ಏಜೆನ್ಸಿ ಮತ್ತು ಕಾಮಿರ್ಕ ಕಲ್ಯಾಣ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದ ಕೋಟ್ಯಂತರ ರೂ. ವೆಚ್ಚ ಭರಿಸಿ ಸರ್ಕಾರ ಖರೀದಿಸಿದ ಕಾರ್ಮಿಕ ಕಿಟ್ ಗಳು ಜಿಲ್ಲೆಯಲ್ಲಿ ಕೊಳೆಯುತ್ತ ಬಿದ್ದಿವೆ. ಜಿಲ್ಲೆಗೆ ಕಳೆದ 2 ತಿಂಗಳ ಹಿಂದೆ 3000 ಕಾಮಿರ್ಕ ರಕ್ಷಣಾ ಕಿಟ್ಗಳು ಏಜೆನ್ಸಿ ಮೂಲಕ ರವಾನೆ ಆಗಿವೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಕಿಟ್ಗಳು ವಿತರಣೆ ಆಗಿದ್ದು, ಜಿಲ್ಲೆಯಲ್ಲಿ ಮಾತ್ರ ಕಾಮಿರ್ಕರಿಗೆ ಕಿಟ್ ಭಾಗ್ಯ ದೊರೆತಿಲ್ಲ. ಈ ನಡುವೆ ಏಜೆನ್ಸಿ ಖರೀದಿಸಿರುವ ಕಿಟ್ಗಳು ಕೂಡ ಕಳಪೆ ಗುಣ್ಣಮಟ್ಟದ್ದಿವೆ ಎಂದು ಆರೋಪ ಕೇಳಿ ಬಂದಿದೆ. ಕಾಮಿರ್ಕರು ಇಲಾಖೆಗೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ.
ಕಾಮಿರ್ಕ ಕಲ್ಯಾಣ ಮಂಡಳಿಯು ಖಾಸಗಿ ಏಜೆನ್ಸಿಗೆ ಟೆಂಡರ್ ನೀಡುವ ಮೂಲಕ ಕಿಟ್ ವಿತರಣೆಗೆ ಆದೇಶಿಸಲಾಗಿದೆ. ಖಾಸಗಿ ಏಜೆನ್ಸಿಯವರು ಎಲ್ಲ ಜಿಲ್ಲೆಗಳಿಗೆ ಕಳೆದ ಎರಡು ತಿಂಗಳ ಹಿಂದೆ ಕಾಮಿರ್ಕರ ರಕ್ಷಣಾ ಕಿಟ್ಗಳನ್ನು ರವಾನಿಸಿದ್ದಾರೆ. ವೆಲ್ಡಿಂಗ್, ಎಲೆಕ್ಟ್ರಿಸಿಯನ್, ಪೇಂಟರ್ ಸೇರಿದಂತೆ ಇತರೆ ಕಾಮಿರ್ಕ ಕಾರ್ಡ ಹೊಂದಿರುವರಿಗೆ ಕಿಟ್ ಸಂಗ್ರಹಿಸಲಾಗಿದೆ. ಕಿಟ್ ವಿತರಣೆಗೆಮದೇ ಹೊಸದಾಗಿ ಕಚೇರಿಯನ್ನು ಜಿಲ್ಲೆಯಲ್ಲಿ ಆರಂಭಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ ಒಟ್ಟಾರೆ 3.53 ಕೋಟಿ ವೆಚ್ಚದಲ್ಲಿ ಅಂದಾಜು 7 ಸಾವಿರ ಕಿಟ್ ಪೂರೈಕೆಗೆ ಅನುಮತಿ ನೀಡಲಾಗಿದ್ದು, ಈ ವರೆಗೆ 3000 ಕಿಟ್ ಸಂಗ್ರಹ ಇದೆ. ಆದರೆ, ಕಿಟ್ ವಿತರಣೆಗೆ ಅರ್ಹ ಕಾಮಿರ್ಕರ ಪಟ್ಟಿ ನೀಡಿ ಎಂದು ಏಜೆನ್ಸಿ ಸಿಬ್ಬಂದಿಗಳು ಜಿಲ್ಲಾ ಕಾಮಿರ್ಕ ಇಲಾಖೆಗೆ ದಿನನಿತ್ಯ ಮನವಿ ಮಾಡುತ್ತಿದ್ದು, ಈ ವರೆಗೂ ಅರ್ಹ ಕಾಮಿರ್ಕರ ಪಟ್ಟಿ ನೀಡಲು ಜಿಲ್ಲಾ ಕಾಮಿರ್ಕ ಇಲಾಖೆ ಹಿಂದೇಟು ಇಟ್ಟಿದೆ. ಹೀಗಾಗಿ ಕಿಟ್ ಯಾರಿಗೆ ವಿತರಿಸಬೇಕು ಎಂಬ ಗೊಂದಲದಲ್ಲಿ ಇರುವ ಏಜೆನ್ಸಿ ಸಿಬ್ಬಂದಿ ಕಿಟ್ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.
ಈಗಾಗಲೇ ಹಲವು ಬಾರಿ ಜಿಲ್ಲಾ ಕಾಮಿರ್ಕ ಇಲಾಖೆ ಅಧಿಕಾರಿಗಳಿ ಅರ್ಹ ಕಾಮಿರ್ಕರ ಪಟ್ಟಿ ನೀಡಲು ಮನವಿ ಮಾಡಿದ್ದೇವೆ. ಕಳೆದ ಬಾರಿ ಕಿಟ್ ಪಡೆದವರು ಈ ಬಾರಿ ಕಿಟ್ ಪಡೆಯಲು ಅರ್ಹರಾಗುವುದಿಲ್ಲ. ಹಾಗಾಗಿ ಕಾಮಿರ್ಕ ಕಿಟ್ ಪಡೆಯದ ಕಾಮಿರ್ಕರ ಪಟ್ಟಿ ನೀಡಲು ಮನಸ್ಸು ಮಾಡಬೇಕು. ಕಿಟ್ ಪಡೆದ ಕಾಮಿರ್ಕರ ದತ್ತಾಂಶಗಳು ಇನ್ಮುಂದೆ ತಂತ್ರಾಂಶದಲ್ಲಿ ಅಳವಡಿಸುವುದರಿಂದ ಕಿಟ್ ವಿತರಣೆ ನಕಲು ಆಗುಲು ಸಾಧ್ಯವಿಲ್ಲ. ಹಾಗಾಗಿ ಅರ್ಹರ ಪಟ್ಟಿ ಇಲಾಖೆ ನೀಡಿದ ನಂತರವೇ ಕಿಟ್ ವಿತರಿಸಲಾಗುವುದು ಎಂದು ಏಜೆನ್ಸಿ ಪ್ರತಿಕ್ರಿಯಿಸಿದೆ.
ಜಿಲ್ಲೆಯಲ್ಲಿ ಕಾಮಿರ್ಕ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಕಾಮಿರ್ಕರಿಗೆ ವಿತರಿಸಲು ಖರೀದಿಸಿರುವ ಸುರಕ್ಷತಾ ಕಿಟ್ಗಳ ಗುಣಮಟ್ಟದ ಬಗ್ಗೆ ಗಂಭೀರ ಆರೋಪಗಳು ಬರುತ್ತಿವೆ. ಕಳಪೆ ಗುಣಮಟ್ಟದ ಸಾಮಗ್ರಿಗಳಿದ್ದು, ಕೆಲವೇ ದಿನಗಳಲ್ಲಿ ಹಾಳಾಗುವಂತಹ ಕಿಟ್ಗಳಿವೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ವೆಲ್ಡಿಂಗ್ ಕಾಮಿರ್ಕರಿಗೆ ಅಗತ್ಯ ಇರುವ ಮಾಸ್ಕ್ ೈಬರ್ ವಸ್ತುವಾಗಿದ್ದು, ಬೆಂಕಿ ಕಿಡಿಗೆ ಕರಗುವ ಸಾಧ್ಯ ಇದೆ. ಎದೆಗವಚ ಕೂಡ ಗುಣ್ಣಮಟ್ಟದ್ದಿಲ್ಲ. ಹೀಗಾಗಿ ಕಿಟ್ ವಿತರಣೆ ಆದರೂ ಬಹಳ ದಿನ ಬಾಳಿಕೆ ಬರಲು ಸಾಧ್ಯವಿಲ್ಲ ಎನ್ನಲಾಗಿದೆ. ಕಿಟ್ಗಳ ಖರೀದಿಯಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂಬ ಅನುಮಾನಗಳಿವೆ. ಕಡಿಮೆ ಬೆಲೆಯ ಹೆಸರಿನಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಖರೀದಿಸಲಾಗುತ್ತಿದೆ ಎಂಬ ಆರೋಪಗಳಿವೆ. ಟೆಂಡರ್ ಪಡೆದ ಕಂಪನಿಗಳು ನಿಯಮಗಳ ಪ್ರಕಾರ ಗುಣಮಟ್ಟದ ವಸ್ತುಗಳನ್ನು ಪೂರೈಸಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. 3.53 ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತೆ ಎಂದು ಕಾಮಿರ್ಕರು ಆರೋಪಿಸಿದ್ದಾರೆ.
ದೋಷಪೂರಿತ ವಸ್ತುಗಳನ್ನು ಹಿಂದಿರುಗಿಸಿ ಗುಣಮಟ್ಟದ ಹೊಸ ಕಿಟ್ಗಳ ವಿತರಣೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಗುಣಮಟ್ಟ ಪರೀಸುವ ಸಮಿತಿ ರಚನೆ ಮಾಡಿ, ಕಾಮಿರ್ಕ ಪ್ರತಿನಿಧಿಗಳು ಪರಿಶೀಲಿಸಲು ಅವಕಾಶ ನೀಡಬೇಕು.
ಮೆಹಬೂಬ್ಖಾನ್ ಪಠಾಣ, ಅಧ್ಯಕ್ಷ,
ಕಿಟ್ ವಿತರಣೆ ಪ್ರಕ್ರಿಯೆ ಕೇಂದ್ರ ಕಚೇರಿಯಿಂದ ಆಗುತ್ತದೆ. ಜಿಲ್ಲಾ ಕಚೇರಿಯಿಂದ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ಏಜೆನ್ಸಿ ಮೂಲಕ ಬಂದಿರುವ ಕಿಟ್ಗಳನ್ನು ನಾವು ಜಿಲ್ಲೆಯಲ್ಲಿ ಸ್ವೀಕರಿಸುತ್ತೇವೆ.
ಶ್ರೀಶೈಲ ಸೋಮನಕಟ್ಟಿ, ಜಿಲ್ಲಾ ಕಾಮಿರ್ಕ ಇಲಾಖೆ ಅಧಿಕಾರಿ