ಅನುಮತಿ ಇಲ್ಲದೇ 102 ಹೆಕ್ಟೇರ್ನಲ್ಲಿ ಸೋಲಾರ್ ಅಳವಡಿಕೆ
ನೀರಾವರಿ ಇಲಾಖೆಯ ಅನುಮತಿ ಇಲ್ಲದೇ ಖಾಸಗಿ ಕಂಪನಿಯೊಂದು 102 ಹೆಕ್ಟೇರ್ನಲ್ಲಿ ಸೋಲಾರ್ ಅಳವಡಿಸಿದ ಹಿನ್ನೆಲೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ 102 ಹೆಕ್ಟೇರ್ ನಲ್ಲಿ ಅಳವಡಿಸಿದ್ದ ಏತ ನೀರಾವರಿ ಪೈಪಲೈನ್ ಯೋಜನೆ ಹಳ್ಳ ಹಿಡಿದಿದೆ. ನೀರು ಪೂರೈಕೆಗೂ ಮುನ್ನವೇ ಅಳವಡಿಸಿದ್ದ ಪೈಪ್ಲೈನ್ ಅನ್ನು ಸೋಲಾರ ಕಂಪನಿಯು ಹೊರತೆಗದ ಕಾರಣದಿಂದ ನೀರಾವರಿ ಇಲಾಖೆಯ 4.62 ಕೋಟಿ ನಷ್ಟವಾಗಿದೆ. ನಷ್ಟುವನ್ನು ಭರಿಸಲು ಕಂಪನಿಗೆ ಪತ್ರ ಬರೆದಿದೆ. ಹಿಗೀದ್ದರೂ ಖಾಸಗಿ ಕಂಪನಿಯೂ ಹಣ ಪಾವತಿಸಲು ಹಿಂದೇಟು ಹಾಕಿದ್ದು, ನೀರಾವರಿ ಇಲಾಖೆ ಕಾನೂನು ಸಮರಕ್ಕೆ ಮುಂದಾಗಿದೆ.
ಮುಂಡರಗಿ ತಾಲೂಕಿನಾದ್ಯಂತ ನೀರು ಹರಿಯದ, ಕೊಳವೆ ಬಾವಿಯಲ್ಲಿ ನೀರು ದೊರೆಯದ ಜಮೀನುಗಳಿಗೆ ನೀರು ಒದಗಿಸಲು ಅಂದಾಜು 480 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ದಶಕದ ಹಿಂದೆ ಸರ್ಕಾರ ಅನುಮತಿ ನೀಡಿತ್ತು. ತಾಲೂಕಿನಾದ್ಯಂತ ಜಮೀನುಗಳಿಗೆ ಪೈಪ್ಲೈನ್ ಅಳವಡಿಸಿ ಹಾಗೂ ಹಣಿ ನೀರಾವರಿ ಮೂಲಕ ತುಂಗಭದ್ರ ನದಿಯಿಂದ ನೀರು ಎತ್ತುವಳಿ ಮಾಡಿ ನೀರು ಪೂರೈಸುವ ಯೋಜನೆ ಇದಾಗಿತ್ತು. ಪ್ರಮುಖವಾಗಿ ಕೃಷಿಯಿಂದ ರೈತರಿಗೆ ಆಥಿರ್ಕ ಸಭಲತೆ ದೊರಕಿಸಿಕೊಡುವ ಉದ್ದೇಶ ಹೊಂದಲಾಗಿದೆ. ಅದರ ಭಾಗವಾಗಿ ಈಗಾಗಲೇ 430 ಕೋಟಿ ವೆಚ್ಚದ ಮೊದಲನೇ ಹಂತದ ಯೋಜನೆ ಮುಕ್ತಾಯಗೊಂಡು ಹಲವಡೆ ಏತ ನೀರವಾರಿ ಮೂಲಕ ನೀರು ಪೂರೈಸಲಾಗುತ್ತಿದೆ. 480 ಕೋಟಿ ವೆಚ್ಚದಲ್ಲಿ ಎರಡನೇ ಹಂತದಲ್ಲಿ ಪೈಪ್ಲೈನ್ ಅಳವಡಿಸುವ ಯೋಜನೆ ಮುಂಡರಗಿ ತಾಲೂಕಿನ ಹಲವಡೆ ನಡೆದಿದೆ. ಈಗ ಅದೇ ಜಾಗದ 102 ಹೆಕ್ಟೇರ್ನಲ್ಲಿ ಖಾಸಗಿ ಸೋಲಾರ್ ಕಂಪನಿಯೊಂದು ಸೋಲಾರ ಅಳವಡಿಸಿದೆ.
ಡಂಬಳ ಹೋಬಳಿ ವ್ಯಾಪ್ತಿಯ 102 ಹೆಕ್ಟೇರ್ ನಲ್ಲಿ ಎರಡನೇ ಹಂತದ ಯೋಜನೆಯಲ್ಲಿ ಕರ್ನಾಟಕ ನೀರವಾರಿ ನಿಗಮ ಪೈಪಲೈನ್ ಅಳವಡಿಸಿದೆ. ಎರಡನೇ ಹಂತದ ಯೋಜನೆ ಮುಕ್ತಾಯಗೊಂಡ ನಂತರ ಪೈಪ್ಲೈನ್ ಮೂಲಕ ನೀರು ಪೂರೈಸುವ ಉದ್ದೇಶ ಹೊಂದಲಾಗಿತ್ತು. ಈ ನಡುವೆ ಖಾಸಗಿ ಸೋಲಾರ್ ಕಂಪನಿಯು ಸೋಲಾರ್ ವಿದ್ಯುತ್ ಉತ್ಪಾದನೆಗೆ ಸ್ಥಳಿಯ ಮಧ್ಯಸ್ಥಿಕೆದಾರರಿಂದ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ 102 ಹೆಕ್ಟೇರ್ ಜಮೀನು ಖರೀದಿಸಿ, ನೀರಾವರಿ ನಿಗಮ ಈಗಾಗಲೇ ಅಳವಡಿಸಿದ್ದ ಪೈಪ್ಲೈನ್ ಕಿತ್ತೆಸೆದು ಸೋಲಾರ್ ಅಳವಡಿಸಿದೆ. ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ಈ ವಿಷಯ ಗಮನಕ್ಕೆ ಬಂದ ನಂತರ ಖಾಸಗಿ ಕಂಪನಿಗೆ ಕಳೆದ ಜನವರಿಯಲ್ಲೇ ಮೊದಲ ಬಾರಿ ನೋಟೀಸ್ ನೀಡಿತ್ತು ಮತ್ತು ಯೋಜನೆಯನ್ನು ತುರ್ತು ಸ್ತಗಿತಗೊಳಿಸುವಂತೆ ಸೂಚಿಸಿತ್ತು. ನೋಟೀಸ್ಗೆ ಖಾಸಗಿ ಕಂಪನಿ ಉತ್ತರಿಸದ ಕಾರಣ ಈ ಭಾಗದಲ್ಲಿ ಅಳವಡಿಸಿದ್ದ ಪೈಪ್ಲೈನ್ ನಷ್ಟಕ್ಕೆ 4.62 ಕೋಟಿ ನಷ್ಟ ಭರಿಸುವಂತೆ ಸೋಲಾರ್ ಕಂಪನಿಗೆ ಪತ್ರ ಬರೆದಿದೆ ಹಾಗೂ. ಜಿಲ್ಲೆಯ ಇತರೆ ಭಾಗದಲ್ಲಿ ಯೋಜನೆ ಆರಂಭಿಸುವ ಮುನ್ನ ನೀರಾವರಿ ಇಲಾಖೆಯನ್ನು ಸಂಪಕಿರ್ಸುವಂತೆ ಸೂಚಿಸಿದೆ. ಈದಾವುದಕ್ಕೂ ಖಾಸಗಿ ಸೋಲಾರ್ ಕಂಪನಿ ಪ್ರತಿಕ್ರಿಯೆ ನೀಡದ ಕಾರಣ ಕರ್ನಾಟಕ ನೀರಾವರಿ ನಿಗಮವು ಖಾಸಗಿ ಕಂಪನಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.
ಮುಂಡರಗಿ ತಾಲೂಕಿನ ಹಲವಡೆ ಪೈಪ್ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇನ್ನೂ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲೇ ಸೋಲಾರ್ ಕಂಪನಿ ಅನುಮತಿ ಇಲ್ಲದೇ ಪೈಪ್ಲೈನ್ ಹೊರತೆಗೆದಿದೆ. ಕಳೆದ ಜನವರಿಯಲ್ಲಿ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಎರಡೂ ಬಾರಿ ನೋಟೀಸ್ ನೀಡಿದ್ದೇವೆ. 102 ಹೆಕ್ಟೇರ್ ನಲ್ಲಿನ 4.62 ಕೋಟಿ ನಷ್ಟ ಭರಿಸುವಂತೆ ಪತ್ರ ಬರೆದರೂ ಈ ವರೆಗೂ ಕಂಪನಿಯವರು ಪ್ರತಿಕ್ರಿಯೆ ನೀಡಿಲ್ಲ. ಕರ್ನಾಟಕ ನೀರಾವರಿ ನಿಗಮದದಿಂದ ಖಾಸಗಿ ಕಂಪನಿ ವಿರುದ್ಧ ದಾವೆ ಹೂಡಲು ತೀರ್ಮಾನಿಸಲಾಗಿದೆ.
ಪ್ರಕಾಶ, ಸಿಂಗಟಾಲೂರು ಏತನೀರಾವರಿ, ಇಇ