ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆ.ಎಚ್. ಪಾಟೀಲ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು.
ಜಿಲ್ಲೆಯಲ್ಲಿ ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗಳನ್ನು ರೈತರ ಪಾಲುದಾರಿಕೆಯಲ್ಲಿ ಜಾರಿಗೆ ತಂದರೆ ಜಿಲ್ಲೆಯ ರೈತರಿಗೆ ದೊಡ್ಡ ಆಥಿರ್ಕ ಲಾಭವಾಗಲಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆ.ಎಚ್. ಪಾಟೀಲ ಅವರ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಹೊಲಗಳಲ್ಲಿ ಗಾಳಿಯಂತ್ರ ಸ್ಥಾಪನೆ ಮಾಡಿದಲ್ಲಿ ರೈತರಿಗೆ ಅದರ ಆದಾಯದಲ್ಲಿ ಪಾಲು ನೀಡುವ ವ್ಯವಸ್ಥೆ ಮಾಡಬೇಕು. ಉತ್ಪಾದನೆಯಾಗುವ ವಿದ್ಯುತ್ ಆದಾಯದಲ್ಲಿ ರೈತರಿಗೆ ಶೇಕಡಾವಾರು ಪಾಲು ನೀಡಿದರೆ ಅವರ ಆಥಿರ್ಕ ಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆಯಯಲ್ಲಿ ರೈತರಿಗೆ ಪಾಲು ನೀಡುವ ಯೋಜನೆಗಳು ಹೊಸದೇನಲ್ಲ. ಕೆಲವು ಕಡೆಗಳಲ್ಲಿ ರೈತರಿಗೆ ವಿದ್ಯುತ್ ಉತ್ಪಾದನೆಯ ಆದಾಯದಲ್ಲಿ ಸುಮಾರು 5.08 ಶೇಕಡಾ ಪಾಲು ನೀಡುವ ಮಾದರಿ ಜಾರಿಗೆ ಬಂದಿದೆ. ಯೋಜನೆ ರ್ಪೂಣಗೊಂಡ ನಂತರ ಭೂಮಿಯನ್ನು ರೈತರಿಗೆ ಮರಳಿಸುತ್ತಾರೆ. ನಮ್ಮ ಗ್ರಾಮದಲ್ಲಿ ಸುಮಾರು 70 ಜನರು ರೈತರು ಈ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ. ಇಂತಹ ಯೋಜನೆಗಳು ರೈತರಿಗೆ ಆಥಿರ್ಕ ಭದ್ರತೆ ಒದಗಿಸುತ್ತವೆ ಎಂದು ಹೇಳಿದರು.
ಈ ಯೋಜನೆ ಜಾರಿಯಾದರೆ ಗದಗ ಜಿಲ್ಲೆಯ ರೈತರಿಗೆ ಹೊಸ ಆದಾಯದ ಮಾರ್ಗ ದೊರೆಯಲಿದೆ. ರೈತರು ಪಾಲುದಾರರಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದರೆ ಅದು ರೈತ ಸಮುದಾಯಕ್ಕೆ ದೊಡ್ಡ ನೆರವಾಗಲಿದೆ ಎಂದು ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ. ಜೆ. ಜಾರ್ಜ ಅವರು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚಚಿರ್ಸುವುದಾಗಿ ಹೇಳಿದರು.