ಗದಗ ನಗರದ ಕನಕಭವನದಲ್ಲಿ ಏರ್ಪಡಿಸಿದ್ದ ಕನಕ ಸಾಹಿತ್ಯ ಸಂಭ್ರಮದ 100 ನೇ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಲಿಂಗದಳ್ಳಿ ಹಾಲಪ್ಪ ಉದ್ಘಾಟಿಸಿದರು. ರುದ್ರಣ್ಣ ಗುಳಗುಳಿ, ಮನಸೂರು ಶ್ರೀಗಳು, ಮಂಜುನಾಥ ಹೊನ್ನನವರ, ಡಾ. ಹನಮಗೌಡ ಪಾಟೀಲ, ಸುರೇಶ ಕೊಪ್ಪದ, ಕ್ಕೀರಪ್ಪ ಹೆಬಸೂರ, ವಾಸಣ್ಣ ಕುರಡಗಿ, ರವಿ ದಂಡಿನ, ಪ್ರಕಾಶ ಕರಿ, ರಾಜಶೇಖರ ಕಲ್ಲೂರ, ಡಿಡಿಪಿಐ ಆರ್​.ಎಸ್​. ಬುರಡಿ, ರಾಮಕೃಷ್ಣ ರೊಳ್ಳಿ, ನಿಂಗಪ್ಪ ಸವಣೂರ, ಮಹಾಂತೇಶ ನಿಟ್ಟಾಲಿ ಸೇರಿದಂತೆ ಇತರರು ಇದ್ದರು.  
ರಾಜ್ಯ

ಕನಕ ಸಾಹಿತ್ಯ ಸಂಭ್ರಮದ 100 ನೇ ಉಪನ್ಯಾಸ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಗದಗ
ಕನಕದಾಸರು ನೂರಾರು ದಾಶಿರ್ನಕರಲ್ಲಿ ಕನದಾಸರು ಎದ್ದು ಕಾಣುತ್ತಾರೆ. ಕನಕದಾಸರ ಸಾಹಿತ್ಯವು ಅವರ 500ನೆ ಜಯಂತಿವರೆಗೂ ಬೆಳಕಿಗೆ ಬಂದಿರಲಿಲ್ಲ ಎಂದು ಕನಕಶ್ರೀ ಪ್ರಶಸ್ತಿ ಪುರಸತ ಹಾಗೂ ಸಾಹಿತಿ ಡಾ.ಲಿಂಗದಳ್ಳಿ ಹಾಲಪ್ಪ ಹೇಳಿದರು.
ನಗರದ ಕನಕಭವನದಲ್ಲಿ ಸೋಮವಾರ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಆಯೋಜಿಸಿದ್ದ ಕನಕ ಸಾಹಿತ್ಯ ಸಂಭ್ರಮದ 100 ನೇ ಉಪನ್ಯಾಸದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕನಕದಾಸರ 500ನೇ ಜಯಂತಿವರೆಗೂ ಅವರ ಸಾಹಿತ್ಯದ ಬಗ್ಗೆ ಪ್ರಚಾರವಿರಲಿಲ್ಲ. ನಂತರ ಕನಕದಾಸರ ಕೀರ್ತನೆಗಳು, ಮುಂಡಿಗೆಗಳು ಬೆಳಕಿಗೆ ಬಂದವು ಎಂದು ಹೇಳಿದರು.
ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗ ಪ್ರೊ. ಎ್​. ಟಿ. ಹಳ್ಳಿಕೇರಿ ಮಾತನಾಡಿ, ಸಂಟನೆ ಶ್ರದ್ಧೆ, ಶ್ರಮದಿಂದ 100ನೇ ಮಾಲಿಕೆ ಸಾಧ್ಯವಾಗಿದೆ. ಗದಗ ಜಿಲ್ಲೆ ಹಾಲಮತ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. 1920ರಲ್ಲಿ ಲೆ$್ಮಶ್ವರ ತಾಲೂಕಿನ ಬಟ್ಟೂರಿನಲ್ಲಿ ಟ್ರೇನಿಂಗ ಸೆಂಟರ್​ ತೆರೆದಿದ್ದರು. ಹಾಲಮತ ಚರಿತ್ರೆಯನ್ನು ಬೆಳಿಕಿಗೆ ತಂದ ವಿ.ಆರ್​.ಹನಮಂತಯ್ಯ ಅವರನ್ನು ಹಾಲುಮತ ಪಿತಾಮಹ ಎಂದು ಕರೆಯಬಹುದು. ಕನ್ನಡ ವಿಶ್ವವಿದ್ಯಾಲಯ ಪುಸ್ತಕ ಪ್ರಕಟನೆ ಮಾಡಿದೆ. ಸಂತ ಪ್ರತಿಷ್ಠಾನ ಆರಂಭಸಲಾಗಿದೆ. ಸಾಹಿತ್ಯ, ಸಮಾಜ ಬೆಳವಣಿಗೆ ಡೊಳ್ಳಿನ ಹಾಡು ಸಂಗ್ರಹಿಸಿ ಸಂಪುಟ ಹೊರತರಬೇಕು. ಮನೆ ಮನೆಗೂ ಕನಕದಾಸರ ಸಾಹಿತ್ಯ ತಲುಪಿಸಬೇಕಾಗಿದೆ. ನಮ್ಮ ಆರಾಧ್ಯ ದೈವ ಬಗೆಗೆ ಹಲವು ಗೊಂದಲ ನಿವಾರಿಸಬೇಕಾಗಿದೆ. ಹಲವು ಕನಕ ಮಠಗಳಿಂದ ಪುಸ್ತಕ ಪ್ರಕಟಣೆ ಆಗಿವೆ. ಮುಂಬರುವ ದಿನಗಳಲ್ಲಿ ಒಟ್ಟಿಗೆ 10 ಪುಸ್ತಕ ಪ್ರಕಟಣೆ ರೂಪರೇಷ ಸಿದ್ದಪಡಿಸಲಾಗಿತ್ತು. ಹೆಚ್ಚೆಚ್ಚು ಇಂತಹ ಕಾರ್ಯಕ್ರಮ ಜೊತೆಗೆ ಹಾಲುಮತ ಸಾಹಿತ್ಯ, ಸಂಸತಿಯ ಪ್ರಕಟಣೆ ಪುಸ್ತಕಗಳನ್ನು ಓದುವದನ್ನು ರೂಢಿಸಕೊಳ್ಳಬೇಕು ಎಂದು ಹೇಳಿದರು.
ಪ್ರೊ. ಸುಧಾ ಕೌಜಗೇರಿ ಮಾತನಾಡಿ, ಕನಕದಾಸರ ಸಾಹಿತ್ಯ ೇತ್ರದಲ್ಲಿ ನತ್ರವಾಗಿ ಬೆಳೆದವರು. 12 ನೇ ಶತಮಾನದಲ್ಲಿ ಶರಣ ಸಾಹಿತ್ಯ ಬಂತು. ಕನಕದಾಸರ ಏಕಾಂಗಿಯಾಗಿ ಬೆಳೆದವರು. ಸಂತ, ಭಕ್ತ, ಕವಿ ಅಲ್ಲದೆ ಅವರೊಬ್ಬ ಮಹಾನ ಹೋರಾಟಗಾರರಾಗಿದ್ದಾರೆ. ಅವರ ಮುಂಡಿಗೆಗಳನ್ನು ಇವರೆಗೂ ಉತ್ತರಿಸಲು ಸಾದ್ಯವಾಗಿಲ್ಲ ಎಂದು ಹೇಳಿದರು.
ರುದ್ರಣ್ಣ ಗುಳಗುಳಿ ಮಾತನಾಡಿದರು. ಮನಸೂರು ಶ್ರೀಗಳು, ಮಂಜುನಾಥ ಹೊನ್ನನವರ, ಡಾ. ಹನಮಗೌಡ ಪಾಟೀಲ, ಸುರೇಶ ಕೊಪ್ಪದ, ಕ್ಕೀರಪ್ಪ ಹೆಬಸೂರ, ವಾಸಣ್ಣ ಕುರಡಗಿ, ರವಿ ದಂಡಿನ, ಪ್ರಕಾಶ ಕರಿ, ರಾಜಶೇಖರ ಕಲ್ಲೂರ, ಡಿಡಿಪಿಐ ಆರ್​.ಎಸ್​. ಬುರಡಿ, ರಾಮಕೃಷ್ಣ ರೊಳ್ಳಿ, ನಿಂಗಪ್ಪ ಸವಣೂರ, ಮಹಾಂತೇಶ ನಿಟ್ಟಾಲಿ ಸೇರಿದಂತೆ ಇತರರು ಇದ್ದರು.