ಐತಿಹಾಸಿಕ ಸ್ಥಳ, ದೇವಾಲಯಗಳ ಬೀಡು, ಶಿಲ್ಪಕಲೆಯ ತೊಟ್ಟಿಲು ಎಂದು ಪ್ರಸಿದ್ಧವಾಗಿರುವ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಮುಂದುವರಿದಿದೆ. ಇನ್ನೊಂದೆಡೆ ಲಕ್ಕುಂಡಿ ಗ್ರಾಮದಾದ್ಯಂತ, ಹೊಲಗದ್ದೆಗಳಲ್ಲಿ ಪ್ರಚ್ಯಾವಶೇಷಗಳು ಚೆಲ್ಲಾಪಿಲ್ಲಿಯಾಗಿ ಹರಿಕೊಂಡಿವೆ. ಶನಿವಾರ ನಾಗರ ಶಿಲೆಗಳು, ಗಣೇಶ ವಿಗ್ರಹ, ನರಸಿಂಹ ದೇವರುಗಳು ಲಕ್ಕುಂಡಿಯ ಹೊರವಲಯದಲ್ಲಿ ಮಾಲೀಕತ್ವದ ಜಮೀನಿನಲ್ಲಿ ಬೆಳಕಿಗೆ ಬಮದಿದ್ದು, ಮಾಲೀಕರು ಅವೇಶಷಗಳನ್ನು ಬಳಸಿ, ತೋಟದ ಮನೆ, ಭಾವಿ ಕಟ್ಟಿದ್ದಾರೆ. ಅವರ ಹೊಗದ್ದೆಗಳಲ್ಲಿ ನಾಗರ ಶಿಲೆಗಳು ವಿಗ್ರಹಗಳು ಪತ್ತೆಯಾಗಿವೆ. ಇಂತಹ ಅವೇಶಷಗಳನ್ನು ಸಂಗ್ರಹಿಸಲು ಲಕ್ಕುಂಡಿ ಪ್ರಾಧಿಕಾರ ಮುಂದಾಗಿದೆ.
ಲಕ್ಕುಂಡಿಯ ಹೊರವಲಯದಲ್ಲಿರುವ ಷಣ್ಮುಖಪ್ಪ ರವದಿ ಎಂಬುವರ ಖಾಸಗಿ ಜಮೀನಿನಲ್ಲಿ ಅಪರೂಪದ 7 ಹೆಡೆಯ ನಾಗರ ಶಿಲಾಕೃತಿ ಪತ್ತೆಯಾಗಿದೆ. ಸುಂದರ ಕೆತ್ತನೆಯೊಂದಿಗೆ ರೂಪುಗೊಂಡಿರುವ ಈ ಶಿಲಾಕೃತಿಯ ಸರ್ಪ ದೇಹದ ಭಾಗ ಸುಮಾರು ಐದಾರು ಅಡಿ ನೆಲದೊಳಗೆ ಹುದುಗಿರುವುದು ವಿಶೇಷ. ಅದೇ ಸ್ಥಳದಲ್ಲಿ ಎರಡು ಹೆಡೆಯುಳ್ಳ ಇನ್ನಿತರ ನಾಗರ ಶಿಲೆಗಳೂ ಪತ್ತೆಯಾಗಿವೆ.
ಗ್ರಾಮದ ಹಿರಿಯರಲ್ಲಿ ನಿಧಿ ಇದ್ದಲ್ಲಿ ಸರ್ಪಗಳು ಕಾವಲು ಕಾಯುತ್ತವೆ ಎಂಬ ನಂಬಿಕೆ ಬಹುಕಾಲದಿಂದಲೇ ಚಾಲ್ತಿಯಲ್ಲಿದೆ. ಇದೀಗ ಪತ್ತೆಯಾಗಿರುವ ಈ ನಾಗರ ಶಿಲೆಗಳು ಆ ನಂಬಿಕೆಗೆ ಪುಷ್ಟಿ ನೀಡುವಂತಿವೆ. ಇತಿಹಾಸ ತಜ್ಞರ ಪ್ರಕಾರ, ಈ 7 ಹೆಡೆಯ ನಾಗರ ಶಿಲೆ ವಿಜಯನಗರ ಅರಸರ ಕಾಲಕ್ಕೆ ಸೇರಿದ್ದು ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇತಿಹಾಸ ತಜ್ಞೆ ಹನುಮಾಕ್ಷಿ ಗೋಗಿ, ಲಕ್ಕುಂಡಿ ಒಂದು ಕಾಲದಲ್ಲಿ ಅತ್ಯಂತ ಸಂಪದ್ಭರಿತ ನಾಡಾಗಿತ್ತು. ಯುದ್ಧ, ರೋಗ ಅಥವಾ ದಂಡೆತ್ತಿದ ದಾಳಿಗಳ ಸಂದರ್ಭದಲ್ಲಿ ಜನರು ತಮ್ಮ ಚಿನ್ನಾಭರಣ, ಮುತ್ತುರತ್ನಗಳನ್ನು ನೆಲದಲ್ಲಿ ಹುದುಗಿಸಿ ಇಡುತ್ತಿದ್ದರು. ಯುದ್ಧದ ನಂತರ ಬದುಕಿದ್ದರೆ ಅವುಗಳನ್ನು ಮರಳಿ ತೆಗೆದುಕೊಳ್ಳುತ್ತಿದ್ದರು. ಆದರೆ ಯುದ್ಧದಲ್ಲಿ ಮರಣ ಹೊಂದಿದವರ ಸಂಪತ್ತು ನೆಲದಲ್ಲೇ ಉಳಿದು ನಿಧಿಯಾಗಿ ಪರಿವರ್ತನೆಯಾಗುತ್ತಿತ್ತು. ಆ ನಿಧಿಗಳ ರಕ್ಷಣೆಗೆ ನಾಗರ ಶಿಲೆಗಳ ಪ್ರತಿಕವನ್ನು ಬಳಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಲಕ್ಕುಂಡಿ ಶಿಲ್ಲಕಲೆಯ ತೊಟ್ಟಿಲು ಎಂಬುದಕ್ಕೆ ಮತ್ತಷ್ಟು ಸಾಕ್ಷಿ ದೊರಕಿವೆ. ಗ್ರಾಮದ ಕಲ್ಲಯ್ಯ ಬಳಗಾನೂರ ಹಾಗೂ ಷಣ್ಮುಖಪ್ಪ ರವದಿ ಅವರ ಜಮೀನಿನಲ್ಲಿರುವ ಬಾವಿ ಹಾಗೂ ತೋಟದ ಮನೆಗಳ ಗೋಡೆಗಳಲ್ಲಿ ಅಪಾರ ಐತಿಹಾಸಿಕ ಶಿಲಾಕೃತಿಗಳು ಕಂಡುಬಂದಿವೆ. ನೂರಾರು ವರ್ಷಗಳ ಹಿಂದೆಯೇ ನಿಮಿರ್ಸಲಾದ ಈ ಬಾವಿ ಹಾಗೂ ಮನೆಗಳಲ್ಲಿ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಕಾಲದ ದೇವಾಲಯಗಳಿಂದ ಉಳಿದ ಶಿಲೆಗಳನ್ನು ಬಳಸಲಾಗಿದೆ.
ಬಾವಿಯೊಳಗೆ ಸರಸ್ವತಿ, ಲಕ್ಷಿ$್ಮ ಮೂತಿರ್ ಎನ್ನುವಂತಹ ದೇವಾಲಯಗಳ ಅಲಂಕಾರಿಕ ಕೆತ್ತನೆಯ ಕಲ್ಲಶಿಲೆಗಳು ಪತ್ತೆಯಾಗಿದ್ದು, ತೋಟದ ಮನೆಯ ಗೋಡೆಗಳಲ್ಲಿ ಕೀತಿರ್ಮುಖ, ಶೈವ ದೇವಾಲಯದ ದ್ವಾರಪಾಲಕರು, ದಾನಶಿಲಾ ಶಾಸನಗಳು ಸೇರಿದಂತೆ ಅನೇಕ ಪ್ರಾಚ್ಯಾವಶೇಷಗಳು ಗೋಚರಿಸುತ್ತಿವೆ. ಇವೆಲ್ಲವೂ ನಮ್ಮ ಹಿರಿಯರು ಕಟ್ಟಿಸಿದ ಮನೆ ಎಂದು ಮಾಲೀಕರು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಅಗೆದಷ್ಟು, ಬಗೆದಷ್ಟು ಇತಿಹಾಸ ಬಯಲಾಗುತ್ತಿದೆ. ನಿಧಿ ಕಾವಲುಗಾರರಾದಂತೆ ಕಾಣುವ ಟಸರ್ಪ ಶಿಲೆಗಳ ಪತ್ತೆ, ಲಕ್ಕುಂಡಿಯ ನಿಗೂಢ ಸಂಪತ್ತಿನ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ನಿಜಕ್ಕೂ ಚಿನ್ನದ ಕಾವಲುಗಾಗಿ ಸರ್ಪಗಳು ಇರುತ್ತವೆಯೇ ಎಂಬುದಕ್ಕೆ ಉತ್ತರ ತಜ್ಞರೇ ಹೇಳಬೇಕಿದೆ.