ನಗರದ ಪ್ರಥಮ ಪಜೆಯಾಗಲೂ(ನಗರಸಭೆ ಅಧ್ಯಕ್ಷ ಸ್ಥಾನ) ಬಿಜೆಪಿ ಕಾಂಗ್ರೆಸ್ ಪಕ್ಷದ ನಡುವೆ ಕಾನೂನು ಸಮರ ಮುಂದುರಿದಿದೆ. ನ್ಯಾಯ ದೇವತೆಯ ತಕ್ಕಡಿ ಯಾರ ಕಡೆ ವಾಲುತ್ತದೆ ಎಂಬುದೇ ಕುತೂಹಲ ಮೂಡಿದೆ. ಮಾ. 3ಕ್ಕೆ ನಿಗದಿಯಾಗಿದ್ದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸದ್ಯಕ್ಕೆ ಅನಿಶ್ಚಿತತೆ ಎದುರಾಗಿದ್ದು, ಮಾ.2ರಂದು ಹೈಕೊರ್ಟನಲ್ಲಿ ನಡೆಯುವ ವಿಚಾರಣೆ ಮೇಲೆ ಮಾ.3ರ ಚುನಾವಣೆ ನಿರ್ಧರಿತವಾಗಿದೆ. ಕಾನೂನು ಸಮರದಲ್ಲಿ ಈವರೆಗೂ ಮೇಲುಗೈ ಸಾಧಿಸಿದ್ದ ಕಾಂಗ್ರೆಸ್ ಸದಸ್ಯರು ಕೂಡ ಮಾ. 2ರ ವಿಚಾರಣೆ ಎದುರು ನೋಡುತ್ತಿದ್ದಾರೆ.
ನಕಲಿ ಠರಾವು ಪ್ರಕರಣದಲ್ಲಿ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತರು ಅನರ್ಹತೆ ಮಾಡಿದ್ದರು. ಹೀಗಾಗಿ ನಗರಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಕುಸಿದಿತ್ತು. ಈ ನಡುವೆ ೆ. 28, 2025 ರಂದು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಲು ಉಪವಿಭಾಗಾಧಿಕಾರಿ ಗಂಗಪ್ಪ ಅವರು ಅಧಿಸೂಚನೆ ಹೊರಡಿಸಿದ್ದರು. ೆ.28ರ ಚುನಾವಣೆ ದಿನವೇ ಚುನಾವಣೆ ಮುಂದೂಡುವಂತೆ ಹೈಕೋರ್ಟ ಆದೇಶ ನೀಡಿತ್ತಾದರೂ ಉಪವಿಭಾಗಾಧಿಕಾರಿ ಚುನಾವಣೆ ನಡೆಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಾಗಿತ್ತು. ನ್ಯಾಯಾಂಗದಲ್ಲಿ ವಿಚಾರಣೆ ಮುಂದುವರಿದು, ಕಳೆದ ೆ. 10, 2026 ರಂದು ಹೈಕೋರ್ಟ ಏಕ ಸದಸ್ಯ ಪೀಠವು 45 ದಿನಗಳ ಒಳಗಾಗಿ ಚುನಾವಣೆ ನಡೆಸುವಂತೆ ಚುನಾವಣಾ ಅಧಿಕಾರಿಗೆ ಸೂಚಿಸಿತ್ತು ಮತ್ತು ಅನರ್ಹತೆ ಕುರಿತು ವಿಚಾರಣೆಯನ್ನು ಮಾ. 18ಕ್ಕೆ ಮುಂದೂಡಿತ್ತು. ಈ ನಡುವೆ ಹೈಕೋರ್ಟ ಆದೇಶ ಅನುಸಾರ ಮಾ. 3, 2026ರಂದು ಚುನಾವಣೆ ನಡೆಸಲು ಚುನಾವಣಾ ಅಧಿಕಾರಿ ಗಂಗಪ್ಪ ಅವರು ಅಧಿಸೂಚನೆ ಹೊರಡಿಸಿದ್ದರು. ಹೀಗಾಗಿ ಬಿಜೆಪಿ ಸದಸ್ಯರು ದ್ವೀಸದಸ್ಯ ಪೀಠದಕ್ಕೆ ಸಜಿರ್ ಸಲ್ಲಿಸಿ, ಈ ಮೊದಲು ಚುನಾವಣಾ ಅಧಿಕಾರಿ ಮೇಲಿದ್ದ ನ್ಯಾಯಾಂಗ ನಿಂಧನೆ ಪ್ರಕರಣವನ್ನು ಹೈಕೋರ್ಟ ಗಮನಕ್ಕೆ ತಂದರು. ಗುರುವಾರ ವಿಚಾರಣೆ ನಡೆಸಿದ ದ್ವೀಸದಸ್ಯ ಪೀಠವು, ನ್ಯಾಯಾಂಗ ನಿಂಧನೆ ಪ್ರಕರಣ ಮತ್ತು ಬಿಜೆಪಿ ಸದಸ್ಯರ ಮೂವರು ಅನರ್ಹತೆ ಪ್ರಕರಣ ಮತ್ತೊಮ್ಮೆ ವಿಚಾರಣೆ ನಡೆಸಲು ಅಸ್ತು ಎಂದಿದೆ. ಮಾ. 2 ರಂದು ವಿಚಾರಣೆ ನಡೆಯಲಿದೆ. ಮಾ.3ಕ್ಕೆ ಸುನಾವಣೆ ನಡೆಯಲಿದೆಯೇ? ಇಲ್ಲವೇ? ಎಂಬುದು ಮಾ. 2ರಂದೇ ನಿರ್ಧಾರವಾಗಲಿದೆ.
ಕೃಷ್ಣ - ಚಂದ್ರನಿಗೆ ಹಣೆಬರಹದಲ್ಲಿಲ್ಲ?
025ರಂದು ಚುನಾವಣೆ ಘೋಷಣೆ ಆದ ಸಂದರ್ಭದಲ್ಲಿ ಬಿಜೆಪಿಯಿಂದ ಚಂದ್ರು ತಡಸದ ಮತ್ತು ಕಾಂಗ್ರೆಸ್ಸಿನಿಂದ ಕೃಷ್ಣ ಪರಾಪುರ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಅನರ್ಹತೆ ಪ್ರಕರಣದಿಂದ ಸಂಖ್ಯಾಬಲ ಇಲ್ಲದ ಬಿಜೆಪಿಗೆ ಸೋಲು ಖಚಿತವಾಗಿ ಚುನಾವಣಾ ಬಹಿಷ್ಕರಿಸಿತ್ತು. ಕಾಂಗ್ರೆಸ್ ಗೆಲವು ಸಾಧಿಸಿ ಕೃಷ್ಣ ಪರಾಪುರ ಅಧ್ಯಕ್ಷ ಸ್ಥಾನದ ಹಾರ ಹಾಕಿಕೊಂಡಿದ್ದರು. ಆದರೆ, ನ್ಯಾಯಾಂಗ ನಿಂದನೆ ಪ್ರಕರಣ ಕಾರಣದಿಂದ ಅಧ್ಯಕ್ಷ ಸ್ಥಾನದ ಕೃಷ್ಣ ಪರಾಪುರ ಅವರಿಗೆ ನಗರಸಭೆ ಆಡಳಿತಾಧಿಕಾರಿ ಆಡಳಿತ ಹಸ್ತಾಂತರ ಮಾಡಿರಲಿಲ್ಲ. ಕಳೆದೊಂದು ವರ್ಷದಿಂದ ನ್ಯಾಯಾಲಯದಲ್ಲಿ ಹಗ್ಗ ಜಗ್ಗಾಟ ಮುಂದುವರಿದ ಕಾರಣ ಬಿಜೆಪಿಯ ಚಂದ್ರು ಮತ್ತು ಕಾಂಗ್ರೆಸ್ಸಿನ ಕೃಷ್ಣ ಅವರಿಗೆ ಅಧ್ಯಕ್ಷ ಸ್ಥಾನದ ಗದ್ದುಗೆ ಎಂಬುದು ಏಳು ಸುತ್ತಿನ ಕೋಟೆ ಎಂಬಂತೆ ಬಾಸವಾಗುತ್ತಿದೆ.
ಬಿಡಲೊಪ್ಪದ ಬಿಜೆಪಿ ಸದಸ್ಯರು:
ಅನರ್ಹತೆ ಪ್ರಕರಣದಿಮದ ನಗರಸಭೆಯಲ್ಲಿ ಅಧಿಕಾರ ಕಳೆದುಕೊಂಡ ನಂತರ ಬಿಜೆಪಿ ಸದಸ್ಯರು ಶತಾಯಗತಾಯ ಅಧ್ಯಕ್ಷ ಸ್ಥಾನದ ಗದ್ದುಗೆ ಬಿಡಲೊಪ್ಪುತ್ತಿಲ್ಲ. ಕಾಂಗ್ರೆಸ್ ಹಾಕುತ್ತಿರುವ ಕಾನೂನಿನ ದಿಗ್ಭಂದನಕ್ಕೆ ಬಿಜೆಪಿ ಸದಸ್ಯರು ಕಾನೂನಿಂದಲೇ ಬಂಧನ ತಪ್ಪಿಸಿಕೊಳ್ಳುತ್ತಿದ್ದಾರೆ. ಕಳೆದೊಂದು ವರ್ಷದ ನ್ಯಾಯಾಂಗದಲ್ಲಿ ಅಜಿರ್ ಸಲ್ಲಿಸುವಿಕೆ, ವಿಚಾರಣೆ ಎದುರಿಸುವಿಕೆ ಎಂಬುದು ಬಿಜೆಪಿ ಸದಸ್ಯರಿಗೂ ಪರಿಪಾಠ ಆಗಿದ್ದು, ಕಾನೂನು ಹೋರಾಟದಲ್ಲಿ ಗೆಲಲ್ಲಲೇ ಬೇಕಾದ ಹಠಕ್ಕೆ ಬಿಂದಂತೆ ಬಾಸವಾಗುತ್ತಿದೆ. ಕಾಂಗ್ರೆಸ್ ಬಿಜೆಪಿ ಪೈಪೋಟಿ ನಡುವೆ ನಗರಸಭೆಯ ಅಧ್ಯಕ್ಷರ ಖುಚಿರ್ ಬಿಕೋ ಎನ್ನುತ್ತಿದೆ.