ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಸಿರಸಂಗಿ ಲಿಂಗರಾಜರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾವಚಿತ್ರ ಪುಷ್ಪ ನಮನ ಸಲ್ಲಿಸಲಾಯಿತು. ವಿವೇಕಾನಂದಗೌಡ ಪಾಟೀಲ, ವಿ.ಕೆ.ದ್ಯಾಮನಗೌಡ್ರ, ಶಿವಕುಮಾರಗೌಡ ಪಾಟೀಲ ಇತರರು ಇದ್ದರು.
ಸಮಾಜಕ್ಕೆ ಸರ್ಮಪಿತ ಬದುಕು ಅಜರಾಮರ: ವಿ. ಕೆ. ದ್ಯಾಮನಗೌಡ್ರ
ಗದಗ: ಸಂಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಸಮುದಾಯದ ಶಿಣ, ಧರ್ಮ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ದಾನ ಮಾಡಿ ಭಾರತೀಯ ಸಂಸ್ಥಾನಿಕ ಆಡಳಿತಗಾರರಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದವರು ಸಿರಸಂಗಿ ಲಿಂಗರಾಜರು ಎಂದು ಮುಳಗುಂದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ. ಕೆ. ದ್ಯಾಮನಗೌಡ್ರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಕಸಾಪ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಸಿರಸಂಗಿ ಲಿಂಗರಾಜರ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಸಂಕಟಗಳಿಗೆ ದನಿಯಾಗಿ ಸರ್ವಾಂಗ ಸುಂದರ ಸಮಾಜದ ನಿರ್ಮಾಣಕ್ಕೆ ಲಿಂಗರಾಜರು ಶ್ರಮಿಸಿದರು. ಸಮಾಜಕ್ಕೆ ತಮ್ಮ ಬದುಕನ್ನು ಸರ್ಮಪಿಸಿ ಅಜರಾಮರಾಗಿದ್ದಾರೆ. ಎಲ್ಲ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಸಂ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚಿ ಸಮಾಜದ ಉನ್ನತಿಗೆ ಪ್ರಯತ್ನಿಸಿದರು. ಇವರ ಸಾಮಾಜಿಕ ಚಿಂತನೆಗಳು ಬ್ರಿಟಿಷ ಅಧಿಕಾರಿಗಳನ್ನು ಸೆಳೆದಿತ್ತು. ಕೃಷಿ, ಕೆರೆ ಅಭಿವೃದ್ಧಿ, ಶಿಣಕ್ಕೆ ಪ್ರೋತ್ಸಾಹ, ಧಾಮಿರ್ಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು.
ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಲಿಂಗರಾಜರ ತ್ಯಾಗ ಜೀವನ ಮಾದರಿಯಾಗಿದೆ. ಅನೇಕ ಸಂಕಷ್ಠಗಳ ಸುಳಿಯಲ್ಲಿ ಸಿಲುಕಿದರೂ ಸಮಾಜದ ಕುರಿತು ಸದಾ ಚಿಂತಿಸಿದರು. ಅವರ ದೂರದೃಷ್ಠಿಯ ಲವಾಗಿ ಈ ಭಾಗದ ಜನ ಶಿಣವಂತರಾಗಲು ಸಾಧ್ಯವಾಯಿತು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ ಭಾರತವನ್ನು ಅನೇಕ ರಾಜ ಮನೆತನಗಳು, ಸಂಸ್ಥಾನಗಳು ಆಳ್ವಿಕೆಯನ್ನು ಮಾಡಿವೆ. ರಾಜ ವೈಭವವನ್ನು ಬದಿಗೊತ್ತಿ ಜನಪರ ಆಡಳಿತ ಮಾಡಿದ ವ್ಯಕ್ತಿಗಳು ಮಾತ್ರ ಸದಾ ಸ್ಮರಣೀಯರಾಗಿದ್ದಾರೆ. ಅರಮನೆಗಳು, ಕೋಟೆ ಕೊತ್ತಲು ಅಳಿದರೂ ಮಾಡಿದ ಜನಪರ ಕೆಲಸದ ಕುರುಹುಗಳು ಸದಾ ಜೀವಂತವಾಗಿವೆ. ನವಲಗುಂದ ಸಿರಸಂಗಿ ಟ್ರಸ್ಟ್ ಸ್ಥಾಪಿಸಿ ಸಾವಿರಾರು ವಿದ್ಯಾಥಿರ್ಗಳ ಬದುಕಿಗೆ ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಸೌಮ್ಯ ಕಡ್ಡಿಯವರ, ರಾಹುಲ ಗಿಡ್ನಂದಿ, ಸತೀಶ ಚನ್ನಪ್ಪಗೌಡ್ರ, ಜೆ. ಎ. ಪಾಟೀಲ, ಕೆ. ಎಚ್. ಬೇಲೂರ, ರಾಜಶೇಖರ ದಾನರಡ್ಡಿ, ವಿದ್ಯಾಧರ ದೊಡ್ಡಮನಿ, ಡಾ. ರಶ್ಮಿ ಅಂಗಡಿ, ರತ್ನಾ ಪುರಂತರ, ಸುರೇಶ ಕುಂಬಾರ, ಬಿ. ಬಿ. ಹೊಳಗುಂದಿ, ಅಮರೇಶ ರಾಂಪೂರ, ರತ್ನಕ್ಕ ಪಾಟೀಲ, ಜೆ. ಎ. ಪಾಟೀಲ, ಎಂ. ಎಸ್. ಕಾಮನಹಳ್ಳಿ, ಈರನಗೌಡ ಮಣಕವಾಡ, ಎಸ್. ಡಿ. ಹೊನ್ನಪ್ಪನವರ, ಶೈಲಜಾ ಗಿಡ್ನಂದಿ, ಎಂ. ಎ್. ಡೋಣಿ, ಯಲ್ಲಪ್ಪ ವಸ್ತ್ರದ, ರವಿ ದೇವರಡ್ಡಿ, ಕೆ. ಎಸ್. ಬಾಳಿಕಾಯಿ, ನಾಗಪ್ಪ ಸುರಳಿಕೇರಿ ಇತರರು ಇದ್ದರು.