ನಗರದ ಮಾಂಗಲ್ಯ ಮಂದಿರದಲ್ಲಿ ಏರ್ಪಡಿಸಿರು ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆಯಲ್ಲಿ ಕಾಶೀ ಜಗದ್ಗುರುಗಳು ಮಾತನಾಡಿದರು. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಸಂಗಮ್ಮ ಹಿರೇಮಠ, ಮಲ್ಲಿಕಾರ್ಜುನ ಸಂತೋಜಿ, ವೀರಣ್ಣ ಕರಿಬಿಷ್ಠಿ, ನಾಗನಗೌಡ ನಾಗಲಾಪೂರ, ಕಾಂಚನಾಮಾಲಾ ಬಾಳಿಹಳ್ಳಿಮಠ, ಮಾಲಕ್ಕ ಮಸಗಿ ಇತರರು ಇದ್ದರು. 
ರಾಜ್ಯ

ನಿಸ್ವಾರ್ಥ ಸೇವೆ, ಸಂಸ್ಕಾರಗಳಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ:ಕಾಶೀ ಜಗದ್ಗುರುಗಳು

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಇಂದಿನ ವೇಗದ ಬದುಕಿನಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಆತಂಕ, ನಿರಾಶೆ ಹಾಗೂ ಮೌಲ್ಯಗಳ ಕುಸಿತದ ನಡುವೆಯೇ ನಿಸ್ವಾರ್ಥ ಕರ್ಮ, ನಾಮಸ್ಮರಣೆ, ಧ್ಯಾನ ಮತ್ತು ಭಾರತೀಯ ಸಂಸ್ಕಾರದ ಅಳವಡಿಕೆಯಿಂದ ವ್ಯಕ್ತಿ ಹಾಗೂ ಸಮಾಜವನ್ನು ಸದೃಢಗೊಳಿಸಬಹುದು ಎಂದು ಕಾಶಿ ಜಂಗಮವಾಡಿಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಮಾಂಗಲ್ಯ ಮಂದಿರದಲ್ಲಿ ಗದಗ ಬೆಟಗೇರಿ ಪಂಚಾಚಾರ್ಯ ಸೇವಾ ಸಂದ ವತಿಯಿಂದ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆ ಹಾಗೂ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಧರ್ಮವೆಂದರೆ ಕೇವಲ ಆಚರಣೆ ಅಲ್ಲ. ಅದು ಮಾನವೀಯತೆ, ನಿಸ್ವಾರ್ಥ ಸೇವೆ ಮತ್ತು ಆತ್ಮೋನ್ನತಿಯ ಮಾರ್ಗವಾಗಿದೆ. ಲಾಪೇೆ ಇಲ್ಲದೆ ಕರ್ತವ್ಯ ನಿರ್ವಹಿಸಿದಾಗ ಬದುಕು ಸಾರ್ಥಕ ಆಗುತ್ತದೆ. ದೇವರ ನಾಮಸ್ಮರಣೆ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೀಡುತ್ತದೆ. ಜೀವನದಲ್ಲಿ ಎದುರಾಗುವ ವೈಲ್ಯಗಳು ಅಂತ್ಯವಲ್ಲ. ಅವುಗಳನ್ನು ಆತ್ಮಬಲದಿಂದ ಎದುರಿಸಬೇಕು ಎಂದು ಹೇಳಿದರು.
ಇಂದಿನ ಯುವಜನರಲ್ಲಿ ಹಾಗೂ ಮಕ್ಕಳಲ್ಲಿ ಮಾನಸಿಕ ಒತ್ತಡ, ಖಿನ್ನತೆ, ಏಕಾಗ್ರತೆಯ ಕೊರತೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪೋಷಕರು ಮಕ್ಕಳಿಗೆ ಪ್ರತಿದಿನ ಕೆಲವೇ ನಿಮಿಷಗಳಾದರೂ ಧ್ಯಾನ, ಪ್ರಾರ್ಥನೆ ಹಾಗೂ ನಾಮಸ್ಮರಣೆಯ ಅಭ್ಯಾಸ ಬೆಳೆಸಬೇಕು. ಆಧುನಿಕ ಶಿಣದ ಜೊತೆಗೆ ಭಾರತೀಯ ಸಂಸತಿ, ನೈತಿಕ ಮೌಲ್ಯಗಳು ಮತ್ತು ಉತ್ತಮ ಸಂಸ್ಕಾರಗಳನ್ನು ಕಲಿಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಧ್ಯಾನ ಮತ್ತು ಆಧ್ಯಾತ್ಮಿಕ ಸಾಧನೆ ಮನೋಬಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದರೂ, ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯನ್ನೂ ನಿರ್ಲಸಬಾರದು. ವಿಶೇಷವಾಗಿ ಮಹಿಳಾ ಮಂಡಳಿಯವರು ಭಜನೆ, ಆರತಿ ಹಾಗೂ ಮಹಾಪೂಜೆಯ ಗಾಯನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಧಾಮಿರ್ಕ ಪರಂಪರೆಯ ಸಂರಣೆಯಲ್ಲಿ ಪ್ರಮುಖ ಪಾತ್ರವಹಿಸಬೇಕು. ಮುಂದಿನ ವರ್ಷದೊಳಗೆ ಗದುಗಿನ ಮಹಿಳಾ ಮಂಡಳಿ ಇಷ್ಟಲಿಂಗ ಮಹಾಪೂಜೆಯ ಸಂದರ್ಭದಲ್ಲಿ ಭಜನೆ, ಆರತಿ ಹಾಗೂ ಮಹಾಪೂಜೆಯ ಸಂಗೀತ ಗಾಯನವನ್ನು ಕರಗತ ಮಾಡಿಕೊಳ್ಳಬೇಕು ಎಂದರು.
ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾದುದು ನಿಸ್ವಾರ್ಥ ಸೇವಾಭಾವ ಆಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ, ಕುಟುಂಬದಲ್ಲಿ ಉತ್ತಮ ಸಂಸ್ಕಾರ, ಮಕ್ಕಳಲ್ಲಿ ಧ್ಯಾನ ಮತ್ತು ನಾಮಸ್ಮರಣೆಯ ಅಭ್ಯಾಸ ಹಾಗೂ ಆಧುನಿಕ ಶಿಣದೊಂದಿಗೆ ಭಾರತೀಯ ಮೌಲ್ಯಗಳ ಸಮನ್ವಯ, ವ್ಯಕ್ತಿಯ ಆಂತರಿಕ ಶಾಂತಿ ಮತ್ತು ನೈತಿಕ ಬದುಕೇ ಆರೋಗ್ಯವಂತ ಕುಟುಂಬ ಹಾಗೂ ಸದೃಢ ಸಮಾಜ ನಿರ್ಮಾಣದ ಅಡಿಪಾಯ ಎಂದರು.
ನರೇಗಲ್​ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮ್ಮ ಹಿರೇಮಠ, ಮಲ್ಲಿಕಾರ್ಜುನ ಸಂತೋಜಿ, ವೀರಣ್ಣ ಕರಿಬಿಷ್ಠಿ, ನಾಗನಗೌಡ ನಾಗಲಾಪೂರ, ಕಾಂಚನಾಮಾಲಾ ಬಾಳಿಹಳ್ಳಿಮಠ, ಮಾಲಕ್ಕ ಮಸಗಿ, ಸಿ. ಜಿ. ಅಬ್ಬಿಗೇರಿಮಠ, ಬಸವರಾಜ ಕೂಗು, ಮಲ್ಲಿಕಾರ್ಜುನ ಐಲಿ, ಕುಬೇರಗೌಡ ಪರ್ವತಗೌಡರ, ಉಮೇಶ ಭೂಸ್ತ, ಬಸವಣ್ಣೆಪ್ಪ ಪುರದ, ಡಾ. ಎಸ್​. ಎ್​. ವರವಿ, ಸುರೇಶ ಶೆಟ್ಟರ, ಮಲ್ಲಣ್ಣ ಸಿಕ್ಕೇದೇಸಾಯಿ, ಕ್ಕೀರಯ್ಯಶಾಸ್ತ್ರೀ ಹಿರೇಮಠ, ಸಂತೋಷ ತೋಟಗಂಟಿಮಠ, ಪ್ರಭು ದಂಡಾವತಿಮಠ, ಸಿದ್ಧಲಿಂಗಪ್ಪ ಚಳಗೇರಿ, ಅನೀಲ ಅಬ್ಬಿಗೇರಿ, ಗುರುಸಿದ್ಧಯ್ಯ ಹಿರೇಮಠ ಇತರರು ಇದ್ದರು.