ಪ್ರಾದೇಶಿಕ ಆಯುಕ್ತರ "ಅನರ್ಹತೆ' ಆದೇಶ ಎತ್ತಿ ಹಿಡಿದ ಹೈಕೋರ್ಟ
ಜಿಲ್ಲೆಯಲ್ಲಿ ರಾಜಕೀಯ ಶೀತಲ ಸಮರಕ್ಕೆ ಕಾರಣವಾಗಿದ್ದ ಬಿಜೆಪಿಯ ನಗರಸಭೆ ಮೂವರ ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಬಂಧಿಸಿದಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ಸದಸ್ಯತ್ವ ಅನರ್ಹತೆ ಆದೇಶವನ್ನು ಮಂಗಳವಾರ ಎತ್ತಿ ಹಿಡಿದ ಹೈಕೋರ್ಟ, ಆಯುಕ್ತರ ಅನರ್ಹತೆ ಆದೇಶವನ್ನು ಪ್ರಶ್ನಿಸಿ ಮೂವರು ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಅಜಿರ್ಯನ್ನು ಮಂಗಳವಾರ ವಜಾ ಮಾಡಿದೆ. ಹೈಕೋರ್ಟ ಆದೇಶದಿಂದ ಬಿಜೆಪಿ ಮೂವರು ನಗರಸಭೆ ಸದಸ್ಯರ ಅನರ್ಹತೆ ಮುಂದುವರೆದಿದ್ದು, ಬಿಜೆಪಿ ಪಾಳಯದಲ್ಲಿ ಆತಂಕ ಮತ್ತು ತಳಮಳ ಮೂಡಿದರೆ, ಕಾಂಗ್ರೆಸ್ ಪಾಳದಲ್ಲಿ ಮುಗುಳ್ನಗು ಮನೆ ಮಾಡಿದೆ. ಕಳೆದ ಒಂದೂವರೆ ವರ್ಷದಿಂದ "ಸದಸ್ಯತ್ವದ ಅನರ್ಹತೆ' ಕುರಿತು ಹಗ್ಗ ಜಗ್ಗಾಟದಲ್ಲಿ ತೋಡಗಿದ್ದ ಕಾಂಗ್ರೆಸ್ ಬಿಜೆಪಿ ನಡುವಿನ ಒಳಮುನಿಸು ಮತ್ತೊಮ್ಮೆ ಹೊರಬಿದ್ದಂತಾಗಿ, ರಾಜಕೀಯ ಶೀತಲ ಸಮರಕ್ಕೆ ಮತ್ತೊಂದು ವೇದಿಕೆ ಸಿದ್ಧಗೊಂಡಂತಾಗಿದೆ. ಈ ನಡುವೆ ಹೈಕೋರ್ಟ ಅನರ್ಹತೆ ಎತ್ತಿ ಹಿಡಿದರೂ ಕೂಡ, ಚುನಾವಣಾ ಅಧಿಕಾರಿಗಳಿಂದ ನ್ಯಾಯಾಂಗ ನಿಂಧನೆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದ್ದ ಕಾರಣ ನಗರಸಭೆಯಲ್ಲಿ ಆಡಳಿತಾಧಿಕಾರಿಯ ಅಧಿಕಾರವೇ ಇನ್ನೂ ಮುಂದುವರಿಯುವುದು ಸ್ಪಷ್ಟವಾಗಿದೆ.
ನಗರದ ಮಧ್ಯಭಾಗದಲ್ಲಿ ಇರುವ 36 ಏಕರೆ ವಕಾರು ಸಾಲು ಪ್ರದೇಶವನ್ನು ಲೀಸ ನೀಡಲು ಮಾಡಿದ್ದ 378ನೇ ಠರಾವು ನಕಲಿ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿಂದೆ ನಗರಸಭೆ ಆಯುಕ್ತರಾಗಿದ್ದ ಪ್ರಶಾಂತ ವರಗ್ಗಪ್ಪನ್ನವರ ಅವರು ನನ್ನ ಸಹಿ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆದು ಮೂವರು ಬಿಜೆಪಿ ಸದಸ್ಯರನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಮಾನತ್ತು ಮಾಡಿದ್ದರು. ಪ್ರಾದೇಶಿಕ ಆಯುಕ್ತರ ಆದೇಶದ ಪ್ರಶ್ನಿಸಿ ಧಾರವಾಡ ವಿಭಾಗೀಯ ಹೈಕೋರ್ಟ ಏಕ ಸದಸ್ಯಪಿಠಕ್ಕೆ ನಗರಸಭೆ ಮಾಜಿ ಅಧ್ಯಕ್ಷತೆ ಮತ್ತು ಸದಸ್ಯೆ ಉಷಾ ದಾಸರ, ಅನೀಲ ಅಬ್ಬಿಗೇರಿ ಮತ್ತು ಗೋಳೆಪ್ಪ ಮುಷಿಗೇರಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಒಂದೂವರೆ ವರ್ಷದಿಂದ ವಿಚಾರಣೆ ನಡೆದು ಕಳೆದ ಮೂರು ತಿಂಗಳ ಹಿಂದೆ ಹೈಕೋರ್ಟ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ಆದೇಶ ನೀಡಿದ ಏಕ ಸದಸ್ಯ ಪೀಠವು ಪ್ರಾದೇಶಿಕ ಆಯುಕ್ತರ ಆದೇಶ ಎತ್ತಿ ಹಿಡಿದು, ಸದಸ್ಯರ ಮೇಲ್ಮನವಿ ಅಜಿರ್ಯನ್ನು ತಿರಸ್ಕರಿಸಿದೆ.
ಒಂದೂವರೆ ವರ್ಷದ ಹಿಂದೆ ಪ್ರಾದೇಶಿಕ ಆಯುಕ್ತರ "ಅನರ್ಹತೆ ಆದೇಶ'ದ ನಂತರ ಹಲವು ವಿದ್ಯಮಾನಗಳು ನಗರಸಭೆ ಆವರಣದಲ್ಲಿ ಜರುಗಿದವು. ಬಿಜೆಪಿಯ ಮೂವರು ಸದಸ್ಯರ ಸದಸ್ಯತ್ವ ಅನರ್ಹತೆಯಿಂದ ಸಂಖ್ಯಾಬಲದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಕುಸಿದಿತ್ತು. ಆದರೂ ಸಹ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನ ಹಕ್ಕು ನೀಡುವಂತೆ ಹೈಕೋರ್ಟನಿಂದ ಆದೇಶ ಪಡೆಯುವಲ್ಲಿ ಬಿಜೆಪಿ ಸದಸ್ಯರು ಯಶಸ್ವಿ ಆಗಿದ್ದರು. ಈ ನಡುವೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪೂರ್ವದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಮೂಲ ದಾಖಲೆ ಪರಿಶೀಲನೆ ಪ್ರಕ್ರಿಯೆಯಲ್ಲಿ ಸೋತಿದ್ದ ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಮತ್ತೊಮ್ಮೆ ಅನರ್ಹಗೊಳಿಸಿದ್ದ ಪ್ರಾದೇಶಿಕ ಆಯುಕ್ತರ ನಡೆಯಿಂದ ಮತದಾನದ ಹಕನ್ನು ಬಿಜೆಪಿ ಸದಸ್ಯರು ಕಳೆದುಕೊಂಡಿದ್ದರು. ಈ ನಡುವೆ ಕಾಂಗ್ರೆಸ್ ಸದಸ್ಯರ ರಾಜತಾಂತ್ರಿಕ ಮತ್ತು ಚಾಣಾಕ್ಷ$್ಯ ರಾಜಕೀಯ ನಡೆಗಳಿಂದ 2025ರ ೆ. 28 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಕೃಷ್ಣ ಪರಾಪುರ, ಶಕಂತುಲಾ ಅಕ್ಕಿ ಅವರನ್ನು ಚುನಾವಣೆ ನಡೆಸಿ ಆಯ್ಕೆ ಮಾಡಲಾಯಿತು. ಪರವಾಭವಗೊಂಡ ಬಿಜೆಪಿ ಸದಸ್ಯರು ದಿಕ್ಕಾರ ಕೂಗುತ್ತ ಹೊರ ನಡೆದಿದ್ದರು.
ಮೂವರು ಸದಸ್ಯರ ಅಮಾನತ್ತು ಆದೇಶದಿಂದ ಬಿಜೆಪಿ ಸದಸ್ಯರ ಸಂಖ್ಯಾಬಲ 15ಕ್ಕೆ ಕುಸಿದಿದ್ದು, 17 ಜನ ಕಾಂಗ್ರೆಸ್ ಸದಸರಿದ್ದರು. ಸಂಖ್ಯಾಬಲದಲ್ಲಿ ಕುಸಿದ್ದಿದ್ದ ಬಿಜೆಪಿ ಸದಸ್ಯ ಚುನಾವಣೆಗೆ ತಡೆ ನೀಡುವಂತೆ ಅಜಿರ್ ಸಲ್ಲಿಸಿದ್ದರು. ಧಾರವಾಡ ವಿಭಾಗೀಯ ಪೀಠದಲ್ಲಿ ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಮಧ್ಯಾಹ್ನ 1.30ರ ಹೊತ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಗರಸಭೆಗೆ ದೌಡಾಯಿಸಿದರು. ಈ ಮಧ್ಯೆ ಚುನಾವಣೆ ಮುಂದೂಡುವಂತೆ ಹೈಕೋರ್ಟ ಆದೇಶ ನೀಡಿದ್ದರಿಂದ ಬಿಜೆಪಿ ಸದಸ್ಯರಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಹೈಕೋರ್ಟ ಆದೇಶ ಕೈಸೇರದ ಕಾರಣ ಚುನಾವಣಾ ಅಧಿಕಾರಿ ಆಗಿದ್ದ ಉಪ ವಿಭಾಗಾಧಿಕಾರಿ ಗಂಗಪ್ಪ ಅವರ ಚುನಾವಣೆ ನಡೆಸಿದ್ದರು. ಈ ಹಿನ್ನೆಲೆ ನ್ಯಾಯಾಂಗ ನಿಂಧನೆ ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿದೆ. ಚುನಾವಣೆಯಲ್ಲಿ ಗೆಲವು ಸಾಧಿಸಿದರೂ ಸಹ ಕಾಂಗ್ರೆಸ್ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಖುಚಿರ್ ಅಲಂಕರಿಸದಂತಾಗಿದೆ.
* ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ವಕಾರು ಸಾಲು ಲೀಸ್ ನೀಡುವ ಠರಾವು ನಿರ್ಣಯ.
* ವಕಾರು ಸಾಲು ಠರಾವು ದೃಢೀಕರಣ ಪತ್ರಿಯನ್ನು ಲೀಸ್ ಪಡೆದ ಮಾಲೀಕರಿಂದ ಕೋರ್ಟಗೆ ಸಲ್ಲಿಕೆ.
*ಠರಾವು ದರಢೀಕರಣ ಪತ್ರಕ್ಕೆ ನಕಲಿ ಸಹಿ ಮಾಡಿದ್ದಾರೆ ಎಂದು ಮೂವರು ಸದಸ್ಯರು ಸೇರಿದಂತೆ ಇತರರ ವಿರುದ್ಧ ಠಾಣೆಯಲ್ಲಿ ಪೌರಾಯುಕ್ತರು ದೂರು ದಾಖಲು.
* ಜಾಮೀನು ಕೋರಿ ಸದಸ್ಯರು ನ್ಯಾಯಾಲಯ ಮೊರೆ. ಜಾಮೀನು ಪಡೆಯಲು ಯಶಸ್ವಿ.
* ಪ್ರಕರಣ ರದ್ದು ಕೋರಿ ಸದಸ್ಯರಿಂದ ನ್ಯಾಯಾಲಯಕ್ಕೆ ಅಜಿರ್ ಸಲ್ಲಿಕೆ. ಅಜಿರ್ ತಿರಸತ.
* ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಕಲಿ ಸಹಿ ಎಂದು ದೃಢ.
* ಪೊಲೀಸರಿಂದ ಚಾರ್ಜಶೀಟ್ ಸಲ್ಲಿಕ್ಕೆ. ನಕಲಿ ಠರಾವು ಬಗ್ಗೆ ಚಾರ್ಜ ಶೀಟ್ ನಲ್ಲಿ ಉಲ್ಲೇಖ.
* ನಕಲಿ ಠರಾವು ಆರೋಪ ಹಿನ್ನೆಲೆ ಸದಸ್ಯರ ಅಮಾನತ್ತು ಕೋಟಿ ಪೌರಾಯುಕ್ತ, ಜಿಲ್ಲಾಧಿಕಾರಿಗಳಿಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ.
* ಪ್ರಕರಣ ವಿಚಾರಣೆ ನಡೆಸಿದ್ದ ಪ್ರಾದೇಶಿಕ ಆಯುಕ್ತರಿಂದ ಸದಸ್ಯರ ಸದಸ್ಯತ್ವ ಸ್ಥಾನದಿಂದ ಅನರ್ಹ ಆದೇಶ.
* ಪ್ರಾದೇಶಿಕ ಆಯುಕ್ತರ ಆದೇಶ ರದ್ದು ಕೋರಿ ಸದಸ್ಯರಿಂದ ಕೊರ್ಟ ಮೊರೆ. ಅಮಾನತ್ತು ಆದೇಶ ರದ್ದು.
* ಮತದಾನ ಹಕ್ಕು ನೀಡುವಂತೆ ಸದಸ್ಯರಿಂದ ಕೋರ್ಟ ಮೊರೆ. ಹೈಕೋರ್ಟ ಅಸ್ತು.
* ಸುಪ್ರೀಂ ಕೋರ್ಟ ಪ್ರಕರಣಗಳ ಗಣನೆಗೆ ತೆಗೆದುಕೊಂಡು ಆದೇಶ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಕೋರ್ಟ್ ಸೂಚನೆ
* ಹೈಕೋರ್ಟ ಆದೇಶ ನೀಡಿದ ದಿನ ಸಂಜೆ ವೇಳೆ ಸುಪ್ರೀಂ ಕೋರ್ಟ ಪ್ರಕರಣ ಉಲ್ಲೇಖಿಸಿ ಪ್ರದಾದೇಶಿಕ ಆಯುಕ್ತರಿಂದ ಮತ್ತೊಮ್ಮೆ ಅಮಾನತ್ತು ಆದೇಶ.
* ಅಮಾನತ್ತು ಹಿನ್ನೆಲೆ ಚುನಾವಣೆ ಮುಂದೂಡುವಂತೆ ಬಿಜೆಪಿ ಸದಸ್ಯರು ಕೋರ್ಟ ಮೊರೆ. ಚುನಾವಣೆ ದಿನವೇ ಚುನಾವಣೆ ಮೂಂದೂಡಿದ ಕೋರ್ಟ
* ಕೋರ್ಟ ಆದೇಶ ದೃಢೀಕೃತ ಪತ್ರಿ ಕೈ ಸೇರದ ಹಿನ್ನೆಲೆ ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾ ಅಧಿಕಾರಿ.
* ಕಾಂಗ್ರೆಸ್ ಪಕ್ಷಕ್ಕೆ ಗೆಲವು, ಕಾನೂನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪ.
* ಚುನಾವಣಾ ಪ್ರಕ್ರಿಯೆ ವಿರುದ್ಧ ಬಿಜೆಪಿ ಕೋರ್ಟ ಮೊರೆ. ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿ.
* ಮೂವರು ಬಿಜೆಪಿ ಸದಸ್ಯರು ಪ್ರಾದೇಶಿಕ ಆಯುಕ್ತರ "ಸದಸ್ಯತ್ವ ಅನರ್ಹತೆ' ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅಜಿರ್ ವಿಚಾರಣೆ. ಪ್ರಾದೇಶಿಕ ಆಯುಕ್ತರ ಆದೇಶ ಎತ್ತಿ ಹಿಡಿದ ಕೋರ್ಟ