ಗದಗ 
ರಾಜ್ಯ

ಜಿಲ್ಲೆಯಲ್ಲಿ ಪೌತಿ ಖಾತೆ ಅಭಿಯಾನ ಪೂರ್ಣಗೊಳಿಸಲು ಅವಕಾಶ: ಸಚಿವ ಕೃಷ್ಣಬೈರೇಗೌಡ

ಶಿವಾನಂದ ಹಿರೇಮಠ
ಗದಗ: ಜಿಲ್ಲೆಯಲ್ಲಿ ಪೌತಿ ಖಾತೆ ಅಭಿಯಾನ ಪೂರ್ಣಗೊಳಿಸಲು ಅವಕಾಶ ಇದೆ. ಇದನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಭೂ ಸುರಕ್ಷಾ ಯೋಜನೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ಗದಗ ತುಂಬ ಹಿಂದುಳಿದಿದೆ. ಈ ಕೆಲಸದಲ್ಲಿ ವೇಗ ಹೆಚ್ಚಿಸಬೇಕು.
ಗ್ರಾಮ ಲೆಕ್ಕಿಗರಿಗೆ ಇ–ಆಫೀಸ್‌ ಅನ್ನು ಮಾರ್ಚ್‌ 1ರಿಂದ ಕಡ್ಡಾಯಗೊಳಿಸಬೇಕು. ಈ ಮೂರನ್ನು ತಕ್ಷಣಕ್ಕೆ ಆಗಬೇಕಿದೆ.
ಸರ್ಕಾರಿ ಜಮೀನಿನ ರಕ್ಷಣೆಗೆ ಲ್ಯಾಂಡ್‌ ಬೀಟ್‌, ಜಮಾಬಂಧಿ ಯೋಜನೆಗಳು ಮುಂದಿನ ವರ್ಷ ಜಂಟಿಯಾಗಿ ಕೈಗೆತ್ತಿಕೊಳ್ಳಲಾಗುವುದು. ಅದರ ಜತೆಗೆ ಹಿಡುವಳಿ ಜಮೀನುಗಳನ್ನು ಎಲ್ಲವನ್ನೂ ಪೋಡಿ ಮಾಡಬೇಕು. ಇದನ್ನು ಡಿಸಿ ಜತೆಗೆ ಬೇರೆ ಬೇರೆ ಸಂದರ್ಭಗಳಲ್ಲಿ ಮಾತನಾಡಿದ್ದೇನೆ. ಹಿಡುವಳಿ ಜಮೀನುಗಳನ್ನು ಪೋಡಿ ಮಾಡುವುದನ್ನು ಅಭಿಯಾನ ರೂಪದಲ್ಲಿ ಮಾಡಬೇಕು. ಈಗ ನಡೆದಿರುವ ವೇಗ ಸಾಲದು. ಸರ್ವೆ ಡಿಜಿಟೈಸ್‌ ಮಾಡುವುದು ಒಂದು ಕಡೆಯಾದರೆ, ಅದಕ್ಕೂ ಮೊದಲು ಆಕಾರ್‌ಬಂಧ್‌ ಡಿಜಿಟೈಸ್‌ ಮಾಡಿ ಅದನ್ನು ತ್ರೀಗೆ ತಂದು
ಪೇಪರ್‌ನಲ್ಲಿ ಸ್ಕೆಚ್‌ ಬರೆಯುವಂತಿಲ್ಲ. ಪೇಪರ್‌ ಬರೆದರೂ ಕ್ಯಾಡ್‌ ಮುಖಾಂತರ ಡಿಜಿಟಲ್‌ ಸ್ಕೆಚ್‌ ಮಾಡಬೇಕು. ಸರ್ವೆಯೇ ಡಿಜಿಟಲ್‌ ಆಗಿಸುವ ಗುರಿ ಇದೆ. ಅಲ್ಲೀವರೆಗೆ ಸರ್ವೆ ಮ್ಯಾನುವಲ್‌ ಮಾಡಿದರೂ ಸ್ಕೆಚ್‌ ಡಿಜಿಟೈಸ್‌ ಆಗಬೇಕು. ಪೇಪರ್‌ ಡ್ರಾಯಿಂಗ್‌ ಮಾಡುವುದನ್ನು ಬಂದ್‌ ಮಾಡಬೇಕು.
ಎಲ್ಲ ಸರ್ವೆ ನಂಬರ್‌ಗೆ ಡಿಜಿಟಲ್‌ ಸ್ಕೆಚ್‌ ಇರಬೇಕು. ಆರ್‌ಟಿಸಿ ಜತೆಗೆ ಇಸಿ, ಸ್ಕೆಚ್‌, ಎಂಆರ್‌ ಮತ್ತು ಆಕಾರ್‌ಬಂಧ್‌ ಕೊಡುವ ವ್ಯವಸ್ಥೆ ಮಾಡಲಾಗುವುದು.
ಅದೇರೀತಿಯಲ್ಲಿ ಆರ್‌ಟಿಸಿಯಲ್ಲಿ ಸರ್ವೆ ಸ್ಕೆಚ್‌ ಬರಬೇಕು. ಡ್ರೋನ್‌ ಇಮೇಜ್‌ ಇದನ್ನು ಎರಡು ಮೂರು ವರ್ಷಗಳಲ್ಲಿ ಮಾಡಲು ಸಾಧ್ಯವಿಲ್ಲ. ಎಷ್ಟು ವರ್ಷ ಆಗುತ್ತದೆಯೋ ಆಗಲಿ ಅದರ ಕಡೆಗೆ ಈಗಿನಿಂದಲೇ ಕೆಲಸ ಮಾಡಬೇಕು. ಇದರಿಂದ ದಾಖಲೆಗಳು ಕ್ಲೀನ್‌ ಅಪ್‌ ಆಗಿ ಜನರು ನೆಮ್ಮದಿಯಿಂದ ಇರುತ್ತಾರೆ. ಅದಕ್ಕೆ ಕೈ ಹಾಕಲು ಈಗಿನ ಕೆಲಸಗಳನ್ನು ತ್ವರಿತವಾಗಿ ಮುಗಿಸಬೇಕು.
ಅದರ ಜತೆಗೆ ಕಂದಾಯ ಗ್ರಾಮದಲ್ಲಿ ಪ್ರಪೋಸಲ್‌ ಕಳಿಸುವುದಿದ್ದರೆ ಮಾರ್ಚ್‌ 16ರೊಳಗೆ ಕಳಿಸಬೇಕು. ಇಲ್ಲವಾದರೆ, ಕಾನೂನು ಅವಧಿ ಮುಗಿಯಲಿದೆ. ಹಿಂದೆ 2 ಸಾವಿರ ಆಗಿದೆ. ನಾವು ಬಂದ ಮೇಲೆ 4 ಸಾವಿರ ಆಗಿದೆ. ಇನ್ನು ಒಂದು ಸಾವಿರ ಬಾಕಿ ಇದೆ. ಗಣತಿ ಮುಗಿದ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಾಗಿ, ಪ್ರಾಥಮಿಕ ಅಧಿಸೂಚನೆ ಈಗ ಆಗಲೇ ಬೇಕು. ಆಗ ಮಾತ್ರ ನಂತರ ಕೈಗೆತ್ತಿಕೊಳ್ಳಬಹುದು. ಇಲ್ಲವಾದರೆ, ಅಲ್ಲಿಗೆ ಮುಗಿಯಲಿದೆ. ಜನರು ಅತಂತ್ರದಲ್ಲೇ ಬದುಕಬೇಕಾಗುತ್ತದೆ ಎಂದರು.
ಕಳೆದ ವರ್ಷದ ಮೇ ನಂತರ ಆಗಿರುವ 1.10 ಲಕ್ಷ ಹಕ್ಕುಪತ್ರಗಳನ್ನು ಕೊಡಲಾಗುತ್ತಿದೆ. ಪೌತಿ ಖಾತೆ ಮಾಡಿಕೊಟ್ಟಿರುವವರನ್ನು ಹಾವೇರಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಬೇಕು. ಬಸ್‌, ಆಹಾರ ವ್ಯವಸ್ಥೆಯನ್ನು ಸರ್ಕಾರವೇ ಮಾಡಲಿದೆ. ಡಿಸಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲು ಸೂಚಿಸಲಾಗಿದೆ ಎಂದರು.