ಗದಗ ಕೆ.ಎಲ್​.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಪ್ರೊ. ವಿಶಾಲ ತೆಳಗಡೆ, ಡಾ. ವೀಣಾ, ದೀಪಾ ಬಾಚನಹಳ್ಳಿ ಸೇರಿದಂತೆ ಉಪನ್ಯಾಸಕರು, ವಿದ್ಯಾಥಿರ್ಗಳು ಇದ್ದರು.  
ರಾಜ್ಯ

ಹಿಂಸೆ ಮತ್ತು ದ್ವೇಷಗಳಾಚೆ ರವೀಂದ್ರನಾಥ ಠಾಗೋರರ ತತ್ವವಿದೆ: ಡಾ. ಸಂಧ್ಯಾ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಟಾಗೋರ್​ ಅವರ ದೃಷ್ಟಿಯಲ್ಲಿ ಸ್ವರಾಜ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಅದು ವ್ಯಕ್ತಿಯ ಆಂತರಿಕ ಸ್ವಾತಂತ್ರ್ಯ. ಆತ್ಮಶಕ್ತಿ ಮತ್ತು ನೈತಿಕ ಬೆಳವಣಿಗೆಯ ಸಂಕೇತವೆಂದು ಪಿ. ಸಿ. ಜಾಬಿನ್​ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಧ್ಯಾ ತಿಳಿಸಿದರು.
ನಗರದ ಕೆ.ಎಲ್​.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರವೀಂದ್ರನಾಥ ಠಾಗೋರ ಅವರ ಸ್ವರಾಜ್ಯ ಪರಿಕಲ್ಪನೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಸ್ವರಾಜ್​ ಎಂದರೆ ಇತರ ರಾಷ್ಟ್ರಗಳ ವಿರುದ್ಧ ದ್ವೇಷ ಬೆಳೆಸುವುದಲ್ಲ. ಅದು ಮಾನವೀಯತೆ, ಸಹಬಾಳ್ವೆ ಮತ್ತು ವಿಶ್ವಸೌಹಾರ್ದತೆಯನ್ನು ಒತ್ತಿ ಹೇಳುವ ಪರಿಕಲ್ಪನೆ. ಸ್ವರಾಜ್​ ಕೇವಲ ಶಕ್ತಿ ಅಲ್ಲ. ನಮ್ಮ ಮನಸ್ಸು, ಚಿಂತನೆ ಮತ್ತು ಜೀವನಮೌಲ್ಯಗಳು ಸ್ವತಂತ್ರವಾಗಬೇಕು. ದೇಶದ ಪ್ರಗತಿ ಜನರ ಒಳಗಿನ ಶಕ್ತಿಯನ್ನು ಜಾಗೃತಗೊಳಿಸುವುದರಲ್ಲಿದೆ ಎಂದು ಅವರು ನಂಬಿದ್ದರು ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಭೀಮಸೇನ ಮಾತನಾಡಿ ಸ್ವರಾಜ ಮತ್ತು ಸ್ವಾತಂತ್ರ್ಯ ಕುರಿತು ಇರುವ ವಿಶಿಷ್ಠ ನಿಲುವುಗಳನ್ನು ವಿವರಿಸಿದರು. ಟಾಗೋರ್​ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದ್ದರು. ಆ ಕಾಲದಲ್ಲಿ ನಡೆದ ಮುಖ್ಯ ಸ್ವರೂಪದ ಸ್ವರಾಜ್​ ಚಳವಳಿಯ ಕೆಲ ಅಂಶಗಳನ್ನು ವಿಮರ್ಶಾತ್ಮಕ ಠಾಗೋರ ನೋಡಿದ್ದರು. ಟಾಗೋರ್​ ಅವರ ಅಭಿಪ್ರಾಯದಲ್ಲಿ ಸ್ವರಾಜ್​ ಚಳವಳಿಯಲ್ಲಿ ಕೆಲವೊಮ್ಮೆ ಕೇವಲ ಸೀಮಿತ ರಾಷ್ಟ್ರವಾದದ ದೃಷ್ಟಿಕೋನ ಬೆಳೆಯುವ ಅಪಾಯವಿತ್ತು. ಅತಿಯಾದ ರಾಷ್ಟ್ರಭಾವನೆ ಕೆಲವೊಮ್ಮೆ ಹಿಂಸೆಗೆ ದಾರಿ ಮಾಡಿಕೊಡಬಹುದು ಎಂಬ ಆತಂಕವನ್ನು ಠಾಗೋರ ವ್ಯಕ್ತಪಡಿಸಿದ್ದರು. ದೇಶಪ್ರೇಮ ಮಾನವೀಯ ಮೌಲ್ಯಗಳನ್ನು ಮೀರಬಾರದು. ಇತರ ರಾಷ್ಟ್ರಗಳ ವಿರುದ್ಧ ದ್ವೇಷ ಹುಟ್ಟಿಸುವ ರೀತಿಯ ರಾಷ್ಟ್ರವಾದ ಸ್ವರಾಜ್​ನ ನಿಜವಾದ ಆತ್ಮಕ್ಕೆ ವಿರುದ್ಧವೆಂದು ಅವರು ನಂಬಿದ್ದರು. ಇದಲ್ಲದೆ, ಪಾಶ್ಚಾತ್ಯ ವೈಜ್ಞಾನಿಕ ಚಿಂತನೆ ಮತ್ತು ತಾಕಿರ್ಕತೆಯನ್ನು ಸಂರ್ಪೂಣವಾಗಿ ತಳ್ಳಿಹಾಕುವ ಮನೋಭಾವವನ್ನೂ ಟಾಗೋರ್​ ಒಪ್ಪಿರಲಿಲ್ಲ. ಅವರ ದೃಷ್ಟಿಯಲ್ಲಿ, ಭಾರತ ತನ್ನ ಸಾಂಸತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು, ಆದರೆ ವಿಶ್ವದ ಉತ್ತಮ ವಿಚಾರಗಳನ್ನು ಸ್ವೀಕರಿಸುವ ಮನಸ್ಸು ಇರಬೇಕು. ಪಾಶ್ಚಾತ್ಯ ಜ್ಞಾನವನ್ನು ವಿರೋಧಿಸುವುದಕ್ಕಿಂತ, ಅದನ್ನು ಸಮತೋಲನದಿಂದ ಅಳವಡಿಸಿಕೊಳ್ಳುವುದೇ ಪ್ರಗತಿಯ ಮಾರ್ಗವೆಂದು ಠಾಗೋರ ಪ್ರತೊಪಾದಿಸಿದ್ದರು ಎಂದು ಡಾ. ಭಿಮಸೇನ್​ ಹೇಳಿದರು.
ಟಾಗೋರ್​ ಅವರು ರಾಜಕೀಯ ಅಶಾಂತಿಯ ಬದಲು ಸ್ವದೇಶಿ ಮತ್ತು ಸಾಂಸತಿಕ ಪುನರುತ್ಥಾನವನ್ನು ಹೆಚ್ಚು ಮಹತ್ವ ನೀಡಿದ್ದರು. ಸ್ವದೇಶಿ ಎಂದರೆ ಕೇವಲ ದೇಶೀಯ ವಸ್ತುಗಳನ್ನು ಬಳಸುವುದಲ್ಲ. ಅದು ಆತ್ಮನಿರ್ಭರತೆ, ಸ್ವಾಭಿಮಾನ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಮಾರ್ಗವಾಗಿದೆ. ನಿಜವಾದ ಸ್ವಾತಂತ್ರ್ಯ ಎಂದರೆ ಅಜ್ಞಾನ, ಸಾಮಾಜಿಕ ಅಸಮಾನತೆ ಮತ್ತು ದಾರಿದ್ರ್ಯದಿಂದ ಮುಕ್ತಿ ಪಡೆಯುವುದು. ರಾಜಕೀಯ ಸ್ವಾತಂತ್ರ್ಯ ಮಾತ್ರ ಸಾಕಾಗುವುದಿಲ್ಲ. ವ್ಯಕ್ತಿಯ ಆಂತರಿಕ ಬೆಳವಣಿಗೆ ಮತ್ತು ಸಮಾಜದ ಸಮಗ್ರ ಅಭಿವೃದ್ಧಿಯೇ ನಿಜವಾದ ಸ್ವರಾಜ ಎಂಬುದು ಠಾಗೋರ ಅವರ ಪ್ರತಿಪಾದನೆ ಆಗಿತ್ತು ಎಂದು ಭಿಮಸೇನ ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಪ್ರೊ. ವಿಶಾಲ ತೆಳಗಡೆ, ಡಾ. ವೀಣಾ, ದೀಪಾ ಬಾಚನಹಳ್ಳಿ ಸೇರಿದಂತೆ ಉಪನ್ಯಾಸಕರು, ವಿದ್ಯಾಥಿರ್ಗಳು ಇದ್ದರು.