ಗದಗ ನಗರದ ಛತ್ರಪತಿ ಶಿವಾಜಿ ಭವನದಲ್ಲಿ ಮರಾಠಾ ಸಮಾಜದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟಬುಕ್​ ವಿತರಣಾ ಕಾರ್ಯಕ್ರಮ ಜರುಗಿತು. ಎಸ್​. ಆರ್​. ೂರ್ಪಡೆ, ಅಶ್ವಿನಿ ಜಗತಾಪ, ಮುದ್ದು ತುಕ್ಕಪ್ಪನವರ, ಹನಮಂತಪ್ಪ ಹೆಬ್ಬಳ್ಳಿ, ಮೋಹನರಾವ್​ ಗ್ವಾರಿ, ದೀಪಾ ಮಾಡಿಕರ, ಬಸವರಾಜ ಹುಬ್ಬಳ್ಳಿ, ಸುರೇಶ ಬೇಂದ್ರೆ, ನರಸಪ್ಪ ತುಕ್ಕಪ್ಪನವರ, ಮಾರುತಿ ಅರಳಿಕಟ್ಟಿ, ಮಂಜು ಮಾನೆ ಹಲವರು ಇದ್ದರು. 
ರಾಜ್ಯ

ಮರಾಠಾ ಸಮಾಜದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ

ಗದಗ: ಮರಾಠಾ ವಿದ್ಯಾವರ್ಧಕ ಸಂ ವತಿಯಿದ ಸೋಮವಾರ ಮುಳಗುಂದ ನಾಕಾ ಹತ್ತಿರವಿರುವ ಛತ್ರಪತಿ ಶಿವಾಜಿ ಭವನದಲ್ಲಿ ಮರಾಠಾ ಸಮಾಜದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟಬುಕ್​ ವಿತರಣಾ ಕಾರ್ಯಕ್ರಮ ಜರುಗಿತು.
ಸಮಾಜದ ಮುಖಂಡ ಎಸ್​. ಆರ್​. ೂರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ವಿದ್ಯಾಥಿರ್ಗಳು ಇದ್ದಾರೆ. ಅವರಿಗೆ ಪಾಲಕರು ವಿದ್ಯಾಭ್ಯಾಸ ರ್ಪೂಣಗೊಳಿಸಲು ಹೆಚ್ಚಿನ ಮಾಹಿತಿ ತಿಳುವಳಿಕೆ ನೀಡದ ಕಾರಣ ವಿದ್ಯಾಥಿರ್ಗಳು ಸಂರ್ಪೂಣ ವಿದ್ಯಾಭ್ಯಾಸ ಮುಗಿಸದೇ ಇರುವುದರಿಂದ ಸರ್ಕಾರಿ ನೌಕರಿ ಹಾಗೂ ಉನ್ನತ ಹುದ್ದೆಗಳನ್ನು ಪಡೆಯಲು ವಿಲರಾಗುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳಲ್ಲಿ ವಿದ್ಯಾಭ್ಯಾಸದ ಕುರಿತು ಹೆಚ್ಚಿನ ಕನಸುಗಳನ್ನು ತುಂಬಿ ಅವುಗಳು ನನಸಾಗುವಂತೆ ಶ್ರಮಿಸಬೇಕು ಎಂದರು.
ಸಮಾಜದ ಮಹಿಳಾ ಮಂಡಳದ ಅಧ್ಯೆ ಅಶ್ವಿನಿ ಜಗತಾಪ ಮಾತನಾಡಿ, ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರೂ ಸಹ ಕಾರ್ಯಕ್ರಮದಲ್ಲಿ ಮಹಿಳೆಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದೇ ಇರುವುದು ಶೋಚನಿಯ ಸಂಗತಿ. ಇಂತಹ ಕಾರ್ಯಕ್ರಮಗಳಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದರೆ ಮಕ್ಕಳಿಗೂ ಹೆಚ್ಚಿನ ಸಂತೋಷ ಆಗುತ್ತದೆ ಎಂದು ಸಭೆಯನ್ನು ಉದ್ದೆಶಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರುಣಕುಮಾರ ಚವ್ಹಾಣ, ನಮ್ಮ ಸಮಾಜ ಬಡತನದಿಂದ ಕೂಡಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುಲು ವಿಲವಾಗುತ್ತಿದೆ. ಕರ್ನಾಟಕ ಸರ್ಕಾರದಿಂದ ಮತ್ತು ಹಲವು ಸಂ ಸಂಸ್ಥೆಗಳಿಂದ ವಿದ್ಯಾಥಿರ್ಗಳಿಗೆ ಸೌಲಭ್ಯಗಳ್ಳಿವೆ. ಪಾಲಕರು ಅವುಗಳ ಮಾಹಿತಿ ಪಡೆದುಕೊಂಡು ಸೌಲಭ್ಯಗಳನ್ನು ಪಡೆದುಕೊಂಡು ಮಕ್ಕಳನ್ನು ರ್ಪೂಣ ವಿದ್ಯಾಭ್ಯಾಸ ಮಾಡಿಸುವ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದರು.
ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟಬುಕ್​ ವಿತರಣೆ ಮಾಡಲಾಯಿತು. ಮುದ್ದು ತುಕ್ಕಪ್ಪನವರ, ಹನಮಂತಪ್ಪ ಹೆಬ್ಬಳ್ಳಿ, ಮೋಹನರಾವ್​ ಗ್ವಾರಿ, ದೀಪಾ ಮಾಡಿಕರ, ಬಸವರಾಜ ಹುಬ್ಬಳ್ಳಿ, ಸುರೇಶ ಬೇಂದ್ರೆ, ನರಸಪ್ಪ ತುಕ್ಕಪ್ಪನವರ, ಮಾರುತಿ ಅರಳಿಕಟ್ಟಿ, ಮಂಜು ಮಾನೆ ಹಲವರು ಇದ್ದರು.