ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ದತ್ತಿ ಉಪನ್ಯಾಸದಲ್ಲಿ ಸಿದ್ಧರಾಮ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ವಿವೇಕಾನಂದಗೌಡ ಪಾಟೀಲ, ಸಿದ್ದು ಯಾಪಲಪವಿರ್, ಭಾರತಿ ಕೋಟಿ ಹಲವರಿದ್ದರು. 
ರಾಜ್ಯ

ಕಸಾಪ: ಡಾ. ಶಾಂತರಸ ಸ್ಮರಣಾರ್ಥ ದತ್ತಿ ಉಪನ್ಯಾಸ

ಶಿವಾನಂದ ಹಿರೇಮಠ
ಗಜಲ್​ ಸಾಹಿತ್ಯಕ್ಕೆ ರಹದಾರಿ ನಿಮಿರ್ಸಿದ ಶಾಂತರಸರು: ಸಿದ್ಧರಾಮ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಶಾಂತರಸರು ಎಲ್ಲ ಸಾಹಿತ್ಯ ಪಂಥದ ಜೊತೆಗೆ ಒಡನಾಟ ಹೊಂದಿದ್ದರೂ ಯಾವುದಕ್ಕೂ ಕಟ್ಟು ಬೀಳದೇ ಪ್ರಚಲಿತ ಸಂಗತಿಗಳಿಗೆ ತಮ್ಮ ಬರಹವನ್ನು ಮುಖಾಮುಖಿ ಆಗಿಸಿದರು. ಶಾಂತರಸರು ನಮ್ಮದಲ್ಲದ ಗಜಲ್​ ಪ್ರಕಾರವನ್ನು ಅದರ ಮೂಲ ಗುಣಧರ್ಮಗಳಿಗೆ ಎರವಾಗದ ಭಾವದಲ್ಲಿ ಕನ್ನಡದಲ್ಲಿ ಬೇರೂರಿ ಬೆಳಸಿ ಗಜಲ್​ ಗಾರುಡಿಗ ಎಂದು ಪ್ರಸಿದ್ಧಿ ಪಡೆದರು. ಗಜಲ್​ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವ ಪಡೆಗೆ ರಹದಾರಿಯನ್ನು ನಿಮಿರ್ಸಿಕೊಟ್ಟಿದ್ದಾರೆ ಎಂದು ಸಾಹಿತಿ ಸಿದ್ಧರಾಮ ಹಿರೇಮಠ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಸಾಪ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಡಾ. ಶಾಂತರಸ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಶರಣರ, ಸಂತರ ಕುರಿತು ಸುಪ್ರಭಾತಗಳನ್ನು ರಚಿಸಿದ್ದಾರೆ. ಕತೆ ಕಾದಂಬರಿಗಳ ಮೂಲಕ ಸಂಕಟಗಳಿಗೆ ದನಿಯಾಗಿದ್ದಾರೆ. ಹೈದ್ರಾಬಾದ್​ ಕರ್ನಾಟಕದ ಗಟ್ಟಿಧ್ವನಿಯಾಗಿ ಅಸಮಾನತೆಯ ವಿರುದ್ಧ ಹೋರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಾಂತರಸರು ಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ ೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಾಂತರಸರನ್ನು ಗಜಲ್​ ಗಾರುಡಿಗ ಎಂದು ಕರೆಯಲಾಗುತ್ತಿದೆ. ಹೈದ್ರಾಬಾದ ಕರ್ನಾಟಕದ ಅಸಮಾನತೆ, ಸ್ತ್ರೀ ಶೋಷಣೆಯನ್ನು ಕತೆ, ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ. ಗಜಲ್​ ಕಾವ್ಯ ಪ್ರಕಾರವನ್ನು ಕನ್ನಡಕ್ಕೆ ಕಸಿ ಮಾಡಿ ಹುಲುಸಾಗಿ ಬೆಳೆಯವಂತೆ ಮಾಡಿದ್ದಾರೆ ಎಂದರು.
ಭಾರತಿ ಮೋಹನ ಕೋಟಿ ಅವರು ಮಾತನಾಡಿ, ಗದುಗಿನಲ್ಲಿ ಶಾಂತರಸರು ಕಳೆದ ದಿನಗಳನ್ನು ಸ್ಮರಿಸಿದರು. ಮನೆ ಮನಗಳಲ್ಲಿ ಸಾಹಿತ್ಯದೊಲವನ್ನು ಬೆಳೆಸುವ ಹಿನ್ನೆಲೆಯಲ್ಲಿ ಮಹತ್ವದ ಪಾತ್ರವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಸಿದ್ಧರಾಮ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಡಾ. ದತ್ತಪ್ರಸನ್ನ ಪಾಟೀಲ, ರಾಹುಲ ಗಿಡ್ನಂದಿ, ಸತೀಶಕುಮಾರ ಚನ್ನಪ್ಪಗೌಡರ ವಂದಿಸಿದರು. ಕೆ.ಎಚ್​.ಬೇಲೂರ, ಅನ್ನದಾನಿ ಹಿರೇಮಠ, ರತ್ನಕ್ಕ ಪಾಟೀಲ, ರಶ್ಮಿ ಅಂಗಡಿ, ಶ್ವೇತಾ ಪಾಟೀಲ, ಡಿ.ಎಸ್​.ಬಾಪುರಿ, ಸಿದ್ದು ಯಾಪಲಪವಿರ್, ಡಾ. ಶಿವಪ್ಪ ಕುರಿ, ಡಾ. ಜಿ. ಬಿ. ಪಾಟೀಲ, ಸಿದ್ದಲಿಂಗೇಶ ಸಜ್ಜನಶೆಟ್ಟರ ಇತರರು ಇದ್ದರು