತಿ ಮಾಡಿದ್ದಾರೆ.
ಸಾಮಾಜಿಕ ಲೆಕ್ಕಪರಿಶೋಧನೆ ವರದಿಯಲ್ಲೂ ಅಕ್ರಮ:
ಜಿಲ್ಲಾ ಓಂಬಡ್ಸಮನ್​ ಅವರ ವರಧಿಯ ಜತೆಗೆ ಸರ್ಕಾರಿ ಸ್ವಾಮ್ಯದ ಲೆಕ್ಕಪರಿಶೋಧನೆ ಇಲಾಖೆ ವರದಿ ಅನುಸಾರವು ಜಿಲ್ಲೆಯ ನರೇಗಾ ಯೋಜನೆಯಲ್ಲಿ ಹಣಕಾಸಿನ ರ್ದುಬಳಕೆ ಆಗಿರುವುದು ಬೆಳಕಿಗೆ ಬಂದಿದೆ. ಸಸಿ ನೆಡುವುದು, ರಸ್ತೆ, ಚರಂಡಿ, ಬದು ನಿಮಾನ್​, ದಡ್ಡಿ, ತೊಟ್ಟಿ, ಒಳಗಟ್ಟಿ ನಿರ್ಮಾಣ, ನಿಯಮ ಗಾಳಿಗೆ ತೂರಿರುವುದು ಸೇರಿದಂತೆ ಅನೇಕ ಪ್ರಕಣದಲ್ಲಿ ಹಣ ರ್ದುಬಳಕೆ ಸಾಭಿತಾಘಿದೆ. 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 733 ಪ್ರಕರಣಗಳಲ್ಲಿ 67.93 ಲಕ್ಷ ಹಣ ರ್ದುಬಳಕೆ ಆಗಿದ್ದು ಪತ್ತೆ ಆಗಿದೆ.