ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜೆ.ಪಿ. ಶಿಣ ಮಹಾವಿದ್ಯಾಲಯದಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಳವಂಡಿ ಶಿವಮೂತಿರ್ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು. ಅನ್ನದಾನಿ ಹಿರೇಮಠ, ವಿವೇಕಾನಂದಗೌಡ ಪಾಟೀಲ, ವಿ.ಆರ್. ಕಟ್ಟಿಮನಿ ಹಿರೇಮಠ, ಡಾ. ಬಿ. ಬಿ. ಹೊಳಗುಂದಿ ಇತರರು ಇದ್ದರು.
ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ, ಹೈದರಾಬಾದ ಕರ್ನಾಟಕ ವಿಮೋಚನಾ ಚಳವಳಿಯ ನೇತಾರರಾಗಿ ಕನ್ನಡ ನಾಡು ನುಡಿಗೆ ತಮ್ಮನ್ನೇ ಸರ್ಮಪಿಸಿಕೊಂಡವರು ಅಳವಂಡಿ ಶಿವಮೂತಿರ್ ಶ್ರೀಗಳು. ಅವರ ಹೋರಾಟದ ಲವಾಗಿ ಹೈದ್ರಾಬಾದ ಕರ್ನಾಟಕದ ಅನೇಕ ಪ್ರದೇಶಗಳು ಕನ್ನಡ ನಾಡಿಗೆ ಬರಲು ಸಾಧ್ಯವಾಯಿತು ಎಂದು ಅನ್ನದಾನಿ ಹಿರೇಮಠ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಂಚಾಚಾರ್ಯ ಶಿಣ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ವೇದಮೂತಿರ್ ಅಳವಂಡಿ ಶಿವಮೂತಿರ್ಸ್ವಾಮಿಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಚಳವಳಿ ಮತ್ತು ಅಳವಂಡಿ ಶಿವಮೂತಿರ್ ಸ್ವಾಮಿಗಳುಎಂಬ ವಿಷಯವಾಗಿ ಮಾತನಾಡಿದ ಅವರು, ಭಾಷಾವಾರು ಪ್ರಾಂತ ರಚನೆ ಸಂದರ್ಭದಲ್ಲಿ ಬಳ್ಳಾರಿ ಪರಿಸರದ ಅನೇಕ ಪ್ರದೇಶಗಳು ಆಂಧ್ರಕ್ಕೆ ಸೇರಿಸುವ ಪ್ರಸ್ತಾಪದ ವಿರುದ್ಧ ತೀವ್ರ ಹೋರಾಟ ಮಾಡಿದ್ದರ ಪರಿಣಾಮದಿಂದ ಇಂದು ತುಂಗಭದ್ರಾ ಆಣೆಕಟ್ಟನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಮುಂಡರಗಿಯಲ್ಲಿ ಸ್ವಯಂಸೇವಕ ಸತ್ಯಾಗ್ರಹ ಶಿಬಿರ ಸಂಟಿಸಿ ರಜಾಕರಿಗೆ ಸಿಂಹಸ್ವಪ್ನರಾದರು. ಶಿಣದ ಮಹತ್ವವನ್ನರಿತು ಅನೇಕ ಶಿಣ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡ ನಾಡಿನ ಉನ್ನತಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ ಶಿವಮೂತಿರ್ ಸ್ವಾಮಿಗಳು ಬದುಕಿನುದ್ದಕ್ಕೂ ರಾಜ್ಯ ಹಾಗೂ ರಾಷ್ಟ್ರದ ಸಮಸ್ಯೆಗಳನ್ನು ತಮ್ಮ ಸಮರ್ಥ ವಾಕ್ಪಟುತ್ವದಿಂದ ಪರಿಣಾಮಕಾರಿಯಾಗಿ ಪ್ರತಿಪಾದಿಸಿ ಸರ್ಕಾರದ ಗಮನಸೆಳೆದ ತತ್ವನಿಷ್ಠ ರಾಜಕಾರಣಿಯಾಗಿದ್ದರು. ಇಂದು ಅನೇಕ ಸಮಸ್ಯೆಗಳನ್ನು ನಮ್ಮನ್ನು ಬಾಧಿಸುತ್ತಲಿವೆ. ಇವುಗಳಿಗೆ ಹೋರಾಟದ ಮೂಲಕ ಪರಿಹಾರವನ್ನು ಕಂಡಕೊಳ್ಳಬೇಕಾಗಿದೆ. ಇದಕ್ಕೆ ಅಳವಂಡಿ ಶಿವಮೂತಿರ್ಸ್ವಾಮಿಗಳು ನಮ್ಮಗೆಲ್ಲ ಆದರ್ಶ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಬಿ.ಬಿ.ಹೊಳಗುಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ವೆಂಕಟೇಶಯ್ಯ, ವಿ.ಆರ್. ಕಟ್ಟಿಮನಿ ಹಿರೇಮಠ, ಕಿಶೋರಬಾಬು ನಾಗರಕಟ್ಟಿ, ಡಿ. ಎಸ್. ಬಾಪುರಿ, ಸಂತೋಷ ವಡ್ಡಟ್ಟಿ, ಡಾ. ಎಂ. ಎಸ್. ಶಿರೋಳ, ಡಾ. ಶಿಲ್ಪಾ ಹಿರೇಕೇರೂರ, ಡಾ. ಬಸವರಾಜ ಎಂ.ಎಚ್., ಡಾ. ಎಸ್. ಎಂ. ರಾಯನಗೌಡರ ಇತರರು ಇದ್ದರು.