ಗದಗ ನಗರದಲ್ಲಿ ಸಿ.ಎಸ್​.ಮುತ್ತಿನಪೆಂಡಿಮಠ ಪ್ರತಿಷ್ಠಾನದ ವತಿಯಿಂದ ಎಂ.ಕೆ. ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ವಸಂತ ಮೇಟಿ, ಚಂದ್ರು ಬಾಳಿಹಳ್ಳಿಮಠ, ಎಸ್​. ಜಿ. ಪಲ್ಲೇದ, ಸಿದ್ದಣ್ಣ ಮಾರನಬಸರಿ, ಈರಣ್ಣ ಮೇರವಾಡೆ, ಎಸ್​. ಪಿ. ಸಂಶಿಮಠ, ಅಮರನಾಥ ಮಲ್ಲಾಡದ, ಪ್ರಸನ್ನ ಶಾಬಾದಿಮಠ, ವಿಜಯ ಮುತ್ತಿನಪೆಂಡಿಮಠ, ಎಫ್​. ಎ. ಸಿಂದಗಿ, ಲತಾ ಮುತ್ತಿನಪೆಂಡಿಮಠ ಇತರರು ಇದ್ದರು. 
ರಾಜ್ಯ

ಸಿ. ಎನ್. ಮುತ್ತಿನಪೆಂಡಿಮಠರವರು ಬದ್ಧತೆಯಿಂದ ಸಮಾಜದ ಹಿತಾಸಕ್ತಿ ಕಾಪಾಡಿದವರು: ಎಂ. ಕೆ. ಕವಟಗಿಮಠ

ಗದಗ: ಒಬ್ಬ ರಾಜಕಾರಣಿ ಅಥವಾ ಸಮಾಜದ ಮುಖಂಡರು ಅತ್ಯಂತ ಬದ್ಧತೆಯಿಂದ ಕೆಲಸ ಮಾಡಬೇಕು ಒಂದು ಗುರಿಗೆ ಸಂಪೂರ್ಣವಾಗಿ ಸಮರ್ಪಣೆಯಾಗಿ ಕೆಲಸ ಮಾಡಿದರೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಅಂತಹ ಬದ್ಧತೆಯನ್ನು ಮಾಜಿ ಶಾಸಕರಾದ ಲಿಂ. ಸಿ. ಎಸ್. ಮುತ್ತಿನಪೆಂಡಿಮಠರವರಲ್ಲಿ ನಾವು ಕಂಡಿದ್ದೇವೆ ಎಂದು ಮಾಜಿ ವಿಧಾನಪರಿಷತ ಸದಸ್ಯರಾದ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು.
ನಗರದಲ್ಲಿ ಸಿ.ಎಸ್.ಮುತ್ತಿನಪೆಂಡಿಮಠ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದು ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಒಬ್ಬ ರಾಜಕಾರನಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಕೆಲಸಗಳು ಪೂರ್ಣಗೊಳ್ಳವುವು ಆದ್ದರಿಂದ ಜನರು ತೃಪ್ತರಾಗಿ ಜನರ ಮನಸ್ಸಿನಲ್ಲಿ ಅಜರಾಮರಾಗಿರುವರು ಎಂದರು.
ಸಿ. ಎನ್. ಮುತ್ತಿನಪೆಂಡಿಮಠ ವಕೀಲರು ತಮ್ಮ ಕಾನೂನು ಪದವಿಯನ್ನು ಬೆಳಗಾವಿಯಲ್ಲಿ ಪಡೆದಿರುವರು. ಅಂದಿನ ವಿದ್ಯಾಭ್ಯಾಸದ ಸಮಯದಿಂದ ಕೆ.ಎಲ್.ಇ. ಸಂಸ್ಥೆಯ ಜೊತೆಗೆ ಅವಿನಾಭಾವ ಸಂಬಂಧ. ಅವರು ಕೆ.ಎಲ್.ಇ.ಯ ಸದಸ್ಯರಾಗಿ, ಶಾಸಕರಾಗಿ ನಮ್ಮ ಸಮಾಜದ ಹಿರಿಯರಾಗಿ ಅನೇಲ ಸಲಹೆಗಳನ್ನು ಕೊಡುತ್ತಾ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಅವರ ಒಡನಾಟವನ್ನು ಸ್ಮರಿಸಿಕೊಂಡರು.
ಇಂದು ಬೃಹತವಾಗಿ ಬೆಳೆದ ಕೆ.ಇಲ್.ಇ. ಸಂಸ್ಥೆ ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜು ಮತ್ತು ಹಾಸ್ಟೆಲ್‌ನ್ನು ಈಗಾಗಲೇ ಸೇವೆಯನ್ನು ಸಲ್ಲಿಸುತ್ತಿದ್ದು ಅದನ್ನು ಇನ್ನೂ ಹೆಚ್ಚಿನ ಉನ್ನತಿಕರಿಸುವ ಯೋಜನೆ ಇದೆ. ಈ ಭಾಗದ ಜನರಿಗೆ ಉತ್ತಮ ಆಸ್ಪತ್ರೆ ಮೂಲಕ ರೋಗಿಗಳಿಗೆ ಚಿಕಿತ್ಸೆ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಕೆ. ಎಲ್.ಇ. ಸಂಸ್ಥೆಗೆ ಸತತ ಐದನೇ ಬಾರಿ ನಿರ್ದೇಶಕನ್ನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ತಾವು ಪ್ರೀತಿಯಿಂದ ಏರ್ಪಡಿಸಿದ ಸನ್ಮಾನವನ್ನು ಸ್ವೀಕರಿಸಿದ್ದೇನೆ. ಪ್ರತಿಷ್ಠಾನವು ಇನ್ನೂ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸಲಿ ಎಂದು ಮಾತನಾಡಿದರು.
ಸಿ.ಎಸ್.ಮುತ್ತಿನಪೆಂಡಿಮಠ ಪ್ರತಿಷ್ಠಾನದ ಅಧ್ಯಕ್ಷರಾಗಿ ವಸಂತ ಮೇಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿಗಳಾದ ನಿವೃತ್ತ ನ್ಯಾಯಾಧೀಶರಾದ ಎಸ್. ಜಿ. ಪಲ್ಲೇದರವರು ವಕೀಲರ ಒಡನಾಟವನ್ನು ನೆನೆದು ಮಾತನಾಡುತ್ತ ಕೆ.ಎಲ್.ಇ. ಸಂಸ್ಥೆಗಳ ಕಾರ್ಯವೈಖರಿ ಅದರಲ್ಲಿ ಕವಟಗಿಮಠರ ಸೇವೆಯನ್ನು ಮೆಚ್ಚಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಸಿದ್ದಣ್ಣ ಮಾರನಬಸರಿ, ಈರಣ್ಣ ಮೇರವಾಡೆ, ಎಸ್. ಪಿ. ಸಂಶಿಮಠ, ಅಮರನಾಥ ಮಲ್ಲಾಡದ, ಪ್ರಸನ್ನ ಶಾಬಾದಿಮಠ, ವಿಜಯ ಮುತ್ತಿನಪೆಂಡಿಮಠ, ಎಫ್. ಎ. ಸಿಂದಗಿ, ಲತಾ ಮುತ್ತಿನಪೆಂಡಿಮಠ ಹಾಗೂ ಸದಾಶಿವಯ್ಯ ಮದರಿಮಠ, ತೋಂಟೇಶ ಕುರಡಗಿ, ಜಗದೀಶ ಕುಲಕರ್ಣಿ, ವಿರೇಶ ಕೂಗು, ಅಮರನಾಥ ಗಡಗಿ, ವಿ. ಎಲ್. ಪಾಟೀಲ, ವಿಜಯ ಬಾಳಿಹಳ್ಳಿಮಠ, ಗಣಾಚಾರಿ ದಂಪತಿಗಳು, ಕಾರ್ತಿಕ, ಅಭಿಷೇಕ, ಆರ್ಯನ್, ಸೇರಿದಂತೆ ಅನೇಕ ಅಭಿಮಾನಿಗಳು ಭಾಗವಹಿಸಿದ್ದರು.