ಕೆಎಲ್​ಇ ಸಂಸ್ಥಾಪನಾ ದಿನಾಚರಣೆ ನಿಮಿತ್ಯ ಕೆಎಲ್​ಇ ಸಂಸ್ಥೆಯಲ್ಲಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಪ್ರೊ. ಪಿ.ಜಿ. ಪಾಟೀಲ, ಪ್ರೊ. ಹಾವೇರಿ, ಪ್ರೊ. ಚಿನಗೌಂಡಿ, ಪ್ರೊ. ಬಿಂದುಶ್ರೀ ಹಂದ್ರಾಳ ಇತರರು ಇದ್ದರು. 
ರಾಜ್ಯ

ಕೆಎಲ್​ಇ ಸಂಸ್ಥಾಪನಾ ದಿನಾಚರಣೆ! ಬೀದಿ ನಾಟಕ ಪ್ರದರ್ಶನ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಕೆಎಲ್​ಇ ಸಂಸ್ಥೆಯ ಜೆ.ಟಿ. ಕಾಲೇಜಿನ ಬಿಬಿಎ ವಿಭಾಗದ ವತಿಯಿಂದ ಬುಧವಾರ ಕೆಎಲ್​ಇ ಸಂಸ್ಥೆಯ 110ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ಯ ಬೀದಿ ನಾಟಕ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಪ್ರೊ. ಪಿ. ಜಿ. ಪಾಟೀಲ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಬದ್ಧತೆಗೆ ಮತ್ತು ಉತ್ತಮ ಶಿಕ್ಷಣಕ್ಕೆ ಕೆಎಲ್​ಇ ಸಂಸ್ಥೆ ಹೆಸರಾಗಿದೆ. ವಿಶ್ವದಾದ್ಯಂತ ಸಂಸ್ಥೆಯ ವಿದ್ಯಾಥಿರ್ಗಳು ಉನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಮಹಿಳಾ ಸಬಲೀಕರಣ, ಮಹಿಳೆ ಮೇಲಿನ ಹಲ್ಲೆ, ಸ್ವಚ್ಛ ಭಾರತ, ಡ್ರಗ್ಸ್​ ನಿರ್ಮೂಲನೆ, ಯುವಶಕ್ತಿ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಮುಂತಾದ ಸಾಮಾಜಿಕ ವಿಷಯಗಳ ಮೇಲೆ ನಾಟಕಗಳನ್ನು ಪ್ರದಶಿರ್ಸಲಾಯಿತು. ಒಟ್ಟು ಎಂಟು ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಪ್ರೊ. ಹಾವೇರಿ, ಪ್ರೊ. ಚಿನಗೌಂಡಿ, ಪ್ರೊ. ಬಿಂದುಶ್ರೀ ಹಂದ್ರಾಳ ಇತರರು ಇದ್ದರು.