ನಗರಸಭೆ ಗುದ್ದುಗೆ ಗುದ್ದಾಟ ಮುಂದುವರಿದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಾನೂನು ಸಮರದಲ್ಲಿ ಹಾವು ಏಣಿ ಆಟಕ್ಕೆ ರ್ಪೂಣವಿರಾಮ ಇಲ್ಲದಂತಾಗಿದೆ. ಈ ಕಾನೂನು ಸಮರದಲ್ಲಿ ಒಮ್ಮೆ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಮತ್ತೊಮ್ಮೆ ಬಿಜೆಪಿ ತನ್ನ ಹಿಡಿತ ಸಾಧಿಸುತ್ತಿದೆ. ಅದರ ಭಾಗವಾಗಿ ಧಾರವಾಡ ಹೈಕೋರ್ಟ ದ್ವಿಸದಸ್ಯ ಪೀಠ ಬುಧವಾರ ಆದೇಶ ನೀಡಿದ್ದು, ಈ ಹಿಂದೆ ಏಕ ಸದಸ್ಯ ಪೀಠ ನೀಡಿದ್ದ ಅನರ್ಹತೆ ಆದೇಶ ರದ್ದು ಪಡಿಸಿ, ಮತದಾನ ಹಕ್ಕು, ನಗರಸಭೆಯ ಇತರೆ ಅಧಿಕಾರಗಳು ಮೂವರು ಸದಸ್ಯರಿಗೆ ನೀಡಿದೆ. ಮುಂದುವರಿದು, ಈ ಮೂವರು ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಳ್ಳಬೇಕಾದ ಸಂದರ್ಭ ಬಂದಲ್ಲಿ ಕೂಲಂಕುಷವಾಗಿ ವಿಚಾರಣೆ ನಡೆಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ನ್ಯಾಯಾಧೀಶರಾದ ಬಿ.ಎಂ. ಶ್ಯಾಮಪ್ರಸಾದ ಹಾಗೂ ಶಿವಶಂಕರ ಅಮರಣ್ಣವರ ಇದ್ದ ದ್ವಿಸದಸ್ಯ ಪೀಠವು ಬುಧವಾರ ಆದೇಶಿಸಿದೆ. ಸದ್ಯಕ್ಕೆ ಅನರ್ಹತೆ ರದ್ದುಗೊಂಡ ಉಷಾ ದಾಸರ, ಅನೀಲ ಅಬ್ಬಿಗೇರಿ ಮತ್ತು ಗೋಳೆಪ್ಪ ಮುಷಿಗೇರಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾಂಗ್ರೆಸ್ಸಿನ ಮುಂದಿನ ನಡೆ ನಿಗೂಢವಾಗಿದೆ.
ಠರಾವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೂವರು ಸದಸ್ಯರ ಸದಸ್ಯತ್ವವನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು. ಪ್ರಾದೇಶಿಕ ಆಯುಕ್ತರ ಅನರ್ಹತೆ ಆದೇಶ ಪ್ರಶ್ನಿಸಿ ಮೂವರು ಸದಸ್ಯರು ಹೈಕೋರ್ಟ ಏಕ ಸದಸ್ಯ ಪೀಠಕ್ಕೆ ಅಜಿರ್ ಸಲ್ಲಿಸಿದ್ದರು. ಏಕ ಸದಸ್ಯ ಪೀಠವು ಸಹ ಪ್ರಾದೇಶಿಕ ಆಯುಕ್ತರ ಆದೇಶವನ್ನು ಎತ್ತಿ ಹಿಡಿದು ಈ ಹಿಂದೆ ಆದೇಶ ನೀಡಿತ್ತು. ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೂವರು ಸದಸ್ಯರು ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು. ಬುಧವಾರ ಮೂವರು ಸದಸ್ಯರ ಪರ ಆದೇಶ ಹೊರ ಬಿದ್ದಿದೆ.
ಜಿಲ್ಲೆಯಲ್ಲಿ ರಾಜಕೀಯ ಶೀತಲ ಸಮರಕ್ಕೆ ಕಾರಣವಾಗಿದ್ದ ಬಿಜೆಪಿಯ ನಗರಸಭೆ ಮೂವರ ಸದಸ್ಯರ ಅನರ್ಹತೆ ಪ್ರಕರಣ ಒಂದು ಹಂತಕ್ಕೆ ತಾಕಿರ್ಕ ಅಂತ್ಯ ಕಾಣುವ ನಿಟ್ಟಿನಲ್ಲಿ ಸಾಗಿದೆ. ಹೈಕೋರ್ಟ ಆದೇಶದಿಂದ ಬಿಜೆಪಿ ಮೂವರು ನಗರಸಭೆ ಸದಸ್ಯರು ನಗೆ ಬೀರಿದ್ದಾರೆ. ಕಾನೂನು ಸಮರದಲ್ಲಿ ಕಾಂಗ್ರೆಸ್ಸಿನ ಮುಂದಿನ ನಡೆ ನಿಗೂಡವಾಗಿದೆ.
ನಗರದ ಮಧ್ಯಭಾಗದಲ್ಲಿ ಇರುವ 36 ಏಕರೆ ವಕಾರು ಸಾಲು ಪ್ರದೇಶವನ್ನು ಲೀಸ ನೀಡಲು ಮಾಡಿದ್ದ 378ನೇ ಠರಾವು ನಕಲಿ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿಂದೆ ನಗರಸಭೆ ಆಯುಕ್ತರಾಗಿದ್ದ ಪ್ರಶಾಂತ ವರಗ್ಗಪ್ಪನ್ನವರ ಅವರು ನನ್ನ ಸಹಿ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆದು ಮೂವರು ಬಿಜೆಪಿ ಸದಸ್ಯರನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಮಾನತ್ತು ಮಾಡಿದ್ದರು. ಪ್ರಾದೇಶಿಕ ಆಯುಕ್ತರ ಆದೇಶದ ಪ್ರಶ್ನಿಸಿ ಧಾರವಾಡ ವಿಭಾಗೀಯ ಹೈಕೋರ್ಟ ಪೀಠಕ್ಕೆ ಮೊರೆ ಹೋಗಿದ್ದರು.
ಒಂದೂವರೆ ವರ್ಷದ ಹಿಂದೆ ಪ್ರಾದೇಶಿಕ ಆಯುಕ್ತರ "ಅನರ್ಹತೆ ಆದೇಶ'ದ ನಂತರ ಹಲವು ವಿದ್ಯಮಾನಗಳು ನಗರಸಭೆ ಆವರಣದಲ್ಲಿ ಜರುಗಿದವು. ಬಿಜೆಪಿಯ ಮೂವರು ಸದಸ್ಯರ ಸದಸ್ಯತ್ವ ಅನರ್ಹತೆಯಿಂದ ಸಂಖ್ಯಾಬಲದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಕುಸಿದಿತ್ತು. ಆದರೂ ಸಹ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನ ಹಕ್ಕು ನೀಡುವಂತೆ ಹೈಕೋರ್ಟನಿಂದ ಆದೇಶ ಪಡೆಯುವಲ್ಲಿ ಬಿಜೆಪಿ ಸದಸ್ಯರು ಯಶಸ್ವಿ ಆಗಿದ್ದರು. ಈ ನಡುವೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪೂರ್ವದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಮೂಲ ದಾಖಲೆ ಪರಿಶೀಲನೆ ಪ್ರಕ್ರಿಯೆಯಲ್ಲಿ ಸೋತಿದ್ದ ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಮತ್ತೊಮ್ಮೆ ಅನರ್ಹಗೊಳಿಸಿದ್ದ ಪ್ರಾದೇಶಿಕ ಆಯುಕ್ತರ ನಡೆಯಿಂದ ಮತದಾನದ ಹಕನ್ನು ಬಿಜೆಪಿ ಸದಸ್ಯರು ಕಳೆದುಕೊಂಡಿದ್ದರು. ಈ ನಡುವೆ ಕಾಂಗ್ರೆಸ್ ಸದಸ್ಯರ ರಾಜತಾಂತ್ರಿಕ ಮತ್ತು ಚಾಣಾಕ್ಷ$್ಯ ರಾಜಕೀಯ ನಡೆಗಳಿಂದ 2025ರ ೆ. 28 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಕೃಷ್ಣ ಪರಾಪುರ, ಶಕಂತುಲಾ ಅಕ್ಕಿ ಅವರನ್ನು ಚುನಾವಣೆ ನಡೆಸಿ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಕಾಂಗ್ರೆಸ್ ನಡುವೆ ಕಾನೂನು ಸಮಯ ಮುಂದುವರಿದು, ಅನರ್ಹತೆ ಪ್ರಕರಣ ಇತ್ಯರ್ಥ ಆಗುವವರೆಗೂ ಚುನಾವಣೆ ನಡೆಸದಂತೆ ಈ ಹಿಂದೆ ಕೋರ್ಟ ಆದೇಶ ಮಾಡಿದೆ. ಸದಸ್ಯದ ಮಟ್ಟಿಗೆ ಅನರ್ಹತೆ ಪ್ರಕರಣ ಇತ್ಯರ್ಥ ಆಗಿದೆ. ಚುನಾವಣಾ ಅಧಿಕಾರಿಗಳ ನ್ಯಾಯಾಂಗ ನಿಂಧನೆ ಪ್ರಕರಣವು ಇತ್ಯರ್ಥಗೊಂಡಿದೆ. ಈಗ ಬಿಜೆಪಿ ಬಲ 18ಕ್ಕೆ ಏರಿಕೆ ಆಗಿದೆ. 17 ಜನ ಕಾಂಗ್ರೆಸ್ ಸದಸ್ಯರಿದ್ದಾರೆ. ಕಾಂಗ್ರೆಸ್ಸಿನ ಕಾನೂನು ನಡೆ ಮೂಲಕ ನಗರಸಭೆಯಲ್ಲಿ ಚುನಾವಣೆ ಪ್ರಕ್ರಿಯೆ ನಿರ್ಧಾರ ಆಗಲಿದೆ.