ವಿಜಯವಾಣಿ ಸುದ್ದಿಜಾಲ ಗದಗ
ಕೆಎಲ್ ಇ ಸಂಸ್ಥೆಯು ಜನರ ಬದುಕಿನ ಭಾಗವಾಗಿದೆ. ಕೆಎಲ್ ಇ ಸಂಸ್ಥೆಯ ಸೇವೆಗಳು ಅಗಣಿತ. ಹೀಗೆ ಸಂಸ್ಥೆ ಮತ್ತು ಸಮಾಜ ಸಹಕಾರದಿಂದ ಇದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆಎಲ್ ಇ ಸಂಸ್ಥೆಯ ಜೆಟಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕೆಎಲ್ಇ ಸಂಸ್ಥೆ ಸ್ಥಾಪಿಸಿದ ಏಳು ಸಪ್ತ ಋಷಿಗಳಿಗೆ ನಾವು ಋಣಿಗಳಾಗಿ ಇರಬೇಕು. ಈ ಸಂಸ್ಥೆ ಕಟ್ಟಿ ಬೆಳೆಸಲು ಲಕ್ಷಾಂತರ ಜನರು ದೊಡ್ಡ ಕಾಣಿಕೆ ಕೊಟ್ಟಿದ್ದಾರೆ. ಪದ್ಮಶ್ರೀ ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಕೆಎಲ್ ಇ ಸಂಸ್ಥೆ ಬೃಹದಾಕಾರವಾಗಿ ಬೆಳೆದಿದೆ. ಮನುಷ್ಯನಿಗೆ ದೂರದೃಷ್ಟಿ ಇರಬೇಕು. ಅಂತಹ ದೂರದೃಷ್ಟಿ ನಾಯಕರು ಕೆಎಲ್ ಇ ಸಂಸ್ಥೆಯಲ್ಲಿ ಹಲವರಿದ್ದಾರೆ. ಸಮಾಜ ಮತ್ತು ಸಂಸ್ಥೆ ಅನ್ಯೋನ್ಯವಾಗಿ ಇರುವ ಕಾರಣ ಕೆಎಲ್ಇ ಸಂಸ್ಥೆ ವಿಶ್ವದಾದ್ಯಂತ ತನ್ನ ಸೇವೆ ಮುಂದುವರಿಸಿದೆ. ದೇಶದಲ್ಲಿ ಆಯುಷ್ಮಾನ ಕಾಡ ನೀಡುವ ಮೂಲಕ ಜನಸಾಮಾನ್ಯರ ಆರೋಗ್ಯ ಸೇವೆಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಸರ್ಕಾರ ಆರೋಗ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗಿದೆ. ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಎಂ. ಎಂ. ಕವಟಗಿಮಠ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆ ವಿವಿಧ ಜಿಲ್ಲೆಗಳಲ್ಲಿ ಸಂಸ್ಥೆಯ ವತಿಯಿಂದ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದೆ. ಪ್ರತಿ ವರ್ಷ 50 ಉಚಿತ ಶಿಬಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ 1 ಲಕ್ಷಕ್ಕೂ ಅಧಿಕ ಜನರಿಗೆ ಆರೋಗ್ಯ ಸೇವೆ ನೀಡಲಾಗಿದೆ ಎಂದು ಹೇಳಿದರು.
ಸ್ಥಳಿಯ ಸಂಸ್ಥೆ ಸಿಬ್ಬಂದಿಗಳು ಪ್ರತಿ ಮನೆ, ಗ್ರಾಪಂ ಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ. 8 ಸಾವಿರಕ್ಕೂ ಅಧಿಕ ಜನರು ಆರೋಗ್ಯ ಶಿಬಿರದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಕೆಎಲ್ಇ ಸ್ಥಳಿಯ ಸಂಸ್ಥೆ ಸಿಬ್ಬಂದಿಗಳ ಪರಿಶ್ರಮಕ್ಕೆ ಈ ಕಾರ್ಯಕ್ರಮವೇ ಸಾ. ಮಠ ಮಾನ್ಯಗಳಲ್ಲಿ ಶಿಕ್ಷಣ ದಾಸೋಹ ನಡೆದ ಪರಿಣಾಮವೇ ಇಂದಿನ ಯುಗದಲ್ಲಿ ಶಿಕ್ಷಣ ಇಷ್ಟೋಂದು ಬೆಳೆದು ಬರಲು ಸಾಧ್ಯವಾಯಿತು. ಸಂಸ್ಥೆಗೆ ದಾನ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸುತ್ತೇನೆ ಎಂದು ಕವಟಗಿಮಠ ಹೇಳಿದರು.
ತೋಂಟದ ಸಿದ್ಧರಾಮ ಶ್ರೀಗಳು, ಎಸ್.ಪಿ. ಸಂಶಿಮಠ, ಶಂಕ್ರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ, ಎಸ್.ವಿ. ಸಂಕನೂರು, ಮಂಜುನಾಥ ಮುನವಳ್ಳಿ, ರಾಜು ಕುರಡಗಿ, ಎಂ. ಜಿ. ಹಿರೇಮಠ, ಈಶಣ್ಣ ಮುನವಳ್ಳಿ, ಕುಮಾರ ಮಾನ್ವಿ, ಎಸ್.ಎಸ್. ಪಟ್ಟಣಶೆಟ್ಟಿ, ವಿಶ್ವನಾಥ ಪಾಟೀಲ, ಡಾ. ಅಲ್ಲಮಪ್ರಭು ಇತರರು ಇದ್ದರು.
ಬಾಕ್ಸ್:
ಕೆಎಲ್ಇ ಸಂಸ್ಥೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿತ್ತು ಆನ್ಲೈನ್ ನೋಂದಣಿ ಸೇರಿ ಒಟ್ಟು 10 ಸಾವಿರಕ್ಕೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡಿದ್ದರು. ಆರೋಗ್ಯ ತಪಾಸಣೆಗೆ ಒಳಗಾದರು. ಹಲವು ಪ್ರತ್ಯೇಖ ಕೌಂಟರ್ಗಳನ್ನು ತೆರೆಯಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೆಎಲ್ಇ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿತ್ತು.
ಕೋಟ್:
ಗದಗ ನಗರದಲ್ಲಿ ಇದಕ್ಕಿಂತ ಬೃಹತ್ ಆದ ಆರೋಗ್ಯ ಶಿಬಿರವನ್ನು ಎಂದಿಗೂ ನೋಡಿಲ್ಲ. ಯಾವುದೇ ವೆಚ್ಚ ವಿಲ್ಲದೇ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಕಾಣಿಸಿಕೊಳ್ಳು ರೋಗಳಿಗೆ ಸ್ಥಳದಲ್ಲೇ ಔಷದ ನೀಡುತ್ತಿದ್ದಾರೆ. ಕೆಎಲ್ಇ ಸಂಸ್ಥೆಗೆ ಧನ್ಯವಾದಗಳು.
ಮೇಘಾ ಮುದಗಲ್ಲ, ಸ್ಥಳಿಯ ನಿವಾಸಿ.
ಕೋಟ್:
ನಮ್ಮ ಸಂಸ್ಥೆಯಿಂದ ಉತ್ತಮ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಈ ಬೃಹತ್ ಶಿಬಿರಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಿಬಿರದಲ್ಲಿ ತಪಾಸಣೆಗೆ ಆಗಮಿಸುವ ಜನರಿಗೆ ಯಾವುದೇ ಗೊಂದಲ ಮತ್ತು ಸಮಸ್ಯೆ ಆಗದಂತೆ ಅಚ್ಚಕಟ್ಟಾಗಿ ಇಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಚಿಕಿತ್ಸೆಗೆ ಅಗತ್ಯ ಇದ್ದವರನ್ನು ಬೆಳಗಾವಿ ಕೆಎಲ್ಇಗೆ ಶಿಾರಸ್ಸು ಮಾಡಲಾಗುತ್ತಿದೆ.
ರಾಜೇಶ್ವರಿ ರಾಜೂರು, ಕೆಎಲ್ಇ ಸಿಬ್ಬಂದಿ
ಕೋಟ್
ಬೆಳಗ್ಗೆ 10 ಗಂಟೆಗೆ ಶಿಬಿರಕ್ಕೆ ಬಂದಿದ್ದೇವು. ಸಾವಿರಾರು ಜನರು ಇದ್ದರೂ ಸಹ ಇಲ್ಲಿನ ಸಿಬ್ಬಂದಿ ಸರಿಯಾದ ಮಾರ್ಗದರ್ಶನ ಮಾಡಿದ್ದರಿಂದ ತಪಾಸಣೆಗೆ ಒಳಗಾದೆ. ವೈದ್ಯರೂ ಔಷಧವನ್ನು ನೀಡಿದರು.
ಬಸಪ್ಪ ಬನ್ನಿಮರದ, ವೆಂಕಟಾಪೂರ