ಗದಗ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಕಳೆದುಹೋದ ಮೊಬೈಲ್​ ಮತ್ತೆ ಮಾಡಿ ಎಸ್ಪಿ ಕಚೇರಿಯಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು. 
ರಾಜ್ಯ

ಕಳೆದ 4 ತಿಂಗಳಲ್ಲಿ 1.13 ಕೋಟಿ ರೂ. ಮೌಲ್ಯದ 769 ಕಳೆದುಹೋದ ಮೊಬೈಲ್​ ಪತ್ತೆ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಜನವರಿಯಿಂದ ಏಪ್ರಿಲ್​ ಅಂತ್ಯದವರೆಗೆ ಕೇವಲ 4 ತಿಂಗಳ ಅವಧಿಯಲ್ಲಿ 1.13 ಕೋಟಿ ರೂ. ಮೌಲ್ಯದ 769 ಕಳೆದುಹೋದ ಮೊಬೈಲ್​ ಪತ್ತೆ ಮಾಡಲಾಗಿದ್ದು, ಮೊಬೈಲ್​ ಮಾಲೀಕರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ ಹೇಳಿದರು.
ನಗರದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮೊಬೈಲ್​ ಕಳೆದುಕೊಂಡ ಸಾರ್ವಜನಿಕರಿಗೆ ಪತ್ತೆ ಮಾಡಲಾದ ಮೊಬೈಲ್​ಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಕಳೆದುಹೋದ ಹಾಗೂ ಕಳ್ಳತನ ಮಾಡಿದ ಮೊಬೈಗಳನ್ನು ಪತ್ತೆ ಮಾಡುವ ಕುರಿತು ಕೇಂದ್ರ ಸರ್ಕಾರ ಸಿಇಐಆರ್​ ಪೋರ್ಟಲ್​ಅನ್ನು ಫೆಬ್ರುವರಿ-2023ರಲ್ಲಿ ಜಾರಿಗೆ ತಂದಿತ್ತು. ತಂತ್ರಾಂಶವನ್ನು ಪರಿಣಾಮಕಾರಿಗಯಾಗಿ ಜಾರಿ ಮಾಡಿ ಸಾರ್ವಜನಿಕರ ಪರವಾಗಿ ಸ್ವತಃ ನಾವೇ ದೂರುಗಳನ್ನು ದಾಖಲಿಸಿ 2025ರ ಅಂತ್ಯದವರೆಗೆ ಒಟ್ಟು 1,527 ಮೊಬೈಲ್​ಗಳನ್ನು ಸಾರ್ವಜನಿಕರಿಗೆ ಮರಳಿ ನೀಡಲಾಗಿದೆ. 2026ರ ಜನೆವರಿ 1ರಿಂದ ಕೆವಲ 4 ತಿಂಗಳಲ್ಲಿ 1,13,79,314 ಮೌಲ್ಯದ 769 ಮೊಬೈಳನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ಮರಳಿ ನೀಡಲಾಗಿದೆ. ಸಿಇಐಆರ್​ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 5,546 ಮೊಬೈಲ್​ಗಳನ್ನು ಬ್ಲಾಕ್​ ಮಾಡಿದ್ದು, ಅದರಲ್ಲಿ 3,251 ಮೊಬೈಲ್​ಗಳು ಪತ್ತೆಯಾಗಿವೆ. ಅದರಲ್ಲಿ 2,295 ಮೊಬೈಲಗಳನ್ನು ಜಪ್ತಿ ಮಾಡಿ ಮೂಲ ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಹೇಳಿದರು.
ಡಿವೈಎಸ್​ಪಿ ಎಂ.ಐ. ಸಜ್ಜನ, ಮುರ್ತುಜಾ ಖಾದ್ರಿ, ಪ್ರಭುಗೌಡ ಕಿರೇದಹಳ್ಳಿ, ಸಿಪಿಐ ಶಿವಾನಂದ ವಾಲಿಕಾರ, ಧೀರಜ ಶಿಂದೆ, ಎಲ್​. ಕೆ. ಜೂಲಕಟ್ಟಿ, ಸಿದ್ರಾಮೇಶ ಗಡೇದ, ಮಂಜುನಾಥ ನಡುವಲಮನಿ, ಪಿಎಸ್​ಐ ಚನ್ನಪ್ಪ ದೆವೂರ, ಲಕ್ಷ$್ಮಣ ಆರಿ, ಮಾರುತಿ ಜೋಗದಂಡಕರ, ಈರಪ್ಪ ರಿತ್ತಿ, ಐಶ್ವರ್ಯ ನಾಗರಾಳ, ಪ್ರಕಾಶ ಬಣಕಾರ, ಪ್ರಕಾಶ ಡಿ., ನಾಗರಾಜ ಗಡಾದ ಇತರರು ಇದ್ದರು.
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಗದಗ ಶಹರ ಠಾಣೆ ವ್ಯಾಪ್ತಿಯಲ್ಲಿ 131, ಗದಗ ಗ್ರಾಮೀಣ 83, ಬೆಟಗೇರಿ 8, ಬೆಟಗೇರಿ ಬಡಾವಣೆ 46, ಮುಳಗುಂದ 14, ಲೆ$್ಮಶ್ವರ 83, ಶಿರಹಟ್ಟಿ 5, ನರಗುಂದ 41, ರೋಣ 166, ಗಜೇಂದ್ರಗಡ 53, ಮುಂಡರಗಿ 109, ನರೇಗಲ್​ 13 ಹಾಗೂ ಸೈಬರ್​ ಠಾಣೆಯಲ್ಲಿ 17 ಸೇರಿ ಒಟ್ಟು 769 ಕಳೆದುಹೋದ ಮೊಬೈಲ್​ ಗಳನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ಮರಳಿಸಲಾಯಿತು.
ಕೋಟ್​
ಕೆವಲ 4 ತಿಂಗಳಲ್ಲಿ 1.13 ಕೋಟಿ ರೂ. ಮೌಲ್ಯದ 769 ಕಳೆದುಹೋದ ಮೊಬೈಲ್​ ಪತ್ತೆ ಮಾಡಿ ಮರಳಿ ಸಾರ್ವಜನಿಕರಿಗೆ ಹಸ್ತಾಂತರಿಸಿರುವುದು ಹೆಮ್ಮೆಯ ವಿಷಯ. ಕಳೆದುಹೋದ ಮೊಬೈಲ್​ ಪತ್ತೆಗೆ ಶ್ರಮಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದು.
ರೋಹನ ಜಗದೀಶ, ಜಿಲ್ಲಾ ಎಸ್ಪಿ, ಗದಗ